ಸಾರಾಂಶ
ಕನ್ನಡಪ್ರಭ ವಾರ್ತೆ ಲೋಕಾಪುರ
ದೇಸಿ ಕ್ರೀಡೆಯಾದ ಮಲ್ಲಕಂಬ ಇನ್ನು ಹೆಚ್ಚು ಬೆಳೆಯಲು ಅಗತ್ಯ ಸೌಲಭ್ಯ ಒದಗಿಸುವೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಭರವಸೆ ನೀಡಿದರು.ಪಟ್ಟಣದ ಸಿ.ಎಂ.ಪಂಚಕಟ್ಟಿಮಠ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಬಾಗಲಕೋಟೆ ವಿಶ್ವವಿದ್ಯಾಲಯದ ಏಕವಲಯ ಪುರುಷ ಮತ್ತು ಮಹಿಳಾ ಹಾಗೂ ರಾಷ್ಟ್ರಮಟ್ಟದ ಮಲ್ಲಕಂಬ ಚಾಂಪಿಯನ್ ಶಿಪ್ ಜೂನಿಯರ್ ಮತ್ತು ಸಿನಿಯರ್ ರಾಜ್ಯ ತಂಡದ ಆಟಗಾರರ ಆಯ್ಕೆ ಪ್ರಕ್ರಿಯೆಗೆ ಚಾಲನೆ ಹಾಗೂ ಕಾಲೇಜಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಗೆ ಉದ್ಘಾಟಿಸಿ ಮಾತನಾಡಿದ ಅವರು, ನೆಲದ ಮೇಲೆ ಮಾಡುವ ಯೋಗಾಸನವನ್ನು ಕಂಬದ ಮೇಲೆ ಚಾಕಚಕ್ಯತೆಯಿಂದ ಮಾಡುವ ಕಲೆಯೇ ಮಲ್ಲಕಂಬ ಎಂದು ತಿಳಿಸಿದರು.ಹೊಸದಾಗಿ ಮಹಾವಿದ್ಯಾಲಯಕ್ಕೆ ಸೇರ್ಪಡೆಯಾದ ಸಹಾಯಕ ಪ್ರಾಧ್ಯಾಪಕರಿಗೆ ಹಾಗೂ ರಾಜ್ಯದ ವಿವಿಧಡೆಯಿಂದ ಆಗಮಿಸಿದ ಸ್ಪರ್ಧಾರ್ಥಿಗಳಿಗೆ ಶುಭಾಶಯಗಳನ್ನು ಕೋರಿ ಈ ರೀತಿಯ ಸ್ಪರ್ಧೆ ತಮ್ಮ ಮತ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದರು. ಕಾಲೇಜು ಪ್ರಾಚಾರ್ಯ ಡಾ.ಮಲ್ಲಯ್ಯ ಮಾತನಾಡಿ, ಕರ್ನಾಟಕದಲ್ಲಿ ಮಲ್ಲಕಂಬಕ್ಕೆ ವಿಶಿಷ್ಟವಾದ ಸ್ಥಾನವಿದೆ. ಅದರಲ್ಲು ವಿಶೇಷವಾಗಿ ಬಾಗಲಕೋಟೆ, ಧಾರವಾಡ, ವಿಜಯಪುರ ಹಾಗೂ ಗದಗ ಜಿಲ್ಲೆಗಳಲ್ಲಿ ಮೈ ನವಿರೇಳಿಸುವ ಈ ಸಾಹಸ ಕ್ರೀಡೆಯಲ್ಲಿ ಹೆಚ್ಚಿನ ಕ್ರೀಡಾಪಟುಗಳು ತೊಡಗಿಕೊಂಡಿದ್ದಾರೆ. ಮಲ್ಲಕಂಬ ಕೆಲ ವರ್ಷಗಳಿಂದ ವೃತ್ತಿಪರ ಕ್ರೀಡೆಯಾಗಿ ಬದಲಾಗಿದೆ. ನಮ್ಮ ಕಾಲೇಜು ವಿದ್ಯಾರ್ಥಿಗಳು ಮಲ್ಲಕಂಭ ಸ್ಪರ್ಧೆಯಲ್ಲಿ ಇನ್ನೂ ಹೆಚ್ಚಿನ ಆಶಕ್ತಿದೊರೆಯಲಿ ಎಂದು ಶುಭಹಾರೈಸಿದರು. ಸ್ಥಳೀಯರಾದ ಲೋಕಣ್ಣ ಕೊಪ್ಪದ, ಶಿವಾನಂದ ಉದಪುಡಿ, ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಕೆ.ಎಂ.ಶಿರಹಟ್ಟಿ, ಕಾಲೇಜಿನ ಅಭಿವೃದ್ಧಿ ಮಂಡಳಿ ಸದಸ್ಯರಾದ ಶಿವಾನಂದ ಬಗಲಿ, ಶಿವಾನಂದ ಗಂಗಣ್ಣವರ, ಶಬ್ಬಿರ್ ಭಾಗವಾನ, ಬಸವರಾಜ ಮಠದ, ಗೋವಿಂದ ಕೌಲಗಿ, ರೇಖಾ ಪಾಟೀಲ, ಬಿ.ಬಿ.ಮಾಯಣ್ಣವರ, ವೆಂಕಣ್ಣ ಕಮಕೇರಿ, ಕಾಲೇಜಿನ ಸಿಬ್ಬಂದಿಯರಾದ ಮಂಜುಳಾ ಕಣವಿ, ಕೆ.ಗಾದಿಲಿಂಗಪ್ಪ, ಡಾ.ಇಸ್ಮಾಯಿಲ್ ನಧಾಪ, ಮಳೆಪ್ಪ ಗಾಣಗೇರ, ಮೂರ್ತಿ ಎಸ್.ಸಂತೋಷಕುಮಾರ, ಮೂರ್ತಿ ಆರ್.ಎಂ.ಸಿದ್ದರಾಮಪ್ಪ ಗಾಣಗೇರ, ಶಿವಕುಮಾರ ಮಲ್ಲಿಕಾರ್ಜುನ ಅಂಗಡಿ, ಹಣಮಂತ ನಿಂಗನಗೌಡರ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಇದ್ದರು. ವಿದ್ಯಾರ್ಥಿಗಳು ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಧ್ಯಾಪಕರು ಶ್ರಮಿಸಬೇಕು.
-ಆರ್.ಬಿ.ತಿಮ್ಮಾಪೂರ, ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವರು.