ಸಾರಾಂಶ
ಶಿಗ್ಗಾಂವಿ: ಪ್ರತಿಯೊಬ್ಬರೂ ನಿವೃತ್ತಿಗಳಾಗಲೇಬೇಕು ಆದರೆ ವೃತ್ತಿಜೀವನದ ನೆನಪು ಅಚ್ಚಳಿಯದಂತೆ ಉಳಿಯುವಂತೆ ನೋಡಿಕೊಳ್ಳಿ ಎಂದು ಬಿಇಒ ಎಂ.ಬಿ. ಅಂಬಿಗೇರ ಹೇಳಿದರು.ತಾಲೂಕಿನ ಖುರ್ಸಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಯೋನಿವೃತ್ತ ಶಿಕ್ಷಕ ಸಿ.ಎನ್. ಕಲಕೋಟಿ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ವ್ಯಕ್ತಿ -ವ್ಯಕ್ತಿತ್ವ ವೃದ್ಧಿಯಾಗಲು ವೃತ್ತಿ ಮೌಲ್ಯ ಹೆಚ್ಚಳಕ್ಕೆ ಸತತ ಪರಿಶ್ರಮವನ್ನು ಪ್ರತಿಯೊಬ್ಬ ಶಿಕ್ಷಕರೂ ಹಾಕಬೇಕು ಜೊತೆಗೆ ಅಂತಹ ಚಿಂತನೆಗಳು ಪ್ರತಿಯೊಬ್ಬ ನೌಕರರಲ್ಲಿ ಮೂಡಬೇಕು ಎಂದು ಕಿವಿಮಾತು ಹೇಳಿದರು.ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ, ಅಧಿಕಾರ ಅವಧಿಯಲ್ಲಿ ಸಾರ್ವಜನಿಕರಿಗೆ ಮಾಡಿರುವ ಸಹಾಯ, ಸಹಕಾರಗಳು ಮತ್ತು ಪ್ರಾಮಾಣಿಕತೆ ನೌಕರನನ್ನು ಉತ್ತುಂಗಕ್ಕೆ ಏರಿಸುತ್ತಿವೆ. ಹೀಗಾಗಿ ಅಧಿಕಾರ, ಅಂತಸ್ತುಗಿಂತ ಪರೋಪಕಾರ ಮಾಡುವುದು ಮುಖ್ಯವಾಗಿದೆ ಎಂದರು.ಇದೇ ವೇಳೆ ವಯೋನಿವೃತ್ತ ಶಿಕ್ಷಕ ಸಿ.ಎನ್. ಕಲಕೋಟಿ ದಂಪತಿಯನ್ನು ವಿವಿಧ ನೌಕರರು, ಸಾರ್ವಜನಿಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದವು.ತಾಲೂಕು ಅಕ್ಷರ ದಾಸೋಹ ಅಧಿಕಾರಿ ಅಶೋಕ ಕುಂಬಾರ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಅರುಣಗೌಡ್ರ ಹುಡೆದಗೌಡ್ರ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಫ್.ಸಿ. ಕಾಡಪ್ಪಗೌಡ್ರ, ಮುಖಂಡ ತಿಪ್ಪಣ್ಣ ಸಾತಣ್ಣವರ, ಮುಖ್ಯ ಶಿಕ್ಷಕಿ ಅರಮನೆ ಸೇರಿದಂತೆ ಶಾಲಾಭಿವೃದ್ಧಿ ಸಮಿತಿ, ತಾಲ್ಲೂಕಿನ ವಿವಿಧ ಶಾಲೆ ಶಿಕ್ಷಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.