ಸಾರಾಂಶ
ಚನ್ನಮ್ಮನ ಕಿತ್ತೂರು ತಾಲೂಕಿನ ಯಾವುದೇ ಗ್ರಾಮಗಳಲ್ಲಿ ಯಾವುದೇ ಕಾಮಗಾರಿಗಳಾಗಲಿ ಹಾಗೂ ಸರ್ಕಾರಿ ಕೆಲಸಗಳಾಗಲಿ ಕುಂಠಿತಗೊಳ್ಳಬಾರದೆಂದು ಜಿಪಂ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡುಗುಂಟಿ ಹೇಳಿದರು.
ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ತಾಲೂಕಿನ ಯಾವುದೇ ಗ್ರಾಮಗಳಲ್ಲಿ ಯಾವುದೇ ಕಾಮಗಾರಿಗಳಾಗಲಿ ಹಾಗೂ ಸರ್ಕಾರಿ ಕೆಲಸಗಳಾಗಲಿ ಕುಂಠಿತಗೊಳ್ಳಬಾರದೆಂದು ಜಿಪಂ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡುಗುಂಟಿ ಹೇಳಿದರು.ಪಟ್ಟಣದಲ್ಲಿರುವ ತಾಲೂಕು ಪಂಚಾಯತಿಗೆ ಭೇಟಿ ನೀಡಿ ಲೆಕ್ಕಪತ್ರ ಹಾಗೂ ಕಡತಗಳನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಈ ವೇಳೆ ತಾಲೂಕಿನ ತುರಮರಿ, ಹಣಶೀಕಟ್ಟಿಯ ಗ್ರಾಪಂಗೆ ಭೇಟಿ ನೀಡಿ ಸ್ವಚ್ಛತೆ ಸೇರಿದಂತೆ ಮೂಲ ಸೌಕರ್ಯಗಳ ಪರಿಶೀಲನೆ ನಡೆಸಿದರು. ಇಲ್ಲಿಯ ಸರ್ಕಾರಿ ಹಿರಿಯ ಪ್ರೌಢಶಾಲೆಗೆ ಭೇಟಿ ನೀಡಿ ಸ್ವಚ್ಛತೆಯ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ ಅವರು, ತುರಮರಿ ಪ್ರೌಢಶಾಲೆಯ ಆವರಣದಲ್ಲಿ ಸ್ವಚ್ಛತೆ ಇಲ್ಲದ ಕಾರಣ, ಶಿಕ್ಷಕರಿಗೆ ತರಾಟೆ ತೆಗೆದುಕೊಂಡು ಸ್ವಚ್ಛತೆಗೆ ಆದ್ಯತೆ ನೀಡುವಂತೆ ತಿಳಿಸಿದರು.ತಾಪಂ ಇಒ ಕಿರಣ ಘೋರ್ಪಡೆ, ಜಿಪಂ ಸಿಬ್ಬಂದಿ ಶಶಿಕಾಂತ ನೇಸರಗಿ, ಸುವರ್ಣ ಮಹೇಂದ್ರಕರ ಹಾಗೂ ಪಿಡಿಒಗಳು ಇದ್ದರು.