ಆರೋಗ್ಯ ಇಲಾಖೆಯ ಕಾಳಜಿಯಿಂದ ಮಲೇರಿಯಾ ನಿಯಂತ್ರಣ: ಡಾ. ಚಂದ್ರಶೇಖರ್

| Published : Jun 24 2024, 01:38 AM IST

ಸಾರಾಂಶ

ಮನೆ ಮುಂದೆ ಮಳೆ ನೀರು ನಿಲ್ಲುವುದು, ತೆಂಗಿನ ಚಿಪ್ಪಿನಲ್ಲಿ ನೀರು ಸಂಗ್ರಹ, ಟೈರ್ ನಲ್ಲಿ ನೀರು ಸಂಗ್ರಹ ವಾಗದಂತೆ ನೋಡಿಕೊಳ್ಳಬೇಕು. ಪ್ರತಿ ಕುಟುಂಬದಲ್ಲಿ ಒಂದು ದಿನ ಸ್ವಚ್ಛತೆಗೆ ಮೀಸಲಿಟ್ಟು, ಶುಚಿತ್ವ ಕಾಪಾಡಿಕೊಂಡಾಗ ರೋಗಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ.

ಶಿರಾ: ಆರೋಗ್ಯ ಇಲಾಖೆಯ ಹೆಚ್ಚಿನ ಕಾಳಜಿ ಮತ್ತು ಎಚ್ಚರ ವಹಿಸಿದ ಪರಿಣಾಮ ಮಲೇರಿಯಾ ರೋಗ ಹರಡದಂತೆ ತಡೆಗಟ್ಟಲು ಸಾಧ್ಯವಾಗಿದೆ. ಸೊಳ್ಳೆಗಳಿಂದ ಮಲೇರಿಯಾ, ಡೆಂಘೀಯಂತಹ ಕಾಯಿಲೆ ಬರಲಿದ್ದು, ಪ್ರತಿಯೊಬ್ಬರೂ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ಚಂದ್ರಶೇಖರ್ ಹೇಳಿದರು.ಶಿರಾ ತಾಲೂಕಿನ ದ್ವಾರನಕುಂಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆರೋಗ್ಯ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮನೆ ಮುಂದೆ ಮಳೆ ನೀರು ನಿಲ್ಲುವುದು, ತೆಂಗಿನ ಚಿಪ್ಪಿನಲ್ಲಿ ನೀರು ಸಂಗ್ರಹ, ಟೈರ್ ನಲ್ಲಿ ನೀರು ಸಂಗ್ರಹ ವಾಗದಂತೆ ನೋಡಿಕೊಳ್ಳಬೇಕು. ಪ್ರತಿ ಕುಟುಂಬದಲ್ಲಿ ಒಂದು ದಿನ ಸ್ವಚ್ಛತೆಗೆ ಮೀಸಲಿಟ್ಟು, ಶುಚಿತ್ವ ಕಾಪಾಡಿಕೊಂಡಾಗ ರೋಗಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ. ಮನೆ, ಗ್ರಾಮ ನಮ್ಮದು ಎಂಬ ಭಾವನೆಯೊಂದಿಗೆ ಸ್ವಚ್ಛತೆಗೆ ಆದ್ಯತೆ ನೀಡಿದಾಗ ಆರೋಗ್ಯವಂತ ಪರಿಸರ ನಿರ್ಮಿಸಲು ಸಾಧ್ಯ ಎಂದರು.

ದ್ವಾರನಕುಂಟೆ ಗ್ರಾಪಂ ಅಧ್ಯಕ್ಷ ಮಂಜುನಾಥ್, ವೈದ್ಯಾಧಿಕಾರಿ ಡಾ. ತಿಮ್ಮರಾಜು, ಜಿಲ್ಲಾ ಮಲೇರಿಯಾ ನಿಯಂತ್ರಣ ಮೇಲ್ವಿಚಾರಕ ಸತೀಶ್, ಗ್ರಾಮ ಪಂಚಾಯತಿ ಸದಸ್ಯ ನಿಜಲಿಂಗಪ್ಪ, ಮುಖಂಡ ಶ್ರೀ ರಾಮಯ್ಯ, ಮುಖ್ಯ ಶಿಕ್ಷಕ ಹನುಮಂತರಾಯಪ್ಪ, ಶಿಕ್ಷಕ ದೇವರಾಜು, ಆರೋಗ್ಯ ಇಲಾಖೆಯ ಕವಿತಾ, ವಿಜಯಲಕ್ಷ್ಮೀ, ರಘು, ಕಿಶೋರ್, ನಿರಂಜನ್, ಈರಣ್ಣ ಸೇರಿ ಆಶಾ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.