ಸಾರಾಂಶ
ಬೀರೂರು, ಎಲ್ಲಾ ವರ್ಗದ ಜನರು ಸೌಹಾರ್ಧತೆಗೆ ಜಿಲ್ಲೆಯಲ್ಲೇ ಹೆಸರು ಗಳಿಸಿರುವ ಬೀರೂರು ಪಟ್ಟಣದಲ್ಲಿ ಪಂಚಪೀಠಾಧೀಶ್ವರ ಅಡ್ಡಪಲ್ಲಕ್ಕಿ ಮಹೋತ್ಸವವನ್ನು ಯಾವ ಲೋಪಗಳು ಆಗದಂತೆ ಯಶಸ್ವಿಯಾಗಿ ಆಚರಿಸಿ ಇತಿಹಾಸದ ಪುಟಗಳಲ್ಲಿ ಸೇರಿಸೋಣ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ಮಾಜಿ ಶಾಸಕ ಹಾಗೂ ಶಿವಾನಂದಾಶ್ರಮ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಕೆ.ಬಿ.ಮಲ್ಲಿಕಾರ್ಜುನ ತಿಳಿಸಿದರು.
- ಶ್ರೀ ವೀರಭದ್ರೇಶ್ವರಸ್ವಾಮಿ ದೇಗುಲದಲ್ಲಿ ನಡೆದ ಪೂರ್ವಭಾವಿ ಕೊನೆ ಸಭೆ: ಹಬ್ಬದ ವಾತವರಣ ಸೃಷ್ಠಿಸುವಂತೆ ತೀರ್ಮಾನ
ಕನ್ನಡಪ್ರಭ ವಾರ್ತೆ, ಬೀರೂರು.ಎಲ್ಲಾ ವರ್ಗದ ಜನರು ಸೌಹಾರ್ಧತೆಗೆ ಜಿಲ್ಲೆಯಲ್ಲೇ ಹೆಸರು ಗಳಿಸಿರುವ ಬೀರೂರು ಪಟ್ಟಣದಲ್ಲಿ ಪಂಚಪೀಠಾಧೀಶ್ವರ ಅಡ್ಡಪಲ್ಲಕ್ಕಿ ಮಹೋತ್ಸವವನ್ನು ಯಾವ ಲೋಪಗಳು ಆಗದಂತೆ ಯಶಸ್ವಿಯಾಗಿ ಆಚರಿಸಿ ಇತಿಹಾಸದ ಪುಟಗಳಲ್ಲಿ ಸೇರಿಸೋಣ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ಮಾಜಿ ಶಾಸಕ ಹಾಗೂ ಶಿವಾನಂದಾಶ್ರಮ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಕೆ.ಬಿ.ಮಲ್ಲಿಕಾರ್ಜುನ ತಿಳಿಸಿದರು.ಬೀರೂರು ಪಟ್ಟಣದ ಶ್ರೀ ವೀರಭದ್ರಸ್ವಾಮಿ ದೇವಾಲಯದಲ್ಲಿ ನ.2 ಮತ್ತು 3ರಂದು ಬೀರೂರು ನಡೆಯಲಿರುವ ಅಡ್ಡಪಲ್ಲಕ್ಕಿ ಮಹೋತ್ಸವದ ನಿರ್ವಾಹಕ ಸಮಿತಿ ಪೂರ್ವಭಾವಿ ಸಭೆಯಲ್ಲಿ ಭಾನುವಾರ ಮಾತನಾಡಿದರು. ಕಾರ್ಯಕ್ರಮವನ್ನು ಎಲ್ಲಾ ಭಕ್ತಾಧಿಗಳು ಶ್ರದ್ಧಾ ಭಕ್ತಿಯಿಂದ ಮಾಡಿದಾಗ ಮಾತ್ರ ಅದರ ಶ್ರೇಯಸ್ಸು ನಮ್ಮೆಲ್ಲರಿಗೂ ದೊರೆಯುತ್ತದೆ. ಮಹತ್ತರ ಕಾರ್ಯಕ್ರಮಗಳು ಯಶಸ್ಸು ಕಾಣುವಲ್ಲಿ ಪರಸ್ಪರ ಹೊಂದಾಣಿಕೆ ಮತ್ತು ಸಹಕಾರ ಪ್ರಮುಖ ವಾಗುತ್ತದೆ. ಇದು ಬೀರೂರು ಪಟ್ಟಣದ ಗೌರವ ಹೆಚ್ಚಿಸುವ ಕಾರ್ಯಕ್ರಮವಾಗಬೇಕು. ಪರಸ್ಥಳಗಳಿಂದ ಬರುವ ಭಕ್ತರಿಗೆ ನಮ್ಮ ಊರಿನ ಜನರು ಸೌಕರ್ಯ ಕಲ್ಪಿಸುವಲ್ಲಿ ನೆರವಾಗಬೇಕು. ಎಲ್ಲರೂ ಹೆಗಲು ಕೊಟ್ಟು ಉತ್ಸವ ಮುನ್ನಡೆಯುವಂತೆ ಗುರುಕಾರುಣ್ಯಕ್ಕೆ ಪಾತ್ರರಾಗಲು ಹಿಂಜರಿಯದೆ, ನಾವೇ ಮುಂದಿರಬೇಕು ಎನ್ನುವ ಅಹಂ ತೋರದೆ ನಿಮ್ಮ ನಿರಂತರ ಭಕ್ತಿ ಯನ್ನು ಮೆರೆಯಿರಿ. ಜೊತೆಗೆ ಇನ್ನಳಿದ 21ಕ್ಕೂ ಹೆಚ್ಚಿನ ಶಿವಾಚಾರ್ಯರು ಬಂದರೆ ಅವರಿಗೆ ಗೌರವಯುತವಾಗಿ ಕಂಡು ಪುರಸ್ಕರಿಸಿ ಗೌರವಿಸಿದರೆ ಕಾರ್ಯಕ್ರಮಕ್ಕೆ ಮೆರುಗು ಬರಲಿದೆ ಎಂದು ಮನವಿ ಮಾಡಿದರು.ದಿವ್ಯ ಸಾನಿಧ್ಯ ವಹಿಸಿದ್ದ ಬೀರೂರು ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗುರುವಿನ ಬಗ್ಗೆ ಭಕ್ತರ ಭಕ್ತಿ ಮತ್ತು ಪ್ರೀತಿಯೇ ಶಕ್ತಿಯಾಗಿದ್ದು ಪಂಚಪೀಠಾಧೀಶರ ಅಡ್ಡಪಲ್ಲಕ್ಕಿ ಮಹೋತ್ಸವದ ಸಂಪೂರ್ಣ ಯಶಸ್ಸಿಗೆ ಎಲ್ಲರೂ ಸಹಕರಿಸುವ ಆಶಯವಿದೆ. ಪಂಚಪೀಠಾಧೀಶರ ಅಡ್ಡ ಪಲ್ಲಕ್ಕಿ ಉತ್ಸವ ಹಾಗೂ ಶ್ರೀಚೌಡೇಶ್ವರಿ ಅಮ್ಮನವರ ದೇವಾಲಯ ಉದ್ಘಾಟನೆ, ಮಂಗಲ ಮಂದಿರ ಪ್ರವೇಶ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಯಾವುದೇ ರೀತಿ ಕುಂದುಕೊರತೆಗಳು ಉಂಟಾಗದಂತೆ ಊರಿನ ಭಕ್ತರು ಮತ್ತು ಸಮಿತಿಯವರು ನಿಗಾವಹಿಸಬೇಕು. ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯುವಂತೆ ಹಿಂದಿನ ಹಲವಾರು ಸಭೆಗಳಲ್ಲಿ ನಿರ್ದೇಶನ ನೀಡಿ ಸಮಿತಿಗಳನ್ನು ರಚಿಸಲಾಗಿದೆ. ಅದರಂತೆ ಈ ಮಹೋತ್ಸವವನ್ನು ಧರ್ಮಜಾಗೃತಿ ಮತ್ತು ಸಂಪ್ರದಾಯ ರಕ್ಷಣೆ ಕಾರ್ಯಕ್ರಮವಾಗಿಸುವಲ್ಲಿ ಎಲ್ಲರೂ ಕೈ ಜೋಡಿಸುವಂತೆ ಸಲಹೆ ನೀಡಿದರು.ಬೆಂಗಳೂರು ವೀರಶೈವ ಸದ್ಭೋಧನಾ ಸಂಸ್ಥೆ ಬೆಂಗಳೂರು ಘಟಕದ ಅಧ್ಯಕ್ಷ ಶಿವಸ್ವಾಮಿ ಮಾತನಾಡಿ, ಇದು ವೀರಶೈವ ಲಿಂಗಾಯತ ಸಮಾಜ ಮಾತ್ರವಲ್ಲದೆ ನಾಡಿಗೇ ವಿಶ್ವಶಾಂತಿ ಸಂದೇಶ ನೀಡುವ ಅರ್ಥಪೂರ್ಣ ಕಾರ್ಯಕ್ರಮವಾಗಲು ಎಲ್ಲರೂ ದುಡಿಯೋಣ. ಬೀರೂರಿನ ಇತಿಹಾಸದಲ್ಲಿ ಸುವರ್ಣ ಘಳಿಗೆಯಾಗಿ ಮೂಡಿಬರಲು ಶ್ರಮಿಸೋಣ ಎಂದರು.ಬೀರೂರು ಸಿಪಿಐ ಎಸ್.ಎನ್.ಶ್ರೀಕಾಂತ್ ಮಾತನಾಡಿ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ ಬಂದೋಬಸ್ತ್ ಮಾಡುತ್ತಿದ್ದರೂ ಸ್ವಯಂ ಸೇವಕರ ಅಗತ್ಯವೂ ಇದೆ. ಕಡೂರು ಕಡೆಯಿಂದ ಬರುವವರಿಗೆ ಬೀರೂರಿನ ತರಳಬಾಳು ಕಲ್ಯಾಣಮಂದಿರ, ಉತ್ಸವ ಹೊರಟ ನಂತರ ಕೆಎಲ್ಕೆ ಮೈದಾನದಲ್ಲಿ, ಅಜ್ಜಂಪುರ ಕಡೆಯಿಂದ ಬರುವವರಿಗೆ ಮಹಾನವಮಿ ಬಯಲು ಮತ್ತು ಎಸ್ಜೆಎಂ ವಿದ್ಯಾಸಂಸ್ಥೆಯ ಆವರಣ, ತರೀಕೆರೆ ಕಡೆಯಿಂದ ಬರುವವರಿಗೆ ವಾಸವಿ ಶಾಲೆ ಎದುರು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರು ತಮ್ಮ ಆಭರಣ, ಮೊಬೈಲ್ ಮತ್ತು ಪಿಕ್ಪಾಕೆಟ್ ಬಗ್ಗೆ ನಾಗರಿಕರು ಎಚ್ಚರವಾಗಿರಬೇಕು ಎಂದು ತಿಳಿಸಿದರು. ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಎಚ್.ಎಂ.ಲೋಕೇಶ್, ಕಡೂರು ತಾಲೂಕು ಅಧ್ಯಕ್ಷ ಸಾಣೇಹಳ್ಳಿ ರೇಣುಕಾರಾಧ್ಯ,ಉತ್ಸವ ಸಮಿತಿ ಅಧ್ಯಕ್ಷ ಎನ್.ದೇವರಾಜ್, ಉಪಾಧ್ಯಕ್ಷ ಬಿ.ಆನಂದಶೆಟ್ಟಿ, ಮಹಿಳಾ ಸಮಾಜದ ಎಂ.ಎಚ್. ನಿರ್ಮಲಾ, ಬಿ.ಪಿ.ನಾಗರಾಜ್, ಎಸ್.ರಮೇಶ್ ಸೇರಿದಂತೆ ಮತ್ತಿತರು ಮಾತನಾಡಿದರು.ಮಾಲಿ ಸ್ಲೀಪರ್ಸ್ ವ್ಯವಸ್ಥಾಪಕ ವೆಂಕಟೇಶ್.ಜಿ. ಒಡೆಯರ್, ವಿಶ್ವಕರ್ಮ ಸಮಾಜದ ಎಂ.ಪಿ.ವಿಶ್ವೇಶ್ವರಾಚಾರ್, ಎಚ್.ಸಿ. ರೇವಣಸಿದ್ದಪ್ಪ, ತರೀಕೆರೆ ಗಿರೀಶ್, ಗಂಗಧರಯ್ಯ, ಸಿ.ಮಲ್ಲಿಕಾರ್ಜುನ್, ಎಸ್.ಎನ್.ಕುಮಾರಶಾಸ್ತ್ರಿ, ಕೆ.ಎಸ್.ಸಂಪತ್ ಕುಮಾರ್, ಎಂ.ವಿ.ರುದ್ರೇಶ್, ಗುತ್ತಿಗೆದಾರ ಜಿ.ಪಿ.ನವೀನ್, ಎಂ.ವಿ. ರುದ್ರೇಶ್, ಮುಂಡ್ರೆ ಗಿರೀಶಯ್ಯ, ಶಿವಸ್ವಾಮಿ, ಜಗದ್ಗುರು ರೇಣುಕ ಸಾಂಸ್ಕೃತಿಕ ಸಂಘ, ಶಿವಾನಂದಾಶ್ರಮ ಟ್ರಸ್ಟ್ ಪದಾಧಿಕಾರಿಗಳು, ಭಕ್ತರು ಪಾಲ್ಗೊಂಡರು.26 ಬೀರೂರು 1 ಬೀರೂರು ಪಟ್ಟಣದ ಶ್ರೀವೀರಭದ್ರಸ್ವಾಮಿ ದೇವಾಲಯದ ಆವರಣದಲ್ಲಿ ಭಾನುವಾರ ನಡೆದ ಪಂಚ ಪೀಠಾಧೀಶರ ಅಡ್ಡಪಲ್ಲಕ್ಕಿ ಮಹೋತ್ಸವದ ನಿರ್ವಾಹಕ ಸಮಿತಿ ಸಭೆಯಲ್ಲಿ ಬೀರೂರು ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್ ಮಾತನಾಡಿದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))