ಸಾರಾಂಶ
ಬಿಟ್ಟ ನೀರು ತಾಲೂಕಿನ ನದಿ ಹತ್ತಿರದ ಗ್ರಾಮ ಲಖಮಾಪುರಕ್ಕೆ ನೀರು ನುಗ್ಗಿದ್ದು ಗ್ರಾಮಸ್ಥರಲ್ಲಿ ಆತಂಕ
ನರಗುಂದ
ಮಲಪ್ರಭೆ ನದಿಯ ಮೇಲ್ಭಾಗದಲ್ಲಿ ಕಳೆದ ಹಲವು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವುದರಿಂದ ನದಿ ಮೂಲಕ ಮಲಪ್ರಭಾ ಜಲಾಶಯಕ್ಕೆ 35 ಟಿಎಂಸಿ ನೀರು ಬಂದಿದ್ದರಿಂದ ಕಳೆದ ನಾಲ್ಕೈದು ದಿನಗಳಿಂದ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗಿದೆ. ಹೀಗೆ ಬಿಟ್ಟ ನೀರು ತಾಲೂಕಿನ ನದಿ ಹತ್ತಿರದ ಗ್ರಾಮ ಲಖಮಾಪುರಕ್ಕೆ ನೀರು ನುಗ್ಗಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.ಲಖಮಾಪುರ ಗ್ರಾಮ ನದಿ ಮಟ್ಟದಿಂದ ಸ್ವಲ್ಪ ಎತ್ತರ ಪ್ರದೇಶದಲ್ಲಿರುವುದರಿಂದ 20ರಿಂದ 25ಸಾವಿರ ಕ್ಯುಸಕ್ ನೀರು ನದಿಗೆ ಬರುವವರೆಗೆ ನಮ್ಮ ಗ್ರಾಮಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಗ್ರಾಮಸ್ಥ ಶಂಕರಗೌಡ ನಡವಿನಮನಿ ಹೇಳಿದರು.
ಆ.1ರಂದು ಮತ್ತೆ ನದಿಗೆ 3000 ಸಾವಿರ, ಈ ಮೊದಲು 12 ಸಾವಿರ ಸೇರಿ ಒಟ್ಟು 15 ಸಾವಿರ ಕ್ಯುಸೆಕ್ ನೀರು ನೀರು ಲಖಮಾಪುರ ಗ್ರಾಮದ ರಸ್ತೆಗಳಿಗೆ ನುಗ್ಗಿದೆ.ಭೇಟಿ:ಕೊಣ್ಣೂರ ಹೋಬಳಿಯ ಕಂದಾಯ ನಿರೀಕ್ಷಕ ಜಿ.ವೈ.ಕಳಸನ್ನವರ ಲಖಮಾಪುರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಜತೆ ಮಾತನಾಡಿ, ನದಿಯ ಮೇಲ್ಬಾಗದಲ್ಲಿ ಹೆಚ್ಚು ಮಳೆ ಸುರಿಯುತ್ತಿದೆ. ಈಗಾಗಲೇ ಜಲಾಶಯ ಸಂರ್ಪೂಣ ಭರ್ತಿಯಾಗಿದೆ. ಆದ್ದರಿಂದ ಯಾವುದೇ ಕ್ಷಣದಲ್ಲಿ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಬಿಡಬಹುದು. ಗ್ರಾಮಸ್ಥರು ನದಿಯಲ್ಲಿ ಜಾನುವಾರು ಮೈ ತೊಳೆಯುವುದು, ಈಜುಲು ಹೋಗಬಾರದೆಂದು ಮನವಿ ಮಾಡಿದರು.
;Resize=(128,128))
;Resize=(128,128))
;Resize=(128,128))
;Resize=(128,128))