ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮಣ್ಣನಿಂದ ದೂರವಾಗುತ್ತಿರುವ ಮಕ್ಕಳಿಗೆ ಜೇಡಿ ಮಣ್ಣಿನಲ್ಲಿ ಬೀಜದುಂಡೆ ಗಣೇಶಮೂರ್ತಿಗಳ ತಯಾರಿಸುವ ಅವಕಾಶವನ್ನು ನಮ್ಮ ಶಾಲೆಯಲ್ಲಿ ಕಳೆದ ಆರು ವರ್ಷಗಳಿಂದ ಮಾಡಿಕೊಡಲಾಗಿತ್ತಿದೆ ಎಂದು ಬಿಜಿಎಸ್ ಇಂಗ್ಲಿಷ್ ಶಾಲೆಯ ಪ್ರಾಂಶುಪಾಲ ಡಿ.ಸಿ.ಮೋಹನ್ ಕುಮಾರ್ ತಿಳಿಸಿದರು.ನಗರ ಹೊರವಲಯದ ಅಗಲಗುರ್ಕಿಯ ಬಿಜಿಎಸ್ ಇಂಗ್ಲಿಷ್ ಶಾಲೆಯಲ್ಲಿ ಆಯೋಜಿಸಿದ್ದ ಪರಿಸರ ಸ್ನೇಹಿ ಬೀಜದುಂಡೆ ಗಣಪತಿ ತಯಾರಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಮಗೆಲ್ಲ ಪ್ರಕೃತಿ ದೇವರು, ಆದರೆ ದೇವರ ಹೆಸರಲ್ಲಿ ಪ್ರಕೃತಿಯನ್ನ ಹಾಳು ಮಾಡುತ್ತಿರುವ ಆಚರಣೆಗಳು ಬೇರೂರುತ್ತಿವೆ ಎಂದರು.
ಪರಿಸರದ ಮೇಲೆ ಪರಿಣಾಮಇನ್ನೂ ಕೆಲವೇ ದಿನಗಳಲ್ಲಿ ಬರುವ ಗಣೇಶಹಬ್ಬ ಪರಿಸರದ ಮೇಲೆ ಸಾಕಷ್ಟು ಪರಿಣಾಮವನ್ನ ಬಿರಲಿದೆ. ಹಬ್ಬದಲ್ಲಿ ಸಮಯದಲ್ಲಿ ಕೂರಿಸಲಾಗುವ ಪಿಓಪಿ ಗಣಪ, ಬಾಂಬೆ ಗಣಪ, ಬಣ್ಣಕಾರಕ ಗಣಪ ಮತ್ತು ಬಿದಿರು ಮತ್ತು ಹುಲ್ಲಿನಿಂದ ತಯಾರಿಸದ ಗಣೇಶ ಮೂರ್ತಿಗಳು ಜಲಮೂಲ ಮತ್ತು ನೆಲಮೂಲದ ದುಷ್ಪರಿಣಾಮ ಬೀರಲಿವೆ ಎಂದರು.
ಭವಿಷ್ಯದ ಪ್ರಜೆಗಳಾದ ಮಕ್ಕಳಲ್ಲಿ ಪರಿಸರದ ಬಗ್ಗೆ ಈಗಿನಿಂದಲೇ ಕಾಳಜಿ ಬೆಳೆಸುವ ಕಾರಣಕ್ಕೆ ಇಂತಹ ಪರಿಸರ ಸ್ನೇಹಿ ಬೀಜದುಂಡೆ ಗಣಪತಿ ತಯಾರು ಮಾಡುವುದರಿಂದ ಪರಿಸರ ಹಾನಿಯಾಗುವುದಿಲ್ಲ, ಗಣಪತಿಯನ್ನು ನೀರಿಗೆ ಬಿಟ್ಟರೆ ನೀರು ಮಾಲಿನ್ಯವಾಗುವುದಿಲ್ಲ, ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ಬೀಜದುಂಡೆ ಗಣಪತಿಯನ್ನು ತಯಾರಿಸಿ ಪ್ರಕೃತಿಗೆ ಕೊಡುಗೆಯಾಗಿ ನೀಡುವುದರಿಂದ ಪರಿಸರ ಸಂರಕ್ಷಣೆಮಾಡಿದಂತಾಗುತ್ತದೆ ಎಂದು ತಿಳಿಸಿದರು.ನಿಯಮ ಉಲ್ಲಂಘಿಸಿದರೆ ದಂಡ ವಕೀಲ ಮಂಜುನಾಥ ರೆಡ್ಡಿ ಮಾತನಾಡಿ, 1974ರ ಪರಿಸರ ಮಾಲಿನ್ಯ ನಿಯಂತ್ರಣ ಕಾಯ್ದೆ ಪ್ರಕಾರ, ಬಾಂಬೆ ಗಣೇಶ, ಪಿಓಪಿ, ಬಿದಿರು ಮತ್ತು ಹುಲ್ಲಿನಿಂದ ತಯಾರಿಸಿದ ಗಣೇಶ ಮತ್ತು ಬಣ್ಣಕಾರಕ ಗಣೇಶಮೂರ್ತಿಗಳ ಪ್ರತಿಷ್ಟಾಪನೆ ಮಾಡುವಂತಿಲ್ಲ, ಒಂದು ವೇಳೆ ಕಾನೂನು ಉಲ್ಲಂಘನೆಯಾದ್ದಲ್ಲಿ 10 ಸಾವಿರ ದಂಡ ಹಾಗೂ ಜೈಲು ಶಿಕ್ಷೆ ಸಹ ಆಗಲಿದೆ ಎಂದರು. ಶಿಕ್ಷಕ ಗೋಪಾಲಕೃಷ್ಣ ಮಾತನಾಡಿ, ಅರಿವಿಲ್ಲದೆ ನಾವೆಲ್ಲರು ಪಿಓಪಿ, ಬಾಂಬೆ ಗಣೇಶಗಳನ್ನ ಕೂರಿಸುತ್ತಿದ್ದೇವೆ, ಇದರಿಂದ ಪರೋಕ್ಷವಾಗಿ ಮನುಷ್ಯನ ಮೇಲೆ ಪರಿಣಾಮ ಬೀರಲಿದೆ. ಶಾಸ್ತ್ರಗಳ ಪ್ರಕಾರ ಕಲ್ಲು,ಮಣ್ಣು, ಲೋಹ ದಿಂದ ವಿಗ್ರಹವನ್ನ ತಯಾರಿಸ ಬೇಕು, ಇವುಗಳಲ್ಲಿ ಮಾತ್ರ ದೈವತ್ವದ ಶಕ್ತಿ ಇರುತ್ತದೆ, ಬೀಜದುಂಡೆ ಗಣಪತಿಯಿಂದ ಪಕ್ಕೃತಿ ಮಾತೆಗೆ ನಾವು ನೀಡುವ ಕಾಣಿಕೆ ಯಾಗುತ್ತದೆ ಎಂದರು. ಈ ವೇಳೆ ಶಿಕ್ಷಕ ನಾಗರಾಜ್, ಬೋಧಕ ಮತ್ತು ಭೋಧಕೇತರ ಸಿಬ್ಬಂಧಿ ಹಾಗೂ ವಿದ್ಯಾರ್ಥಿಗಳು ಇದ್ದರು.