ಮಲೇಶಿಯಾ ವಿವಿ- ಸಿದ್ಧಾರ್ಥ ಕಾಲೇಜು ಒಡಂಬಡಿಕೆ

| Published : Sep 22 2025, 01:00 AM IST

ಸಾರಾಂಶ

ಶ್ರೀ ಸಿದ್ಧಾರ್ಥ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್, ಮಲೇಶಿಯಾದ ಐಎನ್‌ಟಿಐ ವಿಶ್ವವಿದ್ಯಾಲಯದೊಂದಿಗೆ ಪರಸ್ಪರ ಜಂಟಿ ಒಡಂಬಡಿಕೆ ಮಾಡಿಕೊಂಡಿವೆ.

ಕನ್ನಡಪ್ರಭ ವಾರ್ತೆ, ತುಮಕೂರುವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಿನಿಮಯದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮತ್ತು ವಾಣಿಜ್ಯ ಮತ್ತು ವ್ಯವಹಾರ ಕ್ಷೇತ್ರದ ಉನ್ನತ ಶಿಕ್ಷಣವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಗರದ ಶ್ರೀ ಸಿದ್ಧಾರ್ಥ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್, ಮಲೇಶಿಯಾದ ಐಎನ್‌ಟಿಐ ವಿಶ್ವವಿದ್ಯಾಲಯದೊಂದಿಗೆ ಪರಸ್ಪರ ಜಂಟಿ ಒಡಂಬಡಿಕೆ ಮಾಡಿಕೊಂಡಿವೆ.ಮಲೇಶಿಯಾದ ಕೌಲಾಲಂಪುರ್‌ದ ಯುಸಿಎಸ್‌ಐ ವಿಶ್ವವಿದ್ಯಾಲಯದಲ್ಲಿನ ಕ್ಯಾಂಪಸ್ ಹಮ್ಮಿಕೊಳ್ಳಲಾದ 5 ದಿನಗಳ ಜಾಗತಿಕ ಶೈಕ್ಷಣಿಕ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಂಬಿಎ ಶೈಕ್ಷಣಿಕ ಡೀನ್ ಪವಿತ್ರಾ ಎನ್ ಮತ್ತು ಸಹಾಯಕ ಪ್ರಾಧ್ಯಾಪಕಿ ಸ್ಮಿತಾ ಎಸ್ ಅವರನ್ನೊಳಗೊಂಡ ತಂಡ ಐಎನ್‌ಟಿಐ ವಿಶ್ವವಿದ್ಯಾಲಯದ ಶೈಕ್ಷಣಿಕ ಪ್ರತಿನಿಧಿಗಳ ಜಂಟಿ ಸಭೆಯಲ್ಲಿ ಎರಡು ಸಂಸ್ಥೆಗಳು ಶೈಕ್ಷಣಿಕ ಕ್ಷೇತ್ರದ ಸಹಕಾರ ಸಂಬಂಧಗಳ ಕುರಿತು ರ್ಚಿ ಸಿದವು. ನಂತರ ಒಡಂಬಡಿಕೆ ಪರಸ್ಪರ ಸಹಿ ಹಾಕಲಾಯಿತು.ಒಪ್ಪಂದದ ಅಡಿಯಲ್ಲಿ ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕರ ಶೈಕ್ಷಣಿಕ ವಿನಿಮಯ ಕಾರ್ಯಕ್ರಮಗಳು, ಶೈಕ್ಷಣಿಕ ಸಹಯೋಗದ ಕಾರ್ಯಕ್ರಮಗಳು, ಜಂಟಿ ಸಂಶೋಧನೆ ಮತ್ತು ಪ್ರಕಟಣೆಗಳು, ಶೈಕ್ಷಣಿಕ ಮಾಹಿತಿಯ ವಿನಿಮಯ, ಅಂತಾರಾಷ್ಟ್ರೀಯ ಕೇಂದ್ರದ ಸ್ಥಾಪನೆ ಹಾಗೂ ಕಾರ್ಯಕ್ರಮಗಳು, ವಿಚಾರ ಸಂಕಿರಣಗಳು, ತರಬೇತಿ, ಸಮ್ಮೇಳನಗಳು ಮತ್ತು ವಿಜ್ಞಾನ ಮಾಲಿಕೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ. ಎರಡೂ ಸಂಸ್ಥೆಗಳ ಪರಸ್ಪರ ಒಪ್ಪಿಗೆಯಿಂದ ಇತರೆ ಹಲವು ಶೈಕ್ಷಣಿಕ ಕಪಗಳನ್ನೂ ಮುಂದುವರಿಸಲು ಯೋಜಿಸಲಾಗಿದೆ ಎಂದು ನಿಯೋಗದ ನೇತೃತ್ವ ವಹಿಸಿರುವ ಶ್ರೀ ಸಿದ್ಧಾರ್ಥ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಶೈಕ್ಷಣಿಕ ಡೀನ್ ಪವಿತ್ರಾ ಎನ್ ಅವರು ಅಭಿಪ್ರಾಯಪಟ್ಟಿದ್ದಾರೆ.ಈ ಒಡಂಬಡಿಕೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ತರಗತಿಯೇತರ ಸಮುದಾಯಗಳು ಚಟುವಟಿಕೆಗಳು ಮತ್ತು ಇತರೆ ಉದ್ದೇಶಗಳೊಂದಿಗೆ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುವುದು. ವಿದ್ಯಾರ್ಥಿಗಳು ತಮ್ಮ ಪರಸ್ಪರ ಕೌಶಲ್ಯಗಳನ್ನು ಬಲಪಡಿಸಲು ಮತ್ತು ಅವರ ವೈಯಕ್ತಿಕ ಅಭಿವೃದ್ಧಿ ಮತ್ತು ವಿಶ್ವವಿದ್ಯಾಲಯದ ಅನ್ವಯಿಕೆಗಳಿಗೆ ಸಕಾರಾತ್ಮಕವಾಗಿ ಕೊಡುಗೆ ನೀಡಲು ಈ ಒಪ್ಪಂದ ಸಹಾಯ ಮಾಡುತ್ತದೆಈ ಶೈಕ್ಷಣಿಕ ನಿಯೋಗದದಲ್ಲಿ ಕಾಲೇಜಿನ 10 ವಿದ್ಯಾರ್ಥಿಗಳು ಮತ್ತು ಇಬ್ಬರು ಪ್ರಾಧ್ಯಾಪಕರನ್ನೊಳಗೊಂಡ ತಂಡ ಮಲೇಶಿಯಾದ ಮತ್ತೊಂದು ಪ್ರತಿಷ್ಠಿತ ಸಂಸ್ಥೆಯಾದ ಯುಸಿಎಸ್ಐ ವಿಶ್ವವಿದ್ಯಾಲಯದಲ್ಲಿ ಐದು ದಿನಗಳ ಜಾಗತಿಕ ಶೈಕ್ಷಣಿಕ ಮೇಳದಲ್ಲಿ ಭಾಗವಹಿಸಿದೆ. ಈ ಕಾರ್ಯ ಕ್ರಮ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿನ ಶೈಕ್ಷಣಿಕ ಪರಿಸರ, ವೃತ್ತಿಪರ ಸಂವಾದಗಳು ಮತ್ತು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಅನುಭವ ದೊರಕಿತು. ಈ ಪ್ರಯಾಣವು ವಿದ್ಯಾರ್ಥಿ ಗಳಲ್ಲಿ ಜಾಗತಿಕ ದೃಷ್ಟಿಕೋನ ಬೆಳೆಯಲು ಹಾಗೂ ಶೈಕ್ಷಣಿಕವಾಗಿ ನೂತನ ಜ್ಞಾನವನ್ನು ಅಳವಡಿಸಿಕೊಳ್ಳಲು ಸಹಾಯವಾಗಿದೆ.