ಶಿಬಿರದ ಸದುಪಯೋಗ ಪಡೆಯಿರಿ

| Published : May 16 2024, 12:48 AM IST

ಸಾರಾಂಶ

ವಿಶ್ವಕರ್ಮ ಸಮಾಜ ಬಾಂಧವರ ವತಿಯಿಂದ ಹಮ್ಮಿಕೊಂಡಿರುವ ಸಂದ್ಯಾವಂದನೆ ಶಿಬಿರವೂ ಸಮಾಜದ ಹಿತದೃಷ್ಟಿಯದ್ದಾಗಿದೆ. ಕಾರಣ ಸಮಾಜ ಬಾಂಧವರು ಈ ಶಿಬಿರದಲ್ಲಿ ಪಾಲ್ಗೊಂಡು ಶಿಬಿರದ ಲಾಭ ಪಡೆಯಬೇಕೆಂದು ಸ್ಥಳೀಯ ವಿಶ್ವಕರ್ಮ ಸಮಾಜದ ಅಧ್ಯಕ್ಷ ಶ್ರೀನಿವಾಸ ಸೋನಾರ ಅವರು ನುಡಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ವಿಶ್ವಕರ್ಮ ಸಮಾಜ ಬಾಂಧವರ ವತಿಯಿಂದ ಹಮ್ಮಿಕೊಂಡಿರುವ ಸಂದ್ಯಾವಂದನೆ ಶಿಬಿರವೂ ಸಮಾಜದ ಹಿತದೃಷ್ಟಿಯದ್ದಾಗಿದೆ. ಕಾರಣ ಸಮಾಜ ಬಾಂಧವರು ಈ ಶಿಬಿರದಲ್ಲಿ ಪಾಲ್ಗೊಂಡು ಶಿಬಿರದ ಲಾಭ ಪಡೆಯಬೇಕೆಂದು ಸ್ಥಳೀಯ ವಿಶ್ವಕರ್ಮ ಸಮಾಜದ ಅಧ್ಯಕ್ಷ ಶ್ರೀನಿವಾಸ ಸೋನಾರ ಅವರು ನುಡಿದರು.

ಬುಧವಾರ ವಿಶ್ವಕರ್ಮ ಸಮಾಜ ಬಾಂಧವರ ಕುಲದೇವತೆ ಶ್ರೀಕಾಳಿಕಾದೇವಿ ಮಂದಿರದ ಸಭಾಭವನದಲ್ಲಿ ಏರ್ಪಡಿಸಲಾದ ಸಂಧ್ಯಾವಂದನೆ ಶಿಬಿರದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಶಿಬಿರದಲ್ಲಿ ಖ್ಯಾತ ವಿಶ್ವನಾಥ ಶರ್ಮಾ ಆಚಾರ್ಯರು ಮಹತ್ವಪೂರ್ಣವಾದ ಶಿಬಿರದ ಮಾಹಿತಿ ನೀಡಲಾಗುತ್ತಿದ್ದು, ಈ ಶಿಬಿರದಲ್ಲಿರುವ ಮುಖ್ಯಾಂಶಗಳೆನೆಂದರೆ ಗಾಯತ್ರಿ ಮಂತ್ರದ ವಿವರಣೆ ಹಾಗೂ ಜನಿವಾರಧಾರಣೆ ಕುರಿತು ಮಾಹಿತಿ, ಅಡಮಾನ ಮತ್ತು ಪ್ರಾಣಯಾಮ, ಭಸ್ಮಧಾರಣೆ ಹಾಗೂ ಧ್ಯಾನದ ಬಗ್ಗೆ ಮಾಹಿತಿಯನ್ನು ನೀಡಲಿದ್ದಾರೆಂದು ಹೇಳಿದರು.ಇನ್ನೋರ್ವ ಸಂಧ್ಯಾವಂದನೆ ಶಿಬಿರ ಕುರಿತು ಮಾಹಿತಿ ನೀಡಲು ಆಗಮಿಸಿದ ಖ್ಯಾತ ವಿಶ್ವನಾಥ ಶರ್ಮಾ ಆಚಾರ್ಯ ಅವರು ಮಾತನಾಡಿ ಸಂಪ್ರದಾಯ ಹಾಗೂ ಧಾರ್ಮಿಕ ನಮ್ಮ ವಿಶ್ವ ಬ್ರಾಹ್ಮಣರ ಸಂಬಂಧಿತ ವಿಧಿವಿಧಾನಗಳನ್ನುತಿಳಿದುಕೊಳ್ಳುವ ಸಲುವಾಗಿ ಹಾಗೂ ಸ್ತ್ರೋತ್ರ ಪಾರಾಯಣಗಳ ಕುರಿತು ಮಾಹಿತಿ ಒದಗಿಸಲಾಗುವುದಲ್ಲದೇ ೧೦ ದಿನಗಳವರೆಗೆ ನಡೆಯುವ ಈ ಶಿಬಿರ ಇಂದಿನಿಂದ ಪ್ರತಿದಿನ ಬೆಳಿಗ್ಗೆ ೬ ಗಂಟೆಯಿಂದ ೮ ಗಂಟೆಯವರೆಗೆ ಹಾಗೂ ಸಂಜೆ ೬ ಗಂಟೆಯಿಂದ ೮ ಗಂಟೆಯವರೆಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಈ ಸಮಯದಲ್ಲಿ ಶ್ರೀಕಾಳಿಕಾದೇವಿ ದೇವಸ್ಥಾನದ ಅರ್ಚಕ ಭೀಮರಾಯ ಬಡಿಗೇರ, ಪುರಸಭಾ ಸದಸ್ಯ ಮೋಹನ ಬಡಿಗೇರ, ಸಂತೋಷ ಚಿಕ್ಕೋಡಿ, ಪ್ರಜ್ವಲ್ ಬಡಿಗೇರ, ಶ್ರೀನಿವಾಸ ಪತ್ತಾರ, ಗಂಗಾಧರ ಬಡಿಗೇರ, ಪ್ರಭು ಬಡಿಗೇರ ಅವರನ್ನೊಳಗೊಂಡು ಶಿಭಿರಾರ್ಥಿಗಳು ಪಾಲ್ಗೊಂಡಿದ್ದರು.