ಆಲಮೇಲನ್ನು ಮಾದರಿ ಪಟ್ಟಣ ಮಾಡುವೆ

| Published : Oct 04 2024, 01:17 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಆಲಮೇಲ ಆಲಮೇಲ ಪಟ್ಟಣ ಸೇರಿದಂತೆ ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತಂದು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು. ಅಲ್ಲದೇ, ಪಟ್ಟಣವನ್ನು ಜಿಲ್ಲೆಯಲ್ಲಿಯೇ ಮಾದರಿ ಪಟ್ಟಣ ಮಾಡುವುದಾಗಿ ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ವೃತ್ತದ ನವೀಕರಣಕ್ಕಾಗಿ ಎಸ್.ಎಫ್.ಸಿ ಅನುದಾನದ ₹ 50ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಹಾಗೂ ಎಸ್.ಎಫ್.ಸಿ ವಿಶೇಷ ಅನುದಾನದಡಿ ಪಟ್ಟಣದ ವಿವಿಧ ವಾರ್ಡ್‌ಗಳ ಕಾಮಗಾರಿಗೆ ಭೂಮಿ ಪೂಜಾ ಸಲ್ಲಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಆಲಮೇಲ

ಆಲಮೇಲ ಪಟ್ಟಣ ಸೇರಿದಂತೆ ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತಂದು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು. ಅಲ್ಲದೇ, ಪಟ್ಟಣವನ್ನು ಜಿಲ್ಲೆಯಲ್ಲಿಯೇ ಮಾದರಿ ಪಟ್ಟಣ ಮಾಡುವುದಾಗಿ ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ವೃತ್ತದ ನವೀಕರಣಕ್ಕಾಗಿ ಎಸ್.ಎಫ್.ಸಿ ಅನುದಾನದ ₹ 50ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಹಾಗೂ ಎಸ್.ಎಫ್.ಸಿ ವಿಶೇಷ ಅನುದಾನದಡಿ ಪಟ್ಟಣದ ವಿವಿಧ ವಾರ್ಡ್‌ಗಳ ಕಾಮಗಾರಿಗೆ ಭೂಮಿ ಪೂಜಾ ಸಲ್ಲಿಸಿ ಮಾತನಾಡಿದರು. ಪಟ್ಟಣದ ಬಡಾವಣೆಗಳ ಅಭಿವೃದ್ಧಿಗಾಗಿ ಸುಮಾರು ₹ 5 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಸುಂದರ ಪಟ್ಟಣ ಮಾಡಲಾಗುವುದು. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸುವಂತೆ ಎಚ್ಚರಿಸಿದರು.ಅಂಬೇಡ್ಕರ ವೃತ್ತ ನಿರ್ಮಾಣ ಸಮಿತಿ ಅಧ್ಯಕ್ಷ ಹರೀಶ ಎಂಟಮಾನ ಮಾತನಾಡಿ, ಬಹುದಿನಗಳ ಕನಸು ನನಸಾಗುತ್ತಿರುವುದು ಖುಷಿ ತಂದಿದೆ. ಶಾಸಕರು ಆಲಮೇಲ ಪಟ್ಟಣ ತಾಲೂಕಿನ 43 ಹಳ್ಳಿಗಳಿಗಳಿಗೆ ಸೂಕ್ತ ಬಸ್‌ ವ್ಯವಸ್ಥೆ ಇಲ್ಲವಾಗಿದ್ದು, ಬಸ್ಸಿನ ಸೌಲಭ್ಯ ಕಲ್ಪಿಸಬೇಕು. ಸಂಜೆ 7ರ ನಂತರ ಪಟ್ಟಣದಿಂದ ಕಲ್ಬುರ್ಗಿ ಮತ್ತು ವಿಜಯಪೂರ, ಇಂಡಿ ಪಟ್ಟಣಗಳಿಗೆ ಬಸ್‌ ವ್ಯವಸ್ಥೆಯಿಲ್ಲ. ಬಸ್‌ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿದರು.

ಈ ವೇಳೆ ಡಾ.ಸಂದೀಪ ಪಾಟೀಲ, ಜಗದೀಶ ದಾಳಿ. ಪಪಂ.ಅಧ್ಯಕ್ಷ ಸಾಧಿಕ ಸುಂಬಡ,ಎಸಿ ಆಬೀದ್ ಗದ್ಯಾಳ, ಇಂಡಿ ಡಿವೈಎಸ್ಸಿ ಜಗದೀಶ ಎಸ್.ಎಚ್, ತಹಸೀಲ್ದಾರ್‌ ಕೆ.ವಿಜಯಕುಮಾರ, ಪಪಂ ಮುಖ್ಯಾಧಿಕಾರಿ ಸುರೇಶ ನಾಯಕ, ನಾಗರಿಕ ವೇದಿಕೆಯ ಅಧ್ಯಕ್ಷ ರಮೇಶ ಭಂಟನೂರ, ವೀರಭದ್ರ ಕತ್ತಿ, ಗುಂಡು ಮೇಲಿನಮನಿ, ಶಿವಾನಂದ ಜಗತಿ, ಪಪಂ ಸದಸ್ಯರಾದ ಸಂಜೀವಕುಮಾರ ಎಂಟಮಾನ, ಅಶೋಕ ಕೊಳಾರಿ, ಚಂದು ಹಳೇಮನಿ, ಇತರೆ ಮುಖಂಡರು ಹಾಜರಿದ್ದರು.