ಸಾರಾಂಶ
ಚನ್ನಮ್ಮನ ಕಿತ್ತೂರ ತಾಲೂಕಿನ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಅವ್ಯವಹಾರ ನಡೆದಿದ್ದು, ಸಿಬಿಐಗೆ ತನಿಖೆ ವಹಿಸಲು ಆಗ್ರಹಿಸಿ ಸೆ.೨೦ರಿಂದ ರೈತ ಸಂಘಟನೆ ಒಕ್ಕೂಟಗಳೊಂದಿಗೆ ಕಾರ್ಖಾನೆ ಆವರಣದಲ್ಲಿ ಅಹೋರಾತ್ರಿ ಹೋರಾಟ ನಡೆಸಲಾಗುವುದು ಎಂದು ರೈತ ಸಂಘಟನೆ ಮುಖಂಡ ಬಸವರಾಜ ಮೊಕಾಶಿ ಹೇಳಿದರು.
ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರ
ತಾಲೂಕಿನ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಅವ್ಯವಹಾರ ನಡೆದಿದ್ದು, ಸಿಬಿಐಗೆ ತನಿಖೆ ವಹಿಸಲು ಆಗ್ರಹಿಸಿ ಸೆ.೨೦ರಿಂದ ರೈತ ಸಂಘಟನೆ ಒಕ್ಕೂಟಗಳೊಂದಿಗೆ ಕಾರ್ಖಾನೆ ಆವರಣದಲ್ಲಿ ಅಹೋರಾತ್ರಿ ಹೋರಾಟ ನಡೆಸಲಾಗುವುದು ಎಂದು ರೈತ ಸಂಘಟನೆ ಮುಖಂಡ ಬಸವರಾಜ ಮೊಕಾಶಿ ಹೇಳಿದರು.ಪಟ್ಟಣದ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರೈತ ಮುಖಂಡ ಬಸನಗೌಡ ಪಾಟೀಲ ಮಾತನಾಡಿ, ಈ ಸಾಲಿನ ಸಕ್ಕರೆ ರಿಕವರಿ ಪ್ರಮಾಣ ಬಹಳಷ್ಟು ಕಡಿಮೆಯಾಗಿದೆ. ಸಕ್ಕರೆ ಮಾರಾಟದಲ್ಲಿ ಅವ್ಯವಹಾರವಾಗಿದೆ. 34 ಲಾರಿಗಳ ಮೂಲಕ ಅಕ್ರಮವಾಗಿ ಸಕ್ಕರೆ ಸಾಗಿಸಿ ವಾಹನಗಳ ನಂಬರ್ ತಿದ್ದುಪಡಿ ಮಾಡಲಾಗಿದೆ. ಇಲ್ಲಿಂದ ಸಹಕಾರಿ ಸಂಘಕ್ಕೆ ಹಣ ವರ್ಗಾವಣೆಯಾಗಿದೆ. ಸಿಬ್ಬಂದಿ ಹೆಸರಿನಲ್ಲಿ ಲಕ್ಷಾಂತರ ಹಣ ಜಮಾ ಆಗಿದೆ. ಇಂತಹ ಅವ್ಯವಹಾರಗಳಿಂದ ಕಾರ್ಖಾನೆ ಅವಸಾನದ ಅಂಚಿಗೆ ತಲುಪಿದೆ ಎಂದು ಆರೋಪಿಸಿದರು.
ರೈತ ಸಂಘಟನೆ ಮುಖಂಡರಾದ ರುದ್ರಪ್ಪ ಕೊಡ್ಲಿ, ಬೀರಪ್ಪ ದೇಶನೂರ ಮಾತನಾಡಿದರು. ಮುಖಂಡರಾದ ಅಶೋಕ ಕಲಾಲ, ಸಯ್ಯದ್ ಫಿರಜಾದೆ, ಶಿವಾನಂದ ಜ್ಯೋತಿ, ಈರಣ್ಣ ಅಂಗಡಿ, ಮಲ್ಲಪ್ಪ ಭಂಗಿ, ಸುರೇಶ ಕರಬನಕೊಪ್ಪ, ಆದಮ್ ಹೊಂಗಲ ಇತರರು ಇದ್ದರು.