ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದ ಸಂಘಟನೆ ದೇಶದಲ್ಲಿ ಬಲಾಢ್ಯವಾಗಿದ್ದು, ಇದರಿಂದ ಹತಾಶರಾದ ವಿಪಕ್ಷ ಕಾಂಗ್ರೆಸ್‌ ಯಾವುದೇ ಸಾಕ್ಷಿ ನೀಡದೇ ಕೇವಲ ಆರೋಪ ಮಾಡಿ, ಗೊಂದಲ ಸೃಷ್ಟಿಸಲು ಯತ್ನಿಸುತ್ತಿದೆ. ದೇಶದ ಸಂವಿಧಾನಾತ್ಮಕ ಸಂಸ್ಥೆಗಳ ಮೇಲೆ ಆರೋಪಿಸುವ ಕಾರ್ಯ ಅತೀಕರೇಕದಿಂದ ಕೂಡಿದೆ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದ ಸಂಘಟನೆ ದೇಶದಲ್ಲಿ ಬಲಾಢ್ಯವಾಗಿದ್ದು, ಇದರಿಂದ ಹತಾಶರಾದ ವಿಪಕ್ಷ ಕಾಂಗ್ರೆಸ್‌ ಯಾವುದೇ ಸಾಕ್ಷಿ ನೀಡದೇ ಕೇವಲ ಆರೋಪ ಮಾಡಿ, ಗೊಂದಲ ಸೃಷ್ಟಿಸಲು ಯತ್ನಿಸುತ್ತಿದೆ. ದೇಶದ ಸಂವಿಧಾನಾತ್ಮಕ ಸಂಸ್ಥೆಗಳ ಮೇಲೆ ಆರೋಪಿಸುವ ಕಾರ್ಯ ಅತೀಕರೇಕದಿಂದ ಕೂಡಿದೆ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.ಪಟ್ಟಣದ ಕರನಂದಿ ರಂಗ ಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ 75ನೇ ವರ್ಷದ ಜನ್ಮದಿನದ ಮಾಸಾಚರಣೆ ನಿಮಿತ್ತ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ನಿಬಂಧ ಮತ್ತು ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಮತ್ತು ನಗರ ಘಟಕದ ಬಿಜೆಪಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಭಾರತವನ್ನು ಯಶಸ್ವಿಯಾಗಿ ಸಮೃದ್ಧ ರೀತಿಯಲ್ಲಿ ಮುನ್ನಡೆಸುವ ಶಕ್ತಿ ಮೋದಿಗೆ ಮಾತ್ರ ಇದೆ. ರಾಷ್ಟ್ರದ ಸಂಸ್ಕೃತಿ, ಪರಂಪರೆ ಇನ್ನೊಮ್ಮೆ ಜಗತ್ತಿಗೆ ಸಾರಿ ಹೇಳುವ ಮೂಲಕ ಭಾರತ ಮತ್ತೊಮ್ಮೆ ಜಗತ್ತಿಗೆ ವಿಶ್ವ ಗುರುವಾಗಿ ಬೆಳೆಯಬೇಕು. ಅದನ್ನ ಸಾಕಾರಗೊಳಿಸುವ ವ್ಯಕ್ತಿತ್ವ ಮೋದಿಗೆ ಮಾತ್ರವಿದೆ. 25 ವರ್ಷದ ಸುದೀರ್ಘ ರಾಜಕೀಯ ಸಾಧನೆ ಮಕ್ಕಳಿಗೆ ಆದರ್ಶವಾಗಿದೆ ಎಂದು ಹೇಳಿದರು.

ರಾಜಶೇಖರ ಶೀಲವಂತ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಆದರ್ಶ ಯುವಕರಿಗೆ ಪ್ರೇರಣೆ ಆಗಲಿ. ಅವರ ಮುತ್ಸದ್ಧಿ ಜೀವನ ಶೈಲಿ, ಆದರ್ಶ ಜೀವನ ಎಲ್ಲರಿಗೂ ಮಾರ್ಗದರ್ಶನ ಆಗಿದೆ. ಸಾಮಾನ್ಯ ಬಡತನ ಕುಟುಂಬದಲ್ಲಿ ಹುಟ್ಟಿ ಈಗ ವಿಶ್ವ ನಾಯಕರಾಗಿದ್ದಾರೆ. ದೇಶದ ಸರ್ವೋತ್ತಮ ಅಭಿವೃದ್ಧಿಗೆ ಮೋದಿ ಅವರ ಕೊಡುಗೆ ಅಪಾರವಾದುದು, ಅವರಂತೆ ಮಕ್ಕಳು ಕೂಡ ದೇಶ ಸೇವೆಗೆ ಮುಂದಾಗಬೇಕು ಎಂದು ಹೇಳಿದರು.

ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ದೇಶದ ಪ್ರಧಾನಿ ನರೇಂದ್ರ ಮೋದಿ ಇಡೀ ಜಗತ್ತು ಭಾರತದ ಕಡೆ ತಿರುಗಿ ನೋಡುವಂತೆ ಮಾಡಿದ ಮಹಾನ್ ನಾಯಕ, ದೇಶ ಕಂಡ ಅದ್ವಿತೀಯ ಪ್ರಧಾನಿ ನರೇಂದ್ರ ಮೋದಿ ಅವರ ದೂರ ದೃಷ್ಟಿ ವ್ಯಕ್ತಿತ್ವ ಯುವಕರಿಗೆ ಸ್ಫೂರ್ತಿದಾಯಕವಾಗಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿದರು. ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ರವೀಂದ್ರ ಪಟ್ಟಣಶೆಟ್ಟಿ, ವಸಂತ ದೊಂಗಡೆ, ಸಂಜೀವ ಕಾರಕೂನ, ಕಮಲಕಿಶೋರ ಮಾಲಪಾಣಿ, ಸಂಪತ್ತಕುಮಾರ ರಾಠಿ, ಶ್ರೀಕಾಂತ ಮಲಜಿ, ಸವಿತಾ ಉಂಕಿ, ನಾಗರಾಜ ಕಾಚಟ್ಟಿ, ಭಾಗ್ಯಾ ಉದ್ನೂರ, ಭುವನೇಶ ಪೂಜಾರ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಬಿಜೆಪಿ ನಗರ ಘಟಕದ ಪದಾಧಿಕಾರಿಗಳ ಆಯ್ಕೆ :

ಅಧ್ಯಕ್ಷರಾಗಿ ದೀಪಕ ನೇಮದಿ, ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀಕಾಂತ ಭಾವಿ, ಶಿವಾನಂದ ಬಾದವಾಡಗಿ, ಉಪಾಧ್ಯಕ್ಷರಾಗಿ ಎಸ್.ಟಿ.ಶಿರೂರ, ನೂರಂದಪ್ಪ ಮಳ್ಳಿ, ಪುರುಷೋತ್ತಮ ರಾಠಿ, ಅಶೋಕ ಬಜಂತ್ರಿ, ಸಂಘಟನಾ ಕಾರ್ಯದರ್ಶಿಯಾಗಿ ಶೀತಲ ಸತ್ತಿಗೇರಿ,

ಸಹ ಸಂಘಟನಾ ಕಾರ್ಯದರ್ಶಿಯಾಗಿ ಆನಂದ ಗೋವಿಂದಕರ, ಮಾಧ್ಯಮ ಪ್ರಮುಖರಾಗಿ ನಿಂಗಪ್ಪ ಎಣ್ಣಿ, ಕಾರ್ಯದರ್ಶಿಗಳಾಗಿ ಸಂಗಮೇಶ ತಿಪ್ಪಾ, ಅಶ್ವಿನಿ ಗಾಣಿಗೇರ, ಸಂಗಪ್ಪ ಸುರಪುರ, ಹನುಮಂತ ಕಲಾಲ, ಖಜಾಂಜಿಯಾಗಿ ಮಹೇಶ ಭಾರತಿ ಆಯ್ಕೆಯಾದರು.