ಸಾರಾಂಶ
ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯದಂಚಿನ ಜಕ್ಕಹಳ್ಳಿ ಗ್ರಾಮದಲ್ಲಿ ವಿದ್ಯುತ್ ತಗುಲಿ ಗಂಡು ಮರಿಯಾನೆಯೊಂದು ಬಲಿಯಾದ ಘಟನೆ ಸೋಮವಾರ ರಾತ್ರಿ ನಡೆದಿದೆ.ಜಕ್ಕಹಳ್ಳಿ ಸ.ನಂ.66 ರ ಜಮೀನಿನಲ್ಲಿ ಗಂಡಾನೆ ಮರಿಯೊಂದು ಮೃತಪಟ್ಟಿದ್ದು, ಜಮೀನಿನ ಶೆರಿಯರ್ ಖಾನೆ ಸೇರಿದೆ. ಮೂರು ವರ್ಷದ ಗಂಡಾನೆ ಮರಿಯು ಸತ್ತು ಬಿದ್ದಿತ್ತು. ಸತ್ತ ಆನೆ ಮರಿಯಾನೆಯ ಪಕ್ಕದಲ್ಲೇ ದಬ್ಬೆಗಳ ಸಹಾಯದಿಂದ ತಂತಿ ಕಟ್ಟಿದ್ದು, ಅಕ್ರಮವಾಗಿ ವಿದ್ಯುತ್ ಹಾಯಿಸಿ ವಿದ್ಯುತ್ ಸ್ಪರ್ಷಸಿ ಆನೆ ಮರಿ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.ಶೆರಿಯರ್ ಖಾನ್‌ಗೆ ಸೇರಿದ ಜಮೀನನ್ನು ನೋಡಿಕೊಳ್ಳುತ್ತಿದ್ದ ಆನಂಜಿ ಹುಂಡಿಯ ಮುನಿಯ,ಶೆರಿಯರ್ ಖಾನ್,ಮೆನಜರ್ ಆದಿಲ್,ಶೇಖರ್ ರಾಜು ಅರಸ್ ಮೇಲೆ ಭಾರತೀಯ ವಿದ್ಯುತ್ ಕಾಯ್ದೆ 2003ರ ಅಡಿ ಹಾಗೂ ವನ್ಯಜೀವಿ ಸಂರಕ್ಷಣೆ ಕಾಯ್ದೆ 1972ರ ಅಡಿಯಲ್ಲಿ ಗುಂಡ್ಲುಪೇಟೆ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆನೆಯ ಮೃತ ದೇಹವನ್ನು ಪಶು ವೈದ್ಯ ಡಾ. ಮಿರ್ಜಾ ವಾಸೀಂ ಪರೀಕ್ಷೆಗೆ ನಡೆಸಿದರು.
ಸ್ಥಳಕ್ಕೆ ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗು ನಿರ್ದೇಶಕ ಎಸ್.ಪ್ರಭಾಕರನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್, ಕುಂದಕೆರೆ ವಲಯ ಅರಣ್ಯಾಧಿಕಾರಿ ಬಿ.ಎಂ ಮಲ್ಲೇಶ್, ಸೆಸ್ಕಾಂ ಎಇಇ ಸಿದ್ದಲಿಂಗಪ್ಪ ಇದ್ದರು.-------------------
26ಸಿಎಚ್‌ಎನ್57ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯದಂಚಿನ ಜಕ್ಕಹಳ್ಳಿ ಗ್ರಾಮದಲ್ಲಿ ವಿದ್ಯುತ್ ತಗುಲಿ ಗಂಡು ಮರಿಯಾನೆಯೊಂದು ಸಾವನ್ನಪ್ಪಿರುವುದು.
----------------