ಕುಟುಂಬ ಮಕ್ಕಳಿಗಾಗಿ ಸಮಯ ಮೀಸಲಿಡಿ: ಡಾ.ಪ್ರಭಾ

| Published : Jul 11 2024, 01:36 AM IST

ಸಾರಾಂಶ

ಇಂದಿನ ಮಕ್ಕಳಲ್ಲಿ ಸಾಮಾಜಿಕ ಮೌಲ್ಯಗಳು ಕಡಿಮೆಯಾಗುತ್ತಿವೆ. ಆದ್ದರಿಂದ ತಾಯಂದಿರು ಮಕ್ಕಳೊಂದಿಗೆ ಸಮಯ ಕಳೆದರೆ ಬಾಂಧವ್ಯ ಗಟ್ಟಿಯಾಗುತ್ತದೆ. ಭವಿಷ್ಯದಲ್ಲಿ ಮಕ್ಕಳು ನಮ್ಮ ಮಾತು ಕೇಳುತ್ತಾರೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ದಾವಣಗೆರೆಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಇಂದಿನ ಮಕ್ಕಳಲ್ಲಿ ಸಾಮಾಜಿಕ ಮೌಲ್ಯಗಳು ಕಡಿಮೆಯಾಗುತ್ತಿವೆ. ಆದ್ದರಿಂದ ತಾಯಂದಿರು ಮಕ್ಕಳೊಂದಿಗೆ ಸಮಯ ಕಳೆದರೆ ಬಾಂಧವ್ಯ ಗಟ್ಟಿಯಾಗುತ್ತದೆ. ಭವಿಷ್ಯದಲ್ಲಿ ಮಕ್ಕಳು ನಮ್ಮ ಮಾತು ಕೇಳುತ್ತಾರೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ನಗರದ ವನಿತಾ ಸಮಾಜ, ವನಿತೆಯರ ವೈದ್ಯಕೀಯ ವೇದಿಕೆ, ವಿಹ ವನಿತಾ ಪರಿಸರ ವೇದಿಕೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ಮಹಿಳೆಯರು ಯಾವುದೇ ಸ್ಥಾನಮಾನದಲ್ಲಿ ಇದ್ದರೂ ಕುಟುಂಬ ಮತ್ತು ಮಕ್ಕಳಿಗಾಗಿ ಸಮಯ ಮೀಸಲಿಡಬೇಕು ಎಂದರು.

ಡಾ.ನಾಗಮ್ಮ ಕೇಶವಮೂರ್ತಿ ಅವರು ವನಿತಾ ಸಮಾಜವನ್ನು ದೂರದೃಷ್ಟಿ ಇಟ್ಟುಕೊಂಡು ಸ್ಥಾಪಿಸಿದ್ದರು. ಅವರ ಕನಸಿನಂತೆಯೇ ವನಿತಾ ಸಮಾಜ ಕೆಲಸ ಮಾಡುತ್ತಿದೆ. ನಾನು ಇಲ್ಲದಿದ್ದರೂ ವನಿತಾ ಸಮಾಜ ಯಾವುದೇ ತೊಂದರೆ ಇಲ್ಲದೇ ನಡೆದುಕೊಂಡು ಹೋಗಬೇಕು ಎನ್ನುವ ದೂರದೃಷ್ಟಿ ಇಟ್ಟುಕೊಂಡು ಸ್ಥಾಪಿಸಿರುವ ಮಹಿಳೆಯರ ತಂಡ ಇಂದು ಅವರ ಆಸೆಯಂತೆ ಉತ್ತಮ ಕೆಲಸ ಮಾಡಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಇಂದು ಸಮಾಜ ಪರಿವರ್ತನೆ ಆಗಬೇಕಾದರೆ ಅದು ಮಹಿಳೆಯರಿಂದ ಮಾತ್ರ ಸಾಧ್ಯ. ಮಹಾತ್ಮಾ ಗಾಂಧಿಯವರ ಮಾತಿನಂತೆ ಮೊದಲು ನಾವು ಬದಲಾದರೆ ಇಡೀ ಸಮಾಜ ಬದಲಾಗುತ್ತದೆ ಎಂದರು.

ಎಸ್‌ಎಸ್ ಕೇರ್ ಟ್ರಸ್ಟ್ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಮುಂದಾಗಿದೆ. ಈಗಾಗಲೇ ಸಾಕಷ್ಟು ಆರೋಗ್ಯ ಶಿಬಿರ ನಡೆಸಲಾಗಿದೆ. ವಿಶೇಷವಾಗಿ ಸ್ತನ ಮತ್ತು ಗರ್ಭಾಶಯದ ಕೊರಳ ಕ್ಯಾನ್ಸರ್ ತಪಾಸಣೆ ಮತ್ತು ಚಿಕತ್ಸೆ ನಡೆಸಲಾಗುತ್ತಿದ್ದು, ಟ್ರಸ್ಟಿನ ಆರೋಗ್ಯ ಶಿಬಿರಗಳು ಜಿಲ್ಲೆಯ ತಾಲ್ಲೂಕು ಕೇಂದ್ರಗಳಿಗೂ ವಿಸ್ತರಣೆಯಾಗಿದ್ದು. ಮಹಿಳೆಯರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.ವನಿತಾ ಸಮಾಜದ ಅಧ್ಯಕ್ಷೆ ಪದ್ಮಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಡಾ.ಸುರೇಂದ್ರ, ಡಾ.ಶಾಂತಾಭಟ್, ನಳಿನಿ ಅಚ್ಯುತ, ಲತಿಕಾ ದಿನೇಶ ಶೆಟ್ಟಿ, ಡಾ.ಚೈತಾಲಿ, ಗೀತಾ ಬದರಿನಾಥ್ ಇತರರು ಇದ್ದರು.- - - -9ಕೆಡಿವಿಜಿ38ಃ

ದಾವಣಗೆರೆಯಲ್ಲಿ ವನಿತಾ ಸಮಾಜದಿಂದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನರನ್ನು ಸನ್ಮಾನಿಸಿದರು.