ಸಾರಾಂಶ
ನರಸಿಂಹರಾಜಪುರ: ಬೆಂಗಳೂರಿನ ಆರ್ಯನ್ ಪಿಟ್ನೆಸ್ ಕ್ಲಾಸಿಕ್ -2025 ರಾಜ್ಯಮಟ್ಟದ ಡೆಡ್ ಲಿಪ್ಟ್ ಚಾಂಪಿಯನ್ ಶಿಪ್ ನಲ್ಲಿ ತಾಲೂಕಿನ ಕಡಹಿನಬೈಲು ಗ್ರಾಪಂ ಮುಧುಕುರು ( ಮಾಕೋಡು) ತೇಲಾ ಕಾಡನ್ ಶೈಜು ಅವರ ಪುತ್ರ ಟಿ.ಎಸ್. ಜಿನೇಶ್ ಭಾಗವಹಿಸಿ 74 ವಿಭಾಗದಲ್ಲಿ ಡೆಡ್ ಲಿಫ್ಟ್ 227.5 ಕೆಜಿಬಾರ ಎತ್ತುವ ಮೂಲಕ ಪ್ರಥಮ ಸ್ಥಾನ ಗಳಿಸಿ ಪ್ರಶಸ್ತಿ ಪಡೆದಿದ್ದಾರೆ.
- ಸತತ 4 ನೇ ಬಾರಿ ರಾಜ್ಯ ಮಟ್ಟದಲ್ಲಿ ಪ್ರಥಮ
ನರಸಿಂಹರಾಜಪುರ: ಬೆಂಗಳೂರಿನ ಆರ್ಯನ್ ಪಿಟ್ನೆಸ್ ಕ್ಲಾಸಿಕ್ -2025 ರಾಜ್ಯಮಟ್ಟದ ಡೆಡ್ ಲಿಪ್ಟ್ ಚಾಂಪಿಯನ್ ಶಿಪ್ ನಲ್ಲಿ ತಾಲೂಕಿನ ಕಡಹಿನಬೈಲು ಗ್ರಾಪಂ ಮುಧುಕುರು ( ಮಾಕೋಡು) ತೇಲಾ ಕಾಡನ್ ಶೈಜು ಅವರ ಪುತ್ರ ಟಿ.ಎಸ್. ಜಿನೇಶ್ ಭಾಗವಹಿಸಿ 74 ವಿಭಾಗದಲ್ಲಿ ಡೆಡ್ ಲಿಫ್ಟ್ 227.5 ಕೆಜಿಬಾರ ಎತ್ತುವ ಮೂಲಕ ಪ್ರಥಮ ಸ್ಥಾನ ಗಳಿಸಿ ಪ್ರಶಸ್ತಿ ಪಡೆದಿದ್ದಾರೆ.ಸೀನಿಯರ್ ಕೆಟಗರಿಯಲ್ಲಿ ಸ್ಟ್ರಾಂಗೆಸ್ಟ್ ಮೆನ್ ಆಫ್ ಕರ್ನಾಟಕ ಟೈಟಲ್ ವಿನ್ನರ್ ಪ್ರಶಸ್ತಿ, ಮೆಡಲ್, ಟ್ರೋಫಿ ಹಾಗೂ 2 ಸಾವಿರ ರುಪಾಯಿ ನಗದು ಬಹುಮಾನ ಪಡೆದುಕೊಂಡಿದ್ದಾರೆ.
ಕಳೆದ 3 ಬಾರಿ ಬೆಂಗಳೂರಿನಲ್ಲಿ ನಡೆದ ಓಪನ್ ಕರ್ನಾಟಕ ಡೆಡ್ ಲಿಫ್ಟ್ ಅಂಡ್ ಪಿಟ್ನೆಸ್ ಛಾಂಪಿಯನ್ ಶಿಪ್ ನಲ್ಲಿ ಟಿ.ಎಸ್.ಜಿನೇಶ್ ಸತತವಾಗಿ 3 ಭಾರಿಯೂ 66 ಕೆಜಿ ವಿಭಾಗದಲ್ಲಿ ಕ್ರಮವಾಗಿ 210 ಕೆಜಿ, 222.5 ಕೆಜಿ ಹಾಗೂ 220 ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದರು. ಕಳೆದ ವರ್ಷ ಹಾಗೂ ಈ ವರ್ಷ ಸೀನಿಯರ್ ಮೆನ್ಸ್ ಕೆಟಗೇರಿಯಲ್ಲಿ ಸ್ಟಾಂಗೆಸ್ಟ್ ಮೆನ್ ಆಫ್ ಕರ್ನಾಟಕ ಟೈಟಲ್ ವಿನ್ನರ್ ನ್ನು ಪಡೆದಿದ್ದು ನರಸಿಂಹರಾಜಪುರ ತಾಲೂಕಿಗೆ ಹಾಗೂ ಹುಟ್ಟೂರಿಗೆ ಕೀರ್ತಿ ತಂದಿದ್ದಾರೆ.