-ಎನ್ ಪಿ ಕೆ-3ಬೇತು ಗ್ರಾಮದ ಮಕ್ಕಿ ಶ್ರೀ ಶಾಸ್ತಾವು ದೇವರ ವಾರ್ಷಿಕ ಎಡಮ್ಯಾರುವಾರ್ಷಿಕ ಉತ್ಸವದಲ್ಲಿ ದೇವರನ್ನು ವಿವಿಧಹೂಗಳಿಂದ ಶೃಂಗರಿಸಿ ಅಲಂಕೃತಗೊಳಿಸಲಾಗಿತ್ತು. 4-ಎನ್ ಪಿ ಕೆ-4.ಬೇತು ಗ್ರಾಮದ ಮಕ್ಕಿ ಶ್ರೀ ಶಾಸ್ತಾವು ದೇವರ ವಾರ್ಷಿಕ ಎಡಮ್ಯಾರುವಾರ್ಷಿಕ ಉತ್ಸವದಲ್ಲಿ ಎತ್ತೇರಾಟ. 4-ಎನ್ ಪಿ ಕೆ-5.ಬೇತು ಗ್ರಾಮದ ಮಕ್ಕಿ ಶ್ರೀ ಶಾಸ್ತಾವು ದೇವರ ವಾರ್ಷಿಕ ಎಡಮ್ಯಾರುವಾರ್ಷಿಕ ಉತ್ಸವದಲ್ಲಿ ವಿಷ್ಣುಮೂರ್ತಿ ಕೋಲ | Kannada Prabha
Image Credit: KP
ಸಮೀಪದ ಬೇತು ಗ್ರಾಮದ ಮಕ್ಕಿ ಶ್ರೀ ಶಾಸ್ತಾವು ದೇವರ ವಾರ್ಷಿಕ ಎಡಮ್ಯಾರು ವಾರ್ಷಿಕ ಉತ್ಸವ ಎರಡು ದಿನಗಳ ಕಾಲ ವಿಜೃಂಭಣೆಯಿಂದ ಜರುಗಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಮೀಪದ ಬೇತು ಗ್ರಾಮದ ಮಕ್ಕಿ ಶ್ರೀ ಶಾಸ್ತಾವು ದೇವರ ವಾರ್ಷಿಕ ಎಡಮ್ಯಾರು ವಾರ್ಷಿಕ ಉತ್ಸವ ಎರಡು ದಿನಗಳ ಕಾಲ ವಿಜೃಂಭಣೆಯಿಂದ ಜರುಗಿತು.
ಸೋಮವಾರ ದೇವಾಲಯದ ಆವರಣದಲ್ಲಿ ನಡೆದ ಎರಡು ಪ್ರಮುಖ ಕೋಲಗಳೊಂದಿಗೆ ಉತ್ಸವ ಸಂಪನ್ನಗೊಂಡಿತು. ಮಕ್ಕಿ ಶಾಸ್ತಾವು ಸನ್ನಿಧಿಯಲ್ಲಿ ಸೋಮವಾರ ಬೆಳಗ್ಗಿನಿಂದಲೇ ವಿವಿಧ ಕೋಲಗಳು ನಡೆದವು. ಬೆಳಿಗ್ಗೆ ಅಜ್ಜಪ್ಪ ಕೋಲ ಹಾಗೂ ಮಧ್ಯಾಹ್ನ ವಿಷ್ಣುಮೂರ್ತಿ ಕೋಲ ಮೇಲೇರಿ (ಕೆಂಡಸೇವೆ)ಗಳು ತಮ್ಮ ಸಾಂಪ್ರದಾಯಿಕ ವೇಷ ಭೂಷಣಗಳೊಂದಿಗೆ ಗಮನ ಸೆಳೆದವು.
ಈ ಸಂದರ್ಭ ದೇವರನ್ನು ವಿವಿಧ ಹೂಗಳಿಂದ ಶೃಂಗರಿಸಲಾಗಿತ್ತು. ಭಕ್ತರು ಅಧಿಕ ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಂಡು ದೇವರಿಗೆ ವಿವಿಧ ರೀತಿಯ ಹರಕೆ, ಕಾಣಿಕೆ ಸಮರ್ಪಿಸಿದರು.
ಉತ್ಸವಕ್ಕೆ ಆಗಮಿಸಿದ ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿತ್ತು. ಉತ್ಸವದ ಅಂಗವಾಗಿ ಭಾನುವಾರ ಮಧ್ಯಾಹ್ನ ಎತ್ತೇರಾಟ ಹಾಗೂ ತಡರಾತ್ರಿವರೆಗೆ ದೇವಾಲಯದಲ್ಲಿ ಕೇರಳದ ಚೆಂಡೆ ವಾದ್ಯದೊಂದಿಗೆ ದೀಪಾರಾಧನೆ ನಡೆಯಿತು.
ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಪದಾಧಿಕಾರಿಗಳು, ತಕ್ಕ ಮುಖ್ಯಸ್ಥರು ಹಾಗೂ ಊರ ಪರ ಊರಿನ ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಭಾಗವಹಿಸಿದ್ದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.