ಹರ್ ಘರ್ ತಿರಂಗಾ ಅಭಿಯಾನ ಯಶಸ್ವಿಗೊಳಿಸಿ: ಎನ್‌.ಎಸ್‌. ಹೆಗಡೆ

| Published : Aug 09 2024, 12:51 AM IST

ಸಾರಾಂಶ

ಆ. ೧೧ರಿಂದ ೧೪ರ ವರೆಗೆ ತಿರಂಗಾ ಯಾತ್ರೆಗಳು ನಡೆಯಲಿದೆ. ಆ. ೧೧ರಂದು ಪ್ರತಿ ತಾಲೂಕಿನಲ್ಲಿ ಬೈಕ್ ರ್ಯಾಲಿ ಮಾಡುವುದರ ಮೂಲಕ ಮಹಿಳಾ ಮೋರ್ಚಾದವರು ಧ್ವಜವನ್ನು ಹಿಡಿದು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ.

ಶಿರಸಿ: ಕಳೆದ ಹಲವು ವರ್ಷಗಳಿಂದ ಆಚರಿಸುತ್ತಿರುವ ಹರ್ ಘರ್ ತಿರಂಗಾ ಅಭಿಯಾನವನ್ನು ಈ ವರ್ಷವೂ ನಡೆಸಲಾಗುತ್ತಿದ್ದು, ದೇಶದ ಪ್ರತಿಯೊಬ್ಬ ಭಾರತೀಯನಿಗೆ ಅವಿಸ್ಮರಣೀಯ ಅನುಭವವನ್ನು ನೀಡುವ ಕಾರ್ಯಕ್ರಮ ಇದಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆ. ೧೧ರಿಂದ ೧೪ರ ವರೆಗೆ ತಿರಂಗಾ ಯಾತ್ರೆಗಳು ನಡೆಯಲಿದೆ. ಆ. ೧೧ರಂದು ಪ್ರತಿ ತಾಲೂಕಿನಲ್ಲಿ ಬೈಕ್ ರ್ಯಾಲಿ ಮಾಡುವುದರ ಮೂಲಕ ಮಹಿಳಾ ಮೋರ್ಚಾದವರು ಧ್ವಜವನ್ನು ಹಿಡಿದು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ. ಆ. ೧೨ರಿಂದ ೧೫ರ ವರೆಗೆ ತಮ್ಮ ತಮ್ಮ ವ್ಯಾಪ್ತಿಯಲ್ಲಿರುವ ಮಹಾನ್ ವ್ಯಕ್ತಿಗಳ ಪ್ರತಿಮೆಗಳನ್ನು ಹಾಗೂ ಆವರಣವನ್ನು ಸ್ವಚ್ಛಗೊಳಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ.ಆ. ೧೩ರಂದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯವೀರರಿಗೆ ಹೂಮಾಲೆಯನ್ನು ಹಾಕುವ ಮೂಲಕ ಗೌರವ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ. ೧೪ರಂದು ವಿಭಜನ್ ವಿಭಿಷಕಾ ಸ್ಮೃತಿ ದಿವಸ್ ದಿವಸ ಆಗಿದೆ. ಭಾರತದ ಕರಾಳ ಅಧ್ಯಾಯವನ್ನು ನೆನಪಿಸಿಕೊಳ್ಳುವ ದೃಷ್ಟಿಯಿಂದ ಇಡೀ ದೇಶದಲ್ಲಿ ಸೆಮಿನಾರ್‌ ಆಯೋಜಿಸಲಾಗಿದೆ ಎಂದರು.ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತವಾದಾಗ ಸಂಸದರು ಸ್ಪಂದಿಸಿದ್ದಾರೆ. ಉಳುವರೆ ಗ್ರಾಮಕ್ಕೂ ತೆರಳಿ ಸಾಂತ್ವನ ಹೇಳಿ ಬೇಕಾದ ಅಗತ್ಯ ವಸ್ತುಗಳನ್ನು ನೀಡುದವರು ಬಿಜೆಪಿಯವರು. ಕೇಂದ್ರ ಸರ್ಕಾರಕ್ಕೂ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಲ್ಲಿ ಸಂಸದರು ಯಶಸ್ವಿಯಾಗಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೇಬೈಲ್, ಯುವ ಮೋರ್ಚಾ ಅಧ್ಯಕ್ಷ ಪ್ರೇಮಕುಮಾರ್ ನಾಯ್ಕ, ಪ್ರಮುಖರಾದ ರವಿಚಂದ್ರ ಶೆಟ್ಟಿ, ಪ್ರಶಾಂತ ನಾಯ್ಕ, ಜಿ.ಎಸ್. ಗುನಗಾ, ಆನಂದ ಸಾಲೇರ, ಉಷಾ ಹೆಗಡೆ, ಆರತಿ ಗೌಡ, ಪಲ್ಲವಿ ಮಡಿವಾಳ, ಶ್ರೀರಾಮ ನಾಯ್ಕ, ಸದಾನಂದ ಭಟ್ ಮತ್ತಿತರರು ಇದ್ದರು.