ಚೆಕ್‌ಪೋಸ್ಟ್‌ನಲ್ಲಿ ಲೋಪವಾಗದಂತೆ ನೋಡಿಕೊಳ್ಳಿ

| Published : Mar 29 2024, 12:46 AM IST

ಸಾರಾಂಶ

ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ತಾಲೂಕಿನ ಹಿಂಗಣಿ, ಅಗರಖೇಡ ಚೆಕ್‌ಪೋಸ್ಟ್‌ ಹಾಗೂ ಹಿಂಗಣಿ ಬ್ಯಾರೇಜ್‌ ಹಾಗೂ ಇಂಡಿ ಪಟ್ಟಣದ ಆದರ್ಶ ಶಾಲೆಯಲ್ಲಿರುವ ಸ್ಟ್ರಾಂಗ್‌ ರೂಮ ಹಾಗೂ ಮಿನಿ ವಿಧಾನಸೌಧದಲ್ಲಿರುವ ಸಹಾಯಕ ಚುನಾವಣಾಧಿಕಾರಿ ಕೊಠಡಿ ಹಾಗೂ ಆದರ್ಶ ಶಾಲೆಯಲ್ಲಿ ನಡೆದ ಮೌಲ್ಯಾಂಕನ ಪರೀಕ್ಷೆಯನ್ನು ಸಹ ಜಿಲ್ಲಾಧಿಕಾರಿ ಟಿ.ಬೂಪಾಲನ್‌ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಸೋನಾವನೆ, ಎಸಿ ಅಬೀದ್‌ ಗದ್ಯಾಳ ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಇಂಡಿ

ಚೆಕ್‌ಪೋಸ್ಟ್‌ದಲ್ಲಿ ಕರ್ತವ್ಯ ಲೋಪವಾಗದಂತೆ ಜಾಗರೂಕತೆಯಿಂದ ಮಾಡಬೇಕು. ವಾಹನಗಳನ್ನು ಕಣ್ಗಾವಳಿನ ಮೂಲಕ ತಪ್ಪಿಸಿಕೊಳ್ಳದಂತೆ, ಪ್ರತಿಯೊಂದು ವಾಹನದ ಮೇಲೆ ಕಣ್ಣಿಟ್ಟು ಕಟ್ಟುನಿಟ್ಟಾಗಿ ವಾಹನ ತಪಾಸಣೆ ಮಾಡಬೇಕು ಎಂದು ಅಗತ್ಯ, ಸಲಹೆ ಸೂಚನೆಗಳನ್ನು ನೀಡಿದರು. ಪ್ರತಿ ವಾಹನಗಳನ್ನು ತಪಾಸಣೆ ಮಾಡಬೇಕು. ಯಾವುದೇ ವಾಹನವನ್ನು ಹಾಗೆ ಬಿಡುವಂತಿಲ್ಲ. ವಾಹನಗಳ ತಪಾಸಣೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಲ್ಲಿಯೂ ಲೋಪವಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಚೆಕ್‌ಪೋಸ್ಟ್‌ ಸಿಬ್ಬಂದಿಗೆ ಸೂಚನೆ ನೀಡಿದರು.

ಹಿಂಗಣಿ ಬಾಂದಾರ ಮಹಾರಾಷ್ಟ್ರ ರಾಜ್ಯವನ್ನು ಸಂದಿಸುತ್ತಿರುವುದರಿಂದ ಮಹಾರಾಷ್ಟ್ರದ ವಾಹನಗಳು ಕರ್ನಾಟಕ್ಕೆ ಬರುವುದನ್ನು ಗಮನಿಸಬೇಕು. ಯಾವುದೇ ವಾಹನ ಇದ್ದರೂ ತಪಾಸಣೆ ಮಾಡದೇ ಬಿಡುವಂತಿಲ್ಲ ಎಂದು ಸೂಚಿಸಿದರು. ಅಗರಖೇಡ ಚೆಕ್‌ಪೋಸ್ಟ್‌ ರಾಜ್ಯ ಹೆದ್ದಾರಿಯಲ್ಲಿ ಇರುವುದರಿಂದ ಈ ರಸ್ತೆಯ ಮೂಲಕ ಮಹಾರಾಷ್ಟ್ರ ಹಾಗೂ ಕಲಬುರಗಿ ಜಿಲ್ಲೆಗಳಿಂದ ವಿಜಯಪುರ ಜಿಲ್ಲೆಗೆ ಬರುವುವರಿಂದ ವಾಹನಗಳ ಮೇಲೆ ಹದ್ದಿನ ಕಣ್ಣು ಇಡಬೇಕು ಎಂದರು.

ಆದರ್ಶ ಶಾಲೆಯಲ್ಲಿ ಇರುವ ಸ್ಟ್ರಾಂಗ್‌ ರೂಮ್‌ ಹಾಗೂ ಸಹಾಯಕ ಚುನಾವಣಾಧಿಕಾರಿ ಕೋಣೆ ಪರಿಶೀಲಿಸಿ ಅಚ್ಚುಕಟ್ಟಾಗಿ ಚೆನ್ನಾಗಿ ಮಾಡಲಾಗಿದೆ ಎಂದು ತಿಳಿಸಿದರು.

ಈ ವೇಳೆ ಡಿವೈಎಸ್ಪಿ ಜಗದೀಶ, ತಹಸೀಲ್ದಾರ್‌ ಮಂಜುಳಾ ನಾಯಕ, ತಾಪಂ ಇಒ ನೀಲಗಂಗಾ, ಕಂದಾಯ ನಿರೀಕ್ಷಕ ಎಚ್‌.ಎಚ್.ಗುನ್ನಾಪೂರ ಸೇರಿದಂತೆ ಚುನಾವಣಾ ಅಧಿಕಾರಿಗಳು ಇದ್ದರು.