ಸಾರಾಂಶ
ಹೊಳಲ್ಕೆರೆ: ಮಲ್ಲಾಡಿಹಳ್ಳಿ ಶ್ರೀಗಳ ಸೇವಾ ಸಾಧನೆ ಶಾಘನೀಯವಾದದ್ದು ಅವರ ಸಾಧನೆ ನಾಡಿಗೆ ಮಾದರಿಯಾದದ್ದಾಗಿದೆ ಎಂದು ಖ್ಯಾತ ಚಿತ್ರ ನಟ ಹಾಗೂ ನೃತ್ಯಪಟು ಡಾ.ಶ್ರೀಧರ್ ಹೇಳಿದರು.
ತಾಲೂಕಿನ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಸ್ಥಾಪಕದ್ವಯ ರಾಘವೇಂದ್ರ ಸ್ವಾಮೀಜಿ ಹಾಗೂ ಸೂರುದಾಸ್ ಸ್ವಾಮೀಜಿದ್ವಯರ ಸ್ಮರಣಾರ್ಥವಾಗಿ ಹಮ್ಮಿಕೊಳ್ಳಲಾಗಿದ್ದ 3 ದಿನಗಳ ನಾಟಕೋತ್ಸವದ ಪ್ರಥಮ ದಿನದ ಸಭಾ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ವಿದ್ಯಾಸಂಸ್ಥೆಗಳಲ್ಲಿ ನಾಟಕ ಪ್ರದರ್ಶನ ಅಗತ್ಯ ನಾಟಕ ಒಂದು ಆಕರ್ಷಕ ಮಾಧ್ಯಮವಾಗಿದ್ದು, ಜೀವನದಲ್ಲಿ ಅನುಭವಿಸುವ ಸಂಗತಿಗಳನ್ನು ರಂಗವೇದಿಕೆಯಲ್ಲಿ ಪ್ರಸ್ತುತಗೊಳಿಸಲಾಗುತ್ತದೆ ಇದರ ಮೂಲಕ ಆತ್ಮವಿಶ್ವಾಸ, ಸುಪ್ತಕಲೆ ಅನಾವರಣ ನಾಟಕದಲ್ಲಿ ಆಗುತ್ತದೆ ಆಂಗಿಕ, ವಾಚಿಕ, ಆಹಾರ್ಯ ಮತ್ತು ಸಾತ್ವಿಕ ಗುಣಗಳ ಅಭಿವ್ಯಕ್ತಿ ನಾಟ್ಯ ಮತ್ತು ನಾಟಕದಲ್ಲಿ ಮಾತ್ರ ಕಾಣಸಾಧ್ಯವಾಗುತ್ತದೆ ಎಂದರು.
ಶಾಸಕ ಡಾಂ.ಎಂ.ಚಂದ್ರಪ್ಪ ಮಾತನಾಡಿ, ಸಮಾಜಕ್ಕೆ ಒಳ್ಳೆಯ ಕೊಡುಗೆಗಳನ್ನು ನೀಡಿದ ಮಹನೀಯರು ರಾಘವೇಂದ್ರ ಸ್ವಾಮೀಜಿಯವರು ಜೋಳಿಗೆಯಿಂದ ಕಟ್ಟಿದಂತಹ ಸಂಸ್ಥೆಯನ್ನು ಸಮಾಜಕ್ಕೆ ಬಿಟ್ಟು ಹೋಗಿದ್ದಾರೆ ಅದನ್ನು ನಾವೆಲ್ಲರೂ ಸೇರಿ ಬೆಳಸೋಣ ಎಂದರು.ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಡಿ.ಕಂಬಾರ್ ಮಾತನಾಡಿ, ಸ್ವಾಮೀಜಿ ಅವರಿಂದ ಸ್ಥಾಪಿತವಾದ ವಿದ್ಯಾಸಂಸ್ಥೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳು ಎಲ್ಲಾ ರೀತಿಯಲ್ಲಿ ಅಭಿವೃದ್ಧಿಕಂಡು ಸರ್ವತೋಮುಖ ಬೆಳವಣಿಗೆ ಹೊಂದಿ ಸಮಾಜದಲ್ಲಿ ಉತ್ತಮ ನಾಗರೀಕರಾಗುವರು ಎಂದರು.
ಸಂಸ್ಥೆ ಉಪಾಧ್ಯಕ್ಷ ರಾಘವೇಂದ್ರ ಪಾಟೀಲ ಮಾತನಾಡಿ, ಸಾಮಾಜಿಕ ಸೌಹಾರ್ದತೆ ಬೆಳವಣಿಗೆಯನ್ನು ಹೆಚ್ಚಿಸುವ ದೃಷ್ಟಿಯಿಂದ ನಾಟಕೋತ್ಸವವನ್ನು ಅತ್ಯಂತ ಉತ್ಸಾಹದಿಂದ ಮಾಡುತ್ತಿದ್ದೇವೆ ಅದಕ್ಕೆ ಮಲ್ಲಾಡಿಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಸಹಕಾರ ಇದೆ ಎಂದರು.ಅನಾಥಸೇವಾಶ್ರಮದ ಕಾರ್ಯದರ್ಶಿ ಎಸ್.ಕೆ.ಬಸವರಾಜನ್, ವಿಶ್ವಸ್ತರಾದ ಕೆ.ಡಿ.ಬಡಿಗೇರ, ಎಲ್.ಎಸ್.ಶಿವರಾಮಯ್ಯ, ಡಿ.ಎನ್.ದ್ಯಾಮಣ್ಣ, ಖಜಾಂಚಿ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಆಶ್ರಮದ ವ್ಯವಸ್ಥಾಪಕರಾದ ಡಿ.ಕೆ.ಚಂದ್ರಪ್ಪ, ಸಂಪನ್ಮೂಲ ವ್ಯಕ್ತಿ ಶ್ರೀನಿವಾಸ ಶರ್ಮ, ಹಿರಿಯ ವಿದ್ಯಾರ್ಥಿಗಳಾದ ಪಿ.ಎಸ್.ಮೂರ್ತಿ, ಎಸ್.ಎ.ಒಡೆಯರ್. ಶಿಕ್ಷಕ ಜಿ.ಎಂ.ಗುರುಮೂರ್ತಿ ಪ್ರಾಚಾರ್ಯ ಡಾ.ಜಿ.ಯು.ನಾಗರಾಜ್ ಎಲ್ಲಾ ಶಾಲಾ ಕಾಲೇಜುಗಳ ಮುಖ್ಯಸ್ಥರು, ಅಧ್ಯಾಪಕರು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.