ಸಾರಾಂಶ
ಮಹಾರಾಷ್ಟ್ರದ ಮಾಲೇಗಾಂವ್‌ನಲ್ಲಿ 2006ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ 17 ವರ್ಷದ ನಂತರ ತೀರ್ಪು ಹೊರಬಂದಿದೆ. ಬಂಧಿತ ಹಿಂದೂ ಹೋರಾಟಗಾರರಾದ ಸನ್ಯಾಸಿನಿ ಪ್ರಜ್ಞಾಸಿಂಗ್ ಠಾಕೂರ, ಕರ್ನಲ್ ಪುರೋಹಿತ್ ಸೇರಿದಂತೆ 7 ಜನರನ್ನು ನಿರಪರಾಧಿ ಎಂದು ತೀರ್ಪು ನೀಡಿ ಬಿಡುಗಡೆಗೊಳಿಸಿರುವುದನ್ನು ಸ್ವಾಗತಿಸುವುದಾಗಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ ತಿಳಿಸಿದರು.
ಕನ್ನಡಪ್ರಭ ವಾರ್ತೆ ಜಮಖಂಡಿ
ಮಹಾರಾಷ್ಟ್ರದ ಮಾಲೇಗಾಂವ್‌ನಲ್ಲಿ 2006ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ 17 ವರ್ಷದ ನಂತರ ತೀರ್ಪು ಹೊರಬಂದಿದೆ. ಬಂಧಿತ ಹಿಂದೂ ಹೋರಾಟಗಾರರಾದ ಸನ್ಯಾಸಿನಿ ಪ್ರಜ್ಞಾಸಿಂಗ್ ಠಾಕೂರ, ಕರ್ನಲ್ ಪುರೋಹಿತ್ ಸೇರಿದಂತೆ 7 ಜನರನ್ನು ನಿರಪರಾಧಿ ಎಂದು ತೀರ್ಪು ನೀಡಿ ಬಿಡುಗಡೆಗೊಳಿಸಿರುವುದನ್ನು ಸ್ವಾಗತಿಸುವುದಾಗಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ ತಿಳಿಸಿದರು.ನಗರದ ದೇಸಾಯಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಮೊದಲಿನಿಂದಲೂ ಹಿಂದುಗಳನ್ನು ಭಯೋತ್ಪಾದಕರು ಎಂದು ಬಿಂಬಿಸಲು ಹೊರಟಿತ್ತು. ಹಿಂದುಗಳು ಎಂದಿಗೂ ಭಯೋತ್ಪಾದಕರಾಗಲು ಸಾಧ್ಯವಿಲ್ಲ. ವಿಶ್ವದಲ್ಲಿ ಮುಸ್ಲಿಮರು ಭಯೋತ್ಪಾದನೆ ನಡೆಸುತ್ತಿದ್ದಾರೆ. ಆದರೆ ಅವರ ಮತಗಳ ಆಸೆಯಿಂದ ತುಷ್ಟೀಕರಣ ನಮ್ಮ ದೇಶದಲ್ಲಿ ನಡೆಯುತ್ತಿದ್ದು, ಹಿಂದುಗಳನ್ನು ಭಯೋತ್ಪಾಕರೆಂದು ಅಪಪ್ರಚಾರ ಮಾಡುವ ಹುನ್ನಾರಕ್ಕೆ ಇಂದು ಹೊರಬಿದ್ದಿರುವ ತೀರ್ಪು ಕಪಾಳ ಮೋಕ್ಷ ಮಾಡಿದೆ ಎಂದು ಕುಟುಕಿದರು.
ಮಾಲೇಗಾಂವ ಪ್ರಕರಣದಲ್ಲಿ ಅಮಾಯಕ ಹಿಂದು ಹೋರಾಟಗಾರರನ್ನು ಬಂಧಿಸಿದ ಕಾಂಗ್ರೆಸ್, ಕಠಿಣವಾಗಿ ನಡೆಸಿಕೊಳ್ಳುವುದಲ್ಲದೆ, ಹಿಂಸೆ ನೀಡಿತ್ತು. ಎನ್‌ಐಎ ಪ್ರಕರಣದ ತನಿಖೆ ನಡೆಸಿ, ವರದಿ ಸಲ್ಲಿಸಿತ್ತು. ನ್ಯಾಯಾಲಯ ಹಿಂದೂಗಳ ಪರವಾಗಿ ತೀರ್ಪುನೀಡಿದೆ. ಇನ್ನಾದರೂ ಕಾಂಗ್ರೆಸ್ ಮುಸ್ಲಿಂ ತುಷ್ಟೀಕರಣ ನಿಲ್ಲಿಸಲಿ ಎಂದು ಹೇಳಿದರು.ನಗರದ ವಿಶ್ವ ಹಿಂದೂ ಪರಿಷತ್, ಭಜರಂಗದಳ, ಶ್ರೀರಾಮ ಸೇನೆ, ಸೇರಿದಂತೆ ಎಲ್ಲ ಹಿಂದೂ ಪರ ಸಂಘಟನೆಗಳಿಂದ ಪಟಾಕಿ ಸಿಡಿಸಿ ವಿಜಯೋತ್ಸವ, ಸಂಭ್ರಮಾಚರಣೆ ಮಾಡಲಾಗಿದೆ ಎಂದು ಹೇಳಿದರು. ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))