ಮಲ್ಲಿಕ್ಯಾತನಹಳ್ಳಿ 25 ಮಂದಿ ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಣೆ: ಶಾಸಕ ಪಿ.ಎಂ.ನರೇಂದ್ರಸ್ವಾಮಿ

| Published : Feb 17 2025, 12:30 AM IST

ಮಲ್ಲಿಕ್ಯಾತನಹಳ್ಳಿ 25 ಮಂದಿ ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಣೆ: ಶಾಸಕ ಪಿ.ಎಂ.ನರೇಂದ್ರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

2013ರ ನಂತರ ಕಾಗೋಡು ತಿಮ್ಮಪ್ಪ ಅವರು ಸ್ವೀಕರ್ ಆಗಿದ್ದ ವೇಳೆ ನೈತಿಕವಾಗಿ ಕಾಯ್ದೆಗೆ ತಿದ್ದುಪಡಿತಂದು ಸರ್ಕಾರಿ ಭೂಮಿಯಲ್ಲಿ 40*60 ಅಳತೆಯಲ್ಲಿ ನಿವೇಶನ ಹಾಗೂ ವಸತಿ ರಹಿತರು ಮನೆ ಕಟ್ಟಿಕೊಳ್ಳಲು ಒಂದು ಭಾರಿ ಖಾತೆ ಮಾಡಿಕೊಡಬೇಕೆಂದು ಕಾನೂನು ತಂದರು. ಹಿಂದಿನ ಐದು ವರ್ಷ ಅವಧಿಯಲ್ಲಿ ಯಾವುದೇ ಕ್ರಮ ಕೈಗೊಂಡಿರಲ್ಲಿಲ್ಲ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ತಾಲೂಕಿನ ಮಲ್ಲಿಕ್ಯಾತನಹಳ್ಳಿಯ ಸುಮಾರು 25 ಮಂದಿ ನಿವೇಶನ ರಹಿತರಿಗೆ ಮನೆ ಕಟ್ಟಿಕೊಳ್ಳಲು ಅನುಕೂಲವಾಗುವಂತೆ ಹಕ್ಕುಪತ್ರವನ್ನು ವಿತರಿಸಲಾಗಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

ತಾಲೂಕಿನ ಮಲ್ಲಿಕ್ಯಾತನಹಳ್ಳಿ ಕಾವೇರಿ ವಿದ್ಯಾಪೀಠ ಆವರಣದಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿ ನಮ್ಮೆಲ್ಲರ ಚರ್ಚೆಯ ಆಧಾರಿತವಾಗಿ ಹೊಸ ಕಾನೂನು ತಂದು 94 ಸಿ ಅಡಿಯಲ್ಲಿ ನಿರ್ಗತಿಕರಿಗೆ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಲಾಯಿತು. ದಾಖಲಾತಿ ಪರಿಶೀಲನೆ ಆಧಾರದ ಮೇಲೆ 25 ಮಂದಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ ಎಂದರು.

2013ರ ನಂತರ ಕಾಗೋಡು ತಿಮ್ಮಪ್ಪ ಅವರು ಸ್ವೀಕರ್ ಆಗಿದ್ದ ವೇಳೆ ನೈತಿಕವಾಗಿ ಕಾಯ್ದೆಗೆ ತಿದ್ದುಪಡಿತಂದು ಸರ್ಕಾರಿ ಭೂಮಿಯಲ್ಲಿ 40*60 ಅಳತೆಯಲ್ಲಿ ನಿವೇಶನ ಹಾಗೂ ವಸತಿ ರಹಿತರು ಮನೆ ಕಟ್ಟಿಕೊಳ್ಳಲು ಒಂದು ಭಾರಿ ಖಾತೆ ಮಾಡಿಕೊಡಬೇಕೆಂದು ಕಾನೂನು ತಂದರು. ಹಿಂದಿನ ಐದು ವರ್ಷ ಅವಧಿಯಲ್ಲಿ ಯಾವುದೇ ಕ್ರಮ ಕೈಗೊಂಡಿರಲ್ಲಿಲ್ಲ ಎಂದರು.

ಪ್ರಸಕ್ತ ವರ್ಷ ಜಲಪಾತೋತ್ಸವದ ವೇಳೆ ಮಲ್ಲಿಕ್ಯಾತನಹಳ್ಳಿ ನಿವಾಸಿಗಳು ಹಕ್ಕುಪತ್ರ ವಿತರಣೆಗಾಗಿ ಮನವಿ ಮಾಡಿಕೊಂಡಿದ್ದರು. ಸ್ಥಳದಲ್ಲಿಯೇ ಇದ್ದ ಜಿಲ್ಲಾಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳಿಗೆ ಹಕ್ಕುಪತ್ರ ವಿತರಣೆ ಮಾಡಬೇಕೆಂದು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅದರಂತೆ ಕ್ರಮ ವಹಿಸಿದ್ದಾರೆ ಎಂದರು.

ಹಕ್ಕುಪತ್ರವನ್ನು ಸರ್ಕಾರದ ಹೊಸ ಕಾನೂನ್ವಯ ನಿಮ್ಮಗಳ ಹಕ್ಕುನ್ನು ನಿಮಗೆ ವರ್ಗವಣೆ ಮಾಡಿಕೊಡಲಾಗಿದೆ. ಷರತ್ತು ಬದ್ದವಾಗಿ ಸಮರ್ಪಕವಾಗಿ ಬಳಸಿಕೊಂಡು ಮನೆ ಕಟ್ಟಿಕೊಳ್ಳುವುದರ ಜೊತೆಗೆ ಸರ್ಕಾರದ ಸೌಲಭ್ಯಗಳು ಪಡೆಯಲು ಸಹಕಾರಿಯಾಗಿದೆ ಎಂದರು.

ತಹಸೀಲ್ದಾರ್ ಲೊಕೇಶ್ ಮಾತನಾಡಿ, ಹಕ್ಕುಪತ್ರ ವಿತರಣೆ ಸಂಬಂಧ ಕೆಲವು ಸಮಸ್ಯೆಗಳಿದ್ದವು. ಶಾಸಕರ ಸಲಹೆ ಮೇರೆಗೆ ಎಲ್ಲಾ ಸಮಸ್ಯೆ ನಿವಾರಿಸಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರವನ್ನು ವಿತರಣೆ ಮಾಡಲಾಗುತ್ತಿದೆ ಎಂದರು.

ಈ ವೇಳೆ ಮುಖಂಡರು ಹಾಗೂ ಫಲಾನುಭವಿಗಳು ಇದ್ದರು.