ಅಪ್ಪಟ ದೇಶಿಯ ಕ್ರೀಡೆ ಮಲ್ಲಕಂಬ

| Published : Dec 15 2023, 01:30 AM IST

ಸಾರಾಂಶ

ಅಪ್ಪಟ ದೇಶಿಯ ಕ್ರೀಡೆ ಮಲ್ಲಕಂಬ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಭಾರತದ ಭೂಮಿಯಲ್ಲಿ ಜನ್ಮ ತಾಳಿದ ಅಪ್ಪಟ ದೇಶಿಯ ಕ್ರೀಡೆಯೆಂದರೆ ಮಲ್ಲಕಂಬ ಎಂದು ಪ್ರಾಚಾರ್ಯ ಪ್ರೊ ಎಸ್.ಎಸ್. ಬಿರಾದಾರ ಹೇಳಿದರು.

ವಿದ್ಯಾಗಿರಿಯ ಬಸವೇಶ್ವರ ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಾಗಲಕೋಟೆ ವಿಶ್ವವಿದ್ಯಾಲಯದ ಅಂತರ್ ಮಹಾವಿದ್ಯಾಲಯಗಳ ಪುರುಷ ಹಾಗೂ ಮಹಿಳೆಯರ ಮಲ್ಲಕಂಬ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಪುರುಷರ ವಿಭಾಗದಲ್ಲಿ ಬಸವೇಶ್ವರ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಶಿವಾನಂದ ಲಾಯನ್ನವರ, ವಿಜಯಕುಮಾರ ಶಿರಬೂರ, ಏಕನಾಥ ದಿವಟಗಿ ಮತ್ತು ಮಹಿಳೆಯರ ವಿಭಾಗದಲ್ಲಿ ಅನುಪಮಾ ಕೆರಕಲಮಟ್ಟಿ, ಪ್ರಿಯಾಂಕ ಚಂದರಗಿ ಮತ್ತು ಗೀತಾ ಮುರಡಿ ಬಾಗಲಕೋಟೆ ವಿಶ್ವವಿದ್ಯಾಲಯ ತಂಡಕ್ಕೆ ಬ್ಲ್ಯೂ ಆಗಿ ಆಯ್ಕೆಯಾಗಿ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಬಾಗಲಕೋಟೆಯ ಬಸವೇಶ್ವರ ಕಲಾ ಮಹಾವಿದ್ಯಾಲಯ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ರನ್ನರ್ಸ್‌ ಅಪ್ ಸ್ಥಾನ ಪಡೆದುಕೊಂಡಿತು. ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್‌.ಆರ್.ಮೂಗನೂರಮಠ, ಬಾಗಲಕೋಟ ವಿಶ್ವವಿದ್ಯಾಲಯದ ಕ್ರೀಡಾ ಸಂಯೋಜಕ ಪ್ರೊ.ಕೆ.ಎಮ್ ಶಿರಹಟ್ಟಿ ಸಿ.ಕೆ ಚನ್ನಾಳ ವಿಟ್ಟಲ ಮೇತ್ರಿ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.