ಅಕ್ಕ ಸಮ್ಮೇಳನಕ್ಕೆ 2ನೇ ಬಾರಿಗೆ ಮಳವಳ್ಳಿ ಮಹಾದೇವಸ್ವಾಮಿ ಭಾಗಿ

| Published : Aug 29 2024, 12:52 AM IST

ಅಕ್ಕ ಸಮ್ಮೇಳನಕ್ಕೆ 2ನೇ ಬಾರಿಗೆ ಮಳವಳ್ಳಿ ಮಹಾದೇವಸ್ವಾಮಿ ಭಾಗಿ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಮಲೆ ಮಹದೇಶ್ವರಸ್ವಾಮಿ ಹಾಗೂ ಶ್ರೀ ಮಂಟೇಸ್ವಾಮಿ ಭಕ್ತಿ ಗೀತೆಗಳನ್ನಾಡುವ ಮೂಲಕ ನಾಡಿನ ಮೂಲೆ ಮೂಲೆಗಳಲ್ಲಿ ಮನೆ ಮಾತಾಗಿರುವುದರ ಜೊತೆಗೆ ದೇಶ ವಿದೇಶಗಳಲ್ಲೂ ಜನಪ್ರಿಯರಾಗಿರುವ ಮಹಾದೇವ ಸ್ವಾಮಿ ಅವರು ನಮ್ಮ ತಾಲೂಕಿನವರು ಎಂಬುದು ಹೆಮ್ಮೆಯ ಸಂಗತಿ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಜಾನಪದ ಕಲೆ ಶ್ರೀಮಂತಿಕೆಯನ್ನು ಫಸರಿಸಲು ಅಂತಾರಾಷ್ಟ್ರೀಯ ಜಾನಪದ ಕಲಾವಿದ ಮಳವಳ್ಳಿ ಮಹಾದೇವಸ್ವಾಮಿ ಅಮೆರಿಕಾದಲ್ಲಿ ನಡೆಯಲ್ಲಿರುವ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವುದು ಜಾನಪದ ಹಿರಿಮೆಗೆ ಸಾಕ್ಷಿಯಾಗಿದೆ ಎಂದು ಡಾ.ರಾಜ್‌ಕುಮಾರ್ ಕಲಾ ಸಂಘದ ಅಧ್ಯಕ್ಷ ದೊಡ್ಡಯ್ಯ ಬಣ್ಣಿಸಿದರು.

ಪಟ್ಟಣದ ಡಾ.ಎಂ.ಮಹದೇವಸ್ವಾಮಿ ಅವರ ನಿವಾಸದಲ್ಲಿ ಅಮೆರಿಕಾದ ನ್ಯೂಯಾರ್ಕ್ ನಲ್ಲಿ ಜರುಗಲಿರುವ ಅಕ್ಕ ಸಮ್ಮೇಳನದಲ್ಲಿ ಭಾಗಿಯಾಗಲು ತೆರಳುತ್ತಿರುವ ಜಾನಪದ ಕಲಾವಿದ ಮಳವಳ್ಳಿ ಮಹಾದೇವಸ್ವಾಮಿ ಅವರನ್ನು ತಾಲೂಕಿನ ನಾಗರಿಕರ ಪರವಾಗಿ ಕನ್ನಡ ಪರ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಸನ್ಮಾನಿಸಿ ಮಾತನಾಡಿದರು.

ಶ್ರೀ ಮಲೆ ಮಹದೇಶ್ವರಸ್ವಾಮಿ ಹಾಗೂ ಶ್ರೀ ಮಂಟೇಸ್ವಾಮಿ ಭಕ್ತಿ ಗೀತೆಗಳನ್ನಾಡುವ ಮೂಲಕ ನಾಡಿನ ಮೂಲೆ ಮೂಲೆಗಳಲ್ಲಿ ಮನೆ ಮಾತಾಗಿರುವುದರ ಜೊತೆಗೆ ದೇಶ ವಿದೇಶಗಳಲ್ಲೂ ಜನಪ್ರಿಯರಾಗಿರುವ ಮಹಾದೇವ ಸ್ವಾಮಿ ಅವರು ನಮ್ಮ ತಾಲೂಕಿನವರು ಎಂಬುದು ಹೆಮ್ಮೆಯ ಸಂಗತಿ ಎಂದರು.

ಮಹಾದೇವಸ್ವಾಮಿ ಶ್ರೇಷ್ಠ ಕಲಾವಿದರು, ಅಕ್ಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅಮೆರಿಕಾಕ್ಕೆ ತೆರಳುತ್ತಿರುವುದು ಮಳವಳ್ಳಿಯ ಕೀರ್ತಿಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದ ಗೌರವ ಸಲ್ಲುತ್ತದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಅಭಿನಂದನೆ ಸ್ವೀಕರಿಸಿದ ಡಾ.ಎಂ.ಮಹಾದೇವಸ್ವಾಮಿ ಮಾತನಾಡಿ, ಹೊಟ್ಟೆಪಾಡಿಗಾಗಿ ಕಲಿತ ಜಾನಪದ ಕಲೆ ಇಂದು ತನ್ನನ್ನು ವಿಶ್ವಮಟ್ಟಕ್ಕೆ ಕರೆದೊಯ್ಯುತ್ತದೆ ಎಂದು ಊಹೆನೂ ಕೂಡ ಮಾಡಿರಲಿಲ್ಲ. ಆದರೆ, ಜಾನಪದ ಕಲೆ ಉಳಿಸಿ ಬೆಳೆಸಿದರೆ ಕಲಾವಿದರನ್ನು ಕೈಹಿಡಿದು ಮುನ್ನಡೆಸುತ್ತದೆ ಎನ್ನುವುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ ಎಂದರು.

ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿ ಹರಸಿ ಆಶೀರ್ವದಿಸಿದ ಎಲ್ಲಾ ಗುರು ಹಿರಿಯರು, ಮಳವಳ್ಳಿ ಜನತೆ ಹಾಗೂ ನಾಡಿನ ಮಹಾ ಜನತೆಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುವುದಾಗಿ ಹೇಳಿದರು.

ಅಮೆರಿಕಾದ ಅಕ್ಕ ಸಮ್ಮೇಳಕ್ಕೆ ಎರಡನೇ ಬಾರಿಗೆ ಭಾಗವಹಿಸುತ್ತಿದ್ದೇನೆ. ಅಮೆರಿಕಾದಲ್ಲಿ ಲಕ್ಷಾಂತರ ಮಂದಿ ಕನ್ನಡಿಗರು ವಾಸವಾಗಿದ್ದಾರೆ. ಸಮ್ಮೇಳನದಲ್ಲಿ ನಾನು ಹಾಡುವ ಹಾಡಿಗೆ ಕನ್ನಡಿಗರು ಕುಣಿದ್ದು ಕುಪ್ಪಳಿಸುತ್ತಾರೆ. ಅನ್ಯಾಕಾರಿ ಬ್ರಹ್ಮ ಸನ್ಯಾಸಿ ಮಾಡಬಹುದೇ ಎಂಬ ಹಾಗೂ ಜಗತ್ತಿನಾದ್ಯಂತ ವೈರಲ್ ಆಗಿತ್ತು. ಆ ಹಾಡನ್ನು ಹೆಚ್ಚಿನ ಮಂದಿ ಸಮ್ಮೇಳನದಲ್ಲಿ ನಿರೀಕ್ಷೆ ಪಡುತ್ತಾರೆ ಎಂದುಕೊಳ್ಳುತ್ತೇನೆ. ಜಾನಪದ ಕಲೆಯನ್ನು ಶಕ್ತಿ ಮೀರಿ ಧಾರೆ ಎರೆದು ನಮ್ಮ ಕನ್ನಡಿಗರಿಗೆ ಮನರಂಜನೆಯನ್ನು ನೀಡುವುದಾಗಿ ತಿಳಿಸಿದರು.

ವಿವಿಧ ಸಂಘಟನೆಯ ಮುಖಂಡರು ಮಹಾದೇವಸ್ವಾಮಿ ನಿವಾಸದಲ್ಲಿ ಹಾರ, ತುರಾಯಿಗಳ ಜೊತೆ ಮೈಸೂರು ಪೇಟ ತೊಡಿಸಿ, ಸನ್ಮಾನಿಸಿ ಪ್ರಯಾಣ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು. ತಾಲೂಕು ಕಸಾಪ ಅಧ್ಯಕ್ಷ ಚೇತನ್ ಕುಮಾರ್, ರಾಶಿರಾಪು ಸೇನಾ ಸಮಿತಿ ಕೃಷ್ಣ, ಮುಖಂಡರಾದ ಷರೀಫ್, ಸಂತೋಷ್, ಯಮದೂರು ನಾಗರಾಜು, ಆನಂದ್ ಕುಮಾರ್, ಗಜೇಂದ್ರ ಮುಂತಾದವರು ಇದ್ದರು.