ಪ್ರತಿದಿನ ಒಂದು ಗಂಟೆ ದೇಹ ದಂಡನೆಗೆ ಮೀಸಲಿಟ್ಟರೆ ದಿನದ ೨೩ ಗಂಟೆ ಕೆಲಸ ಮಾಡಲು ಸಾಧ್ಯವಾಗುತ್ತದೆ. ಮಾನಸಿಕವಾಗಿ ದೇಹ ಸದೃಢವಾಗಿದ್ದರೆ ಮಾತ್ರ ನಾವು ಮಾಡುವ ಕೆಲಸದಲ್ಲಿ ಸದೃಢತೆ ಕಾಪಾಡಿಕೊಳ್ಳಲು ಸಾಧ್ಯ. ಆದ್ದರಿಂದ ಒಳ್ಳೆಯ ಅಭ್ಯಾಸ, ಅಭಿರುಚಿ, ಮನುಷ್ಯನ ಬದುಕಿಗೆ ಬಹಳ ಅವಶ್ಯಕವಾಗಿ ಬೇಕಾಗಿರುತ್ತದೆ .

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರತಿಯೊಬ್ಬರೂ ಕ್ರೀಡೆಯನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕು. ಇದರಿಂದ ಸದೃಢ ಆರೋಗ್ಯ, ಕ್ರೀಡೆಯಲ್ಲಿ ಸಾಧನೆಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಪಿಇಟಿ ಕ್ರೀಡಾಂಗಣದಲ್ಲಿ ವಕೀಲರ ಸಂಘ, ಹೊಂಬೇಗೌಡ ಮೆಮೋರಿಯಲ್ ಅಡ್ವೋಕೇಟ್ ರಿಕ್ರಿಯೇಷನ್ ಕ್ಲಬ್, ವಕೀಲರ ವಿವಿಧೋದ್ದೇಶ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವಕೀಲರ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ನ್ಯಾಯಾಧೀಶರು ಹಾಗೂ ವಕೀಲರು ನಿತ್ಯ ಕೋರ್ಟ್‌ನಲ್ಲಿ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಒತ್ತಡದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಅದೇ ರೀತಿ ದೇಹಕ್ಕೂ ಹೆಚ್ಚು ಕೆಲಸ ಕೊಡಬೇಕು ಎಂದು ಹೇಳಿದರು.

ಪ್ರತಿದಿನ ಒಂದು ಗಂಟೆ ದೇಹ ದಂಡನೆಗೆ ಮೀಸಲಿಟ್ಟರೆ ದಿನದ ೨೩ ಗಂಟೆ ಕೆಲಸ ಮಾಡಲು ಸಾಧ್ಯವಾಗುತ್ತದೆ. ಮಾನಸಿಕವಾಗಿ ದೇಹ ಸದೃಢವಾಗಿದ್ದರೆ ಮಾತ್ರ ನಾವು ಮಾಡುವ ಕೆಲಸದಲ್ಲಿ ಸದೃಢತೆ ಕಾಪಾಡಿಕೊಳ್ಳಲು ಸಾಧ್ಯ. ಆದ್ದರಿಂದ ಒಳ್ಳೆಯ ಅಭ್ಯಾಸ, ಅಭಿರುಚಿ, ಮನುಷ್ಯನ ಬದುಕಿಗೆ ಬಹಳ ಅವಶ್ಯಕವಾಗಿ ಬೇಕಾಗಿರುತ್ತದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಸಿಇಒ ಕೆ.ಆರ್. ನಂದಿನಿ, ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಜೆ.ಎನ್. ಸುಬ್ರಮಣ್ಯ, ನ್ಯಾಯಾಧೀಶರಾದ ಸೈಯದ್ ಉನ್ನಿಸಾ, ಯಾದವ್ ಶಿವಪ್ರಸಾದ್, ವೆಂಕಟೇಶ್, ವಕೀಲರ ಸಂಘದ ಅಧ್ಯಕ್ಷ ಟಿ.ಎಸ್. ಸತ್ಯಾನಂದ, ಕಾರ್ಯದರ್ಶಿ ಸತೀಶ್, ಹೊಂಬೇಗೌಡ ಮೆಮೋರಿಯಲ್ ಕ್ಲಬ್ ಅಧ್ಯಕ್ಷ ಸಿ.ಎಲ್.ಶಿವಕುಮಾರ್ ಇತರರಿದ್ದರು.