ಸಾರಾಂಶ
ಮಲ್ಲಿಕಾರ್ಜುನ ಖರ್ಗೆ ಅವರು ಎಸ್.ಎಂ. ಕೃಷ್ಣ ಅವಧಿಯಲ್ಲಿ ಏನಾಯಿತು ಎಂಬುದನ್ನು ವಿಸ್ತರಿಸಿ ಮಾತನಾಡಿದ್ದಾರೆ. ಆದರೆ, ಮಾಧ್ಯಮಗಳು ಅವರ ಪೂರ್ಣ ಭಾಷಣ ಹಾಕಿಲ್ಲ. ಅವರೇ ನಮಗೆ ಹೈಕಮಾಂಡ್ ಆಗಿದ್ದು ಸಿಎಂ ಬದಲಾವಣೆ ಕುರಿತು ಏನು ಮಾತನಾಡದಂತೆ ಸೂಚಿಸಿದ್ದಾರೆ.
ಕೊಪ್ಪಳ:
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಅವರು ಆಸೆಪಟ್ಟರೆ ಯಾವಾಗ ಬೇಕಾದರೂ ಸಿಎಂ ಆಗಬಹುದು. ಆದರೆ, ಅವರು ಸಿಎಂ ಆಗೋದಲ್ಲ, 8ರಿಂದ 10 ಜನರನ್ನು ಸಿಎಂ ಮಾಡುವ ಶಕ್ತಿ ಅವರಿಗಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ಎಸ್.ಎಂ. ಕೃಷ್ಣ ಅವಧಿಯಲ್ಲಿ ಏನಾಯಿತು ಎಂಬುದನ್ನು ವಿಸ್ತರಿಸಿ ಮಾತನಾಡಿದ್ದಾರೆ. ಆದರೆ, ಮಾಧ್ಯಮಗಳು ಅವರ ಪೂರ್ಣ ಭಾಷಣ ಹಾಕಿಲ್ಲ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರೇ ನಮಗೆ ಹೈಕಮಾಂಡ್ ಆಗಿದ್ದು ಸಿಎಂ ಬದಲಾವಣೆ ಕುರಿತು ಏನು ಮಾತನಾಡದಂತೆ ಸೂಚಿಸಿದ್ದಾರೆ. ಹೀಗಾಗಿ ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ಸಚಿವರು ಹೇಳಿದರು.ಬಸಾಪುರ ಕೆರೆಯಲ್ಲಿ ಜಾನುವಾರುಗಳು, ಕುರಿಗಳಿಗೆ ನೀರು ಕುಡಿಸಲು ಹೋದ ಕುರಿಗಾಹಿ ಹಾಗೂ ದನಗಾಹಿ ಮೇಲೆ ಹಲ್ಲೆ ನಡೆಸಿದ ಬಲ್ಡೋಟಾ ಕಂಪನಿ ಭದ್ರತಾ ಸಿಬ್ಬಂದಿ ಎಫ್‌ಐಆರ್ ದಾಖಲಿಸಿರುವ ಕುರಿತು ಪ್ರಶ್ನೆಗೆ, ನ್ಯಾಯಾಲಯದ ಆದೇಶದಲ್ಲಿ ಏನಿದೆ ಎಂಬುದನ್ನು ಪರಿಶೀಲಿಸಿ ಜಾನುವಾರುಗಳಿಗೆ ಮಾನವೀಯತೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದರು.