ಮೇಕೇರಿ ಪ್ರೀಮಿಯರ್ ಲೀಗ್ ಕ್ರಿಕೆಟ್‌: ಟೀಂ ರೋಲೆಕ್ಸ್ ಚಾಂಪಿಯನ್ಸ್‌

| Published : Feb 02 2025, 01:02 AM IST

ಮೇಕೇರಿ ಪ್ರೀಮಿಯರ್ ಲೀಗ್ ಕ್ರಿಕೆಟ್‌: ಟೀಂ ರೋಲೆಕ್ಸ್ ಚಾಂಪಿಯನ್ಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಮೇಕೇರಿ ಎಂ.ಕೆ. ಕ್ರಿಕೆಟರ್ಸ್ ವತಿಯಿಂದ ಮೇಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಮೇಕೇರಿ ಪ್ರೀಮಿಯರ್ ಲೀಗ್ ಸೀಸನ್-5ರ ಚಾಂಪಿಯನ್ ಆಗಿ ಚರಣ್ ಮಾಲೀಕರತ್ವದ ಟೀಂ ರೋಲೆಕ್ಸ್ ಹೊರ ಹೊಮ್ಮಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮೇಕೇರಿ ಎಂ.ಕೆ. ಕ್ರಿಕೆಟರ್ಸ್ ವತಿಯಿಂದ ಮೇಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಮೇಕೇರಿ ಪ್ರೀಮಿಯರ್ ಲೀಗ್ ಸೀಸನ್-5ರ ಚಾಂಪಿಯನ್ ಆಗಿ ಚರಣ್ ಮಾಲೀಕರತ್ವದ ಟೀಂ ರೋಲೆಕ್ಸ್ ಹೊರ ಹೊಮ್ಮಿದೆ.

ಪ್ರದೀಪ್ ಮಾಲೀಕತ್ವದ ಸುತಿರ್ತ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದು, ವಿನಯ್ ಮಾಲೀಕತ್ವದ ಸಂತೃಪ್ತಿ ಕಾಫಿ ಲಿಂಕ್ಸ್ ತಂಡ ತೃತೀಯ ಹಾಗೂ ಅನಿಸ್ ಮಾಲೀಕತ್ವದ ಅಪ್ಪು ಕ್ರಿಕೆಟರ್ಸ್‌ ತಂಡ ನಾಲ್ಕನೇ ಸ್ಥಾನ ತಮ್ಮದಾಗಿಸಿಕೊಂಡಿದೆ.

ಪ್ರಥಮ ವಿಜೇತ ತಂಡಕ್ಕೆ ರು.1 ಲಕ್ಷ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರು.50 ಸಾವಿರ ಹಾಗೂ ತೃತೀಯ ಸ್ಥಾನ ಪಡೆದ ತಂಡಕ್ಕೆ ರು.10 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ, ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ ಆಕರ್ಷಕ ಟ್ರೋಫಿ ನೀಡಲಾಯಿತು. ಹಲವು ವೈಯಕ್ತಿಕ ಬಹುಮಾನವನ್ನು ನೀಡಲಾಯಿತು.

ಸಮಾರೋಪ ಸಮಾರಂಭ: ಮೂರನೇ ದಿನ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಪಾಲ್ಗೊಂಡು ಬ್ಯಾಟಿಂಗ್ ಮಾಡುವ ಮೂಲಕ ಫೈನಲ್ ಪಂದ್ಯಾವಳಿ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ, ಕ್ರೀಡೆ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯ ಹೆಚ್ಚಿಸುತ್ತದೆ. ಅಲ್ಲದೇ ಸಮುದಾಯಗಳ ನಡುವೆ ಒಗ್ಗಟ್ಟನ್ನು ಮೂಡಿಸಲು ಸಹಕಾರಿಯಾಗಿದೆ ಎಂದರು.

ಕಾಂಗ್ರೆಸ್ ಸದಸ್ಯ ಹಾಗೂ ಕಾಫಿ ಬೆಳೆಗಾರ ಭೀಷ್ಮ ದಂಬೆಕೋಡಿ, ಉದ್ಯಮಿ ಕೆ.ಎಂ.ಗಣೇಶ್, ಮೇಕೇರಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸಿ.ಬಿ.ಮಮತ, ಮೇಕೇರಿ ಗ್ರಾ.ಪಂ ಸದಸ್ಯ ಎಂ.ಯು.ಹನೀಫ್, ಮೇಕೇರಿ ದಲಿತ ಸಂಘರ್ಷ ಸಮಿತಿ ಸದಸ್ಯ ಎಚ್.ಸಿ.ಪೊನ್ನಪ್ಪ, ಕಾಫಿ ಬೆಳೆಗಾರರಾದ ಚೆಟ್ಟೋಳಿರ ಪ್ರಕಾಶ್, ಮಂದ್ರಿರ ನಾಗೇಶ್, ಗುತ್ತಿಗೆದಾರ ಜಿ.ಸಿ.ವಸಂತ್, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಉದ್ಯಮಿ ಶುಭಾಷ್, ಅರವತ್ತೊಕ್ಲು ಪೆರತ ಫ್ರೆಂಡ್ಸ್ ಯೂತ್ ಕ್ಲಬ್ ಅಧ್ಯಕ್ಷ ಬಾಲಾಡಿ ಪ್ರತಾಪ್ ಕುಮಾರ್, ಉದ್ಯಮಿ ರಾಜೇಶ್ ಆಚಾರ್ಯ, ಕೊಡಗು ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ, ಕಾಂಗ್ರೆಸ್ ಪಕ್ಷದ ಮೇಕೇರಿ ವಲಯ ಕಾರ್ಯದರ್ಶಿ ಎಂ.ಯು.ರಫೀಕ್, ಉದ್ಯಮಿ ಗಾಯತ್ರಿ ಪ್ರಭಾಕರ್, ಕುಂದೂರುಮೊಟ್ಟೆ ದಸರಾ ಸೇವಾ ಸಮಿತಿ ಸದಸ್ಯ ಶೇಯಸ್ ಮತ್ತಿರರಿದ್ದರು.ಆಶಾ ಕಾರ್ಯಕರ್ತೆಯರಾದ ಮಮತ, ಭವನಿ ಅವರನ್ನು ಗೌರವಿಸಲಾಯಿತು.