ರೋಟರಿ ಅನುಷ್ಠಾನವನ್ನು ಸಾರ್ಥಕ ಪಡಿಸಿಕೊಳ್ಳಿ: ರಮೇಶ ಬಂಡಿಸಿದ್ದೇಗೌಡ

| Published : Aug 07 2024, 01:10 AM IST

ಸಾರಾಂಶ

ಪ್ರತಿಭಾ ಪುರಸ್ಕಾರ, ಆರೋಗ್ಯ ಶಿಬಿರ, ಪರಿಸರ ಕಾಳಜಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಕಾರದ ನೀಡಿ ಹೆಣ್ಣು ಭ್ರೂಣಹತ್ಯೆ, ಬಾಲಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ಸೇರಿದಂತೆ ಹಲವು ಸಾಮಾಜಿಕ ಪಿಡುಗುಗಳ ವಿರುದ್ಧ ಜನರಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ಒದಗಿಸುವ ಮೂಲಕ ಪಟ್ಟಣದ ರೋಟರಿ ಅನುಷ್ಠಾನವನ್ನು ಸಾರ್ಥಕ ಪಡಿಸಿಕೊಳ್ಳುವಂತೆ ಶಾಸಕ ರಮೇಶ ಬಂಡಿಸಿದ್ದೇಗೌಡ ಸಲಹೆ ನೀಡಿದರು.

ಪಟ್ಟಣದ ರಿವರ್ ಸೈಡ್ ರೆಸಾರ್ಟ್ ಸಭಾಂಗಣದಲ್ಲಿ ಶ್ರೀರಂಗಪಟ್ಟಣ ರೋಟರಿ ಅನುಷ್ಠಾನ ಸಮಾರಂಭದಲ್ಲಿ ಮಾತನಾಡಿ, ಅವಕಾಶ ವಂಚಿತ ಗ್ರಾಮೀಣ ಪ್ರದೇಶದ ನಾಗರಿಕರನ್ನು ಗುರುತಿಸಿ ಹಲವು ಯೋಜನೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದರೊಂದಿಗೆ ರೋಟರಿಯ ಸೇವಾ ವೈಖರಿ ರಾಜ್ಯಕ್ಕೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು.

ನೂತನ ಅಧ್ಯಕ್ಷ ಮಂಜೂರಾಂ ಪುಟ್ಟೇಗೌಡ ಮಾತನಾಡಿ, ಎಲ್ಲರ ವಿಶ್ವಾಸ ಹಾಗೂ ಸಲಹೆ ಸಹಕಾರದಲ್ಲಿ ಅವಕಾಶ ವಂಚಿತ ಪ್ರತಿಭೆ ಗುರುತಿಸಿ ಪರಿಚಯಿಸುವುದು. ಜೊತೆಗೆ ಅರ್ಹ ಸರ್ಕಾರಿ ಶಾಲೆಗಳಿಗೆ ಪೀಠೋಪಕರಣ ಹಾಗೂ ವಿದ್ಯಾರ್ಜನೆಗೆ ಬೇಕಾದ ಪೂರಕ ವ್ಯವಸ್ಥೆ ಕಲ್ಪಿಸುವುದು. ಪ್ರತಿಭಾ ಪುರಸ್ಕಾರ, ಆರೋಗ್ಯ ಶಿಬಿರ, ಪರಿಸರ ಕಾಳಜಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಕಾರದ ನೀಡಿ ಹೆಣ್ಣು ಭ್ರೂಣಹತ್ಯೆ, ಬಾಲಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ಸೇರಿದಂತೆ ಹಲವು ಸಾಮಾಜಿಕ ಪಿಡುಗುಗಳ ವಿರುದ್ಧ ಜನರಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದರು.

ಈ ವೇಳೆ ಜಿಲ್ಲಾಪಾಲಕ ವಿ.ಶ್ರೀನಿವಾಸ ಮೂರ್ತಿ, ವಲಯಪಾಲಕ ಪ್ರಶಾಂತ್ ಸಿ, ವಲಯ ಕಾರ್ಯದರ್ಶಿ ವಿಜಯ್ ಕುಮಾರ್, ಸಹಾಯಕ ಪಾಲಕ ಮಧುಸೂದನ್ ಎಂ.ಆರ್, ಜಿಲ್ಲಾ ಪಾಲಕ ವಿಶೇಷ ಪ್ರತಿನಿಧಿ ಕುಮಾರ್ ರಾಜು, ಜಿಲ್ಲಾ ನಿರ್ದೇಶಕ ತಿರುಮುರುಗನ್, ಪ್ರಥಮ ಕಾರ್ಯದರ್ಶಿ ಡಾ. ರಾಘವೇಂದ್ರ ಆರ್, ಕಾರ್ಯದರ್ಶಿ ರಾಜೇಶ್, ನಿವೃತ್ತ ಯೋಧ ನಾಗರಾಜು ಪ್ರಾಂಶುಪಾಲ ಶಿವಕುಮಾರ್, ಅನುಪಮಾ ಸೇರಿದಂತೆ ಇತರರು ಇದ್ದರು.