ಸಾರಾಂಶ
- ಪ್ರತಿಭಟನಾಕಾರರಿಂದ ಸಂಸದೆ ಡಾ.ಪ್ರಭಾ, ಶಾಸಕ ಬಸವಂತಪ್ಪ, ಜಿಲ್ಲಾಡಳಿತಕ್ಕೆ ಮನವಿ - - -
ಕನ್ನಡಪ್ರಭ ವಾರ್ತೆ ದಾವಣಗೆರೆಗ್ರಾಮ ನಕಾಶೆ ಪ್ರಕಾರ ತಾಲೂಕಿನ ಮಲ್ಲಶೆಟ್ಟಿಹಳ್ಳಿ ಗ್ರಾಮದ ಬಡಾವಣೆಗೆ ಹೋಗುವ ರಸ್ತೆಯನ್ನು ಕೆಲವರು ಒತ್ತುವರಿ ಮಾಡಿದ್ದಾರೆ. ಹೈಕೋರ್ಟ್ ಆದೇಶದಂತೆ ಒತ್ತುವರಿ ತೆರವುಗೊಳಿಸುವಂತೆ ಶ್ರಮಜೀವಿ ಕಾಮ್ರೆಡ್ ಪಂಪಾಪತಿ ಕಟ್ಟಡ ಕಾರ್ಮಿಕರ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟಿಸಲಾಯಿತು.
ನಗರದ ಜಿಲ್ಲಾಡಳಿತ ಭವನದ ಎದುರು ಉಭಯ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳ ನೇತೃತ್ವದಲ್ಲಿ ಪ್ರತಿಭಟಿಸಿದ ಕಾರ್ಮಿಕರು, ಬಳಿಕ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ ಹಾಗೂ ಜಿಲ್ಲಾಡಳಿತಕ್ಕೆ ರಸ್ತೆ ಒತ್ತುವರಿ ತೆರವಿಗೆ ತ್ತಾಯಿಸಿ ಮನವಿ ಅರ್ಪಿಸಿದರು.ಕಾರ್ಮಿಕ ಮುಖಂಡ ಆವರಗೆರೆ ಎಚ್.ಜಿ.ಉಮೇಶ ಮಾತನಾಡಿ, ಮಲ್ಲಶೆಟ್ಟನಹಳ್ಳಿ ಗ್ರಾಮದ ಬಡಾವಣೆಗೆ ಹೋಗುವ ರಸ್ತೆ ಒತ್ತುವರಿ ತೆರವಿಗೆ ಹೈಕೋರ್ಟ್ ನಿರ್ದೇಶನ ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಗ್ರಾಪಂ ವ್ಯಾಪ್ತಿಗೆ ಒಳಪಡುವ ಶ್ರಮಜೀವಿ ಕಾಮ್ರೆಡ್ ಪಂಪಾಪತಿ ಕಟ್ಟಡ ಕಾರ್ಮಿಕರ ಬಡಾವಣೆ, ಕರಿಲಕ್ಕೇನಹಳ್ಳಿ, ತೊಗಲೇರಿ, ಕುರ್ಕಿ ಗ್ರಾಮಕ್ಕೆ ಕೂಗುವ ರಸ್ತೆವರೆಗೂ ರಸ್ತೆ ಅಭಿವೃದ್ಧಿಪಡಿಸುವಂತೆ ನಿವೇಶನದಾರರು ಹೈಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯವು ರಸ್ತೆ ಒತ್ತುವರಿ ತೆರವುಗೊಳಿಸಲು ನಿರ್ದೇಶಿಸಿತ್ತು. ಸಾಕಷ್ಟು ಸಲ ನೋಟೀಸ್ ನೀಡಿದರೂ ಒತ್ತುವರಿದಾರರು ತೆರವು ಮಾಡಿಲ್ಲ. ಈ ಹಿನ್ನೆಲೆ ಹೈಕೋರ್ಟ್ ಸಹ ದಾರಿ ಬಿಟ್ಟು ಕೊಡುವಂತೆ ಆದೇಶ ನೀಡಿದೆ. ಆದರೆ, ಇದುವರೆಗೂ ಕೋರ್ಟ್ ಆದೇಶವೇ ಪಾಲನೆಯಾಗಿಲ್ಲ. ಅಧಿಕಾರಿಗಳೂ ಒತ್ತುವರಿ ತೆರವುಗೊಳಿಸುತ್ತಿಲ್ಲ ಎಂದು ಕಿಡಿಕಾರಿದರು.
ದಾವಣಗೆರೆ ತಹಸೀಲ್ದಾರ್ ರಸ್ತೆ ಬಿಡಿಸಿದ ಬಗ್ಗೆ ಕೆಲ ಫೋಟೋಗಳು, ವೀಡಿಯೋಗಳಲ್ಲದೇ, ರಸ್ತೆ ಮಾಡಿರುವ ಬಗ್ಗೆ ಹೇಳಿಕೆಯನ್ನು ಸಹ ನ್ಯಾಯಾಲಯಕ್ಕೆ ನಕಲಿ ದಾಖಲೆ ಸಮೇತ ಸಲ್ಲಿಸಿದ್ದಾರೆ. ರಸ್ತೆ ಅಭಿವೃದ್ಧಿ ಮಾಡಿದ್ದೇವೆಂದು ನ್ಯಾಯಾಲಯಕ್ಕೆ ದಾಖಲೆ ಸಲ್ಲಿಸಿದ್ದಾರೆ. ಇಲ್ಲಿ ಯಾವುದೇ ಅಭಿವೃದ್ಧಿಪಡಿಸದೇ ನ್ಯಾಯಾಲಯವನ್ನೇ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ತಕ್ಷಣವೇ ಜಿಲ್ಲಾಧಿಕಾರಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು, ನ್ಯಾಯಾಲಯ ಆದೇಶ ಪಾಲಿಸುವ ಜೊತೆಗೆ ರಸ್ತೆ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ರಸ್ತೆ ಅಭಿವೃದ್ಧಿಗೆ ಜಿ.ಪಂ.ನಿಂದ ₹65 ಲಕ್ಷ ಬಿಡುಗಡೆಯಾಗಿದೆ. ಆದರೆ, ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಆಗುವಂತೆ ಸಂಬಂಧಿಸಿದ ಅಧಿಕಾರಿಗಳು ರಸ್ತೆ ನಿರ್ಮಿಸಿಲ್ಲ. ಅಧಿಕಾರಿಗಳು ರಸ್ತೆ ನಿರ್ಮಿಸಲು ಮೀನ- ಮೇಷ ಎಣಿಸುತ್ತಿದ್ದಾರೆ. ಇದರಿಂದ ರೈತರಿಗೆ, ಸಾರ್ವಜನಿಕರು, ಬಡಾವಣೆ ನಿವೇಶನದಾರರು, ಮನೆ ಕಟ್ಟಲು ಸಾಮಗ್ರಿ ಸರಬರಾಜು ಮಾಡುವವರಿಗಷ್ಟೇ ಅಲ್ಲ, ಸುತ್ತಮುತ್ತಲಿನರೈತರು, ಸಣ್ಣಪುಟ್ಟ ಕೈಗಾರಿಕೆಯವರಿಗೂ ನಿತ್ಯ ತೊಂದರೆಯಾಗುತ್ತಿದೆ ಎಂದರು.
ಉಭಯ ಸಂಘಟನೆಗಳ ಶಿವಕುಮಾರ ಡಿ.ಶೆಟ್ಟರ್, ಸತೀಶ ಅರವಿಂದ, ವಿ.ಲಕ್ಷ್ಮಣ, ಸುರೇಶ ಯರಗಂಟೆ, ಗಿರೀಶ, ಎಚ್.ಎನ್.ಮಂಜುನಾಥ, ವಕೀಲರಾದ ಮಂಜುಳಾ, ಹನುಮೇಶ, ನಾಗರಾಜ, ಶಿವಕುಮಾರ, ಲಕ್ಷ್ಮಮ್ಮ ಸೇರಿದಂತೆ ಇತರರು ಇದ್ದರು.- - -
(ಕೋಟ್)ಹೈಕೋರ್ಟ್ ಆದೇಶದಂತೆ ಮಲ್ಲಶೆಟ್ಟಿಹಳ್ಳಿ ಗ್ರಾಮದ ಬಡಾವಣೆಗೆ ಹೋಗುವ ರಸ್ತೆಯಲ್ಲಿ ಒತ್ತುವರಿ ತೆರವು ಮಾಡಿಸಬೇಕು. ಜಿಪಂ ಅನುದಾನ ಬಳಸಿ, 4 ಚಕ್ರದ ವಾಹನ ಸಂಚರಿಸುವಷ್ಟು ರಸ್ತೆ ಮಾಡಿಕೊಡಬೇಕು. ಒತ್ತುವರಿ ಮಾಡಿಕೊಂಡ ರುದ್ರಭೂಮಿ ಜಾಗವನ್ನೂ ತೆರವು ಮಾಡಿಸಿಕೊಡಬೇಕು.
- ಆವರಗೆರೆ ಎಚ್.ಜಿ.ಉಮೇಶ, ಮುಖಂಡ.- - -
-15ಕೆಡಿವಿಜಿ7.ಜೆಪಿಜಿ:ದಾವಣಗೆರೆ ಡಿಸಿ ಕಚೇರಿ ಬಳಿ ಪ್ರತಿಭಟನಾಕಾರರು ಮಲ್ಲಶೆಟ್ಟಿಹಳ್ಳಿಯ ರಸ್ತೆ, ಸ್ಮಶಾನ ಜಾಗ ಒತ್ತುವರಿ ತೆರವುಗೊಳಿಸುವಂತೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರಿಗೆ ಮನವಿ ಅರ್ಪಿಸಿದರು. -15ಕೆಡಿವಿಜಿ8.ಜೆಪಿಜಿ:
ದಾವಣಗೆರೆ ಡಿಸಿ ಕಚೇರಿ ಬಳಿ ಪ್ರತಿಭಟನಾಕಾರರು ಮಲ್ಲಶೆಟ್ಟಿಹಳ್ಳಿಯ ರಸ್ತೆ, ಸ್ಮಶಾನ ಜಾಗ ಒತ್ತುವರಿ ತೆರವುಗೊಳಿಸುವಂತೆ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಅವರಿಗೆ ಮನವಿ ಅರ್ಪಿಸಿದರು.