ಸಾರಾಂಶ
ಮಲ್ಪೆ ಗೌಡ ಸಾರಸ್ವತ ಸಮಾಜದ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮದೇವರ ಪ್ರತಿಷ್ಠಾಪನೆ ಗೊಂಡು 25 ವರ್ಷದ ಆಚರಣೆ ಹಾಗೂ ಶ್ರೀ ರಾಮ ನವಮಿ ಮಹೋತ್ಸವ ಆಚರಣೆ ಭಾನುವಾರ ನೈಭವದಿಂದ ನಡೆಯಿತು.
ಕನ್ನಡಪ್ರಭ ವಾರ್ತೆ ಮಲ್ಪೆ
ಇಲ್ಲಿನ ಗೌಡ ಸಾರಸ್ವತ ಸಮಾಜದ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮದೇವರ ಪ್ರತಿಷ್ಠಾಪನೆ ಗೊಂಡು 25 ವರ್ಷದ ಆಚರಣೆ ಹಾಗೂ ಶ್ರೀ ರಾಮ ನವಮಿ ಮಹೋತ್ಸವ ಆಚರಣೆ ಭಾನುವಾರ ನೈಭವದಿಂದ ನಡೆಯಿತು.ಬೆಳಗ್ಗೆ ಶ್ರೀರಾಮಚಂದ್ರ ದೇವರಿಗೆ ಪಂಚಾಮೃತ ಅಭಿಷೇಕ, ಶತಕಲಶಾಭಿಷೇಕ, ಕನಕಾಭಿಷೇಕ, ಗಂಗಾಭಿಷೇಕ, ಫಲಾಭಿಷೇಕ ಹಾಗೂ ಸಾನಿಧ್ಯ ಹವನ, ಶ್ರೀದೇವರಿಗೆವಿಶೇಷ ಅಲಂಕಾರ ಹಾಗೂ ಶ್ರೀರಾಮ ದೇವರಿಗೆ ತೊಟ್ಟಿಲು ಸೇವೆ, ಭಜನಾ ಕಾರ್ಯಕ್ರಮ, ಪಲ್ಲಪೂಜೆ, ಮಹಾಪೂಜೆ ಬಳಿಕ ಮಹಾ ಸಮಾರಾಧನೆ ಜರಗಿತು
ಸಂಜೆ ರಾಮ ಮಂದಿರದಿಂದ ಮಲ್ಪೆ ಮುಖ್ಯ ರಸ್ತೆಯಲ್ಲಿ ನೂತನ ರಜತ ಪಲ್ಲಕ್ಕಿಯಲ್ಲಿ ಪ್ರಥಮ ಪೇಟೆ ಉತ್ಸವ ನಡೆಸಲಾಯಿತು. ಈ ಮೆರವಣಿಗೆಯಲ್ಲಿ ವಿಶೇಷ ಸ್ತಬ್ಧಚಿತ್ರ, ತಟ್ಟಿರಾಯ, ಕೀಲುಕುದುರೆ, ಕುಣಿತ ಭಜನೆ, ಗೊಂಬೆ ಬಳಗ, ಚಂಡೆವಾದನ, ವಿವಿಧ ವಾದ್ಯಮೇಳಗಳು ಜನಾಕರ್ಷಣೆಗೆ ಕಾರಣವಾದವು. ರಾತ್ರಿ ಕಟ್ಟೆ ಪೂಜೆ, ವಸಂತ ಪೂಜೆ, ಅಷ್ಟಾವಧಾನ ಸೇವೆ ಜರಗಿತುಶ್ರೀ ದೇವರ ಸನ್ನಿಧಿಯಲ್ಲಿ ಮಂದಿರದ ಅರ್ಚಕರಾದ ಅರ್ಚಕರಾದ ಶೈಲೇಶ್ ಭಟ್ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ವೇದಮೂರ್ತಿ ಜಯದೇವ್ ಭಟ್, ಲಕ್ಷ್ಮಣ ಭಟ್ ಸಹಕರಿಸಿದರು
ಶ್ರೀ ರಾಮ ಮಂದಿರದ ಅಧ್ಯಕ್ಷ ಗೋಕುಲ್ ದಾಸ್ ಪೈ, ಜಿ.ಎಸ್.ಬಿ ಮಹಿಳಾ ಮಂಡಳಿ ಅಧ್ಯಕ್ಷ ಶಾಲಿನಿ ಪೈ, ಎಂ. ದೇವರಾಯ ಭಟ್, ವಿ. ಅನಂತ್ ಕಾಮತ್, ಸುರೇಂದ್ರ ಭಂಡಾರ್ಕಾರ್, ಸುದೀರ್ ಶೆಣೈ , ಅನಿಲ್ ಕಾಮತ, ಜಿ.ಎಸ್.ಬಿ. ಮಹಿಳಾ ಮಂಡಳಿ ಸದಸ್ಯರು, ಯುವಕ ಮಂಡಳಿಯ ಸದಸ್ಯರು ನೂರಾರು ಸಮಾಜ ಭಾಂದವರು ಇದ್ದರು.