ಸಾರಾಂಶ
ಕೋಲಾದಿಂದ ತಾಲೂಕಿನ ಕಸಬಾ ಹೋಬಳಿಯ ದೊಡ್ಡಕಡತೂರು ಗೇಟ್ ನಿಂದ ಹೊಸಹಳ್ಳಿ ಅಗ್ರಹಾರ ಗ್ರಾಮದವರೆಗಿನ ರಸ್ತೆ ಸಂಪೂರ್ಣ ಕಿತ್ತು ಹೋಗಿದ್ದು ವಾಹನಗಳ ಸಂಚಾರ ದುಸ್ತರವಾಗಿದೆ
ಕನ್ನಡಪ್ರಭ ವಾರ್ತೆ ಮಾಲೂರು
ಸಂಪೂರ್ಣವಾಗಿ ಹಾಳಾಗಿರುವ ಮಾಲೂರು- ಕೋಲಾರ ರಸ್ತೆಯಲ್ಲಿ ನಿತ್ಯ ಅಪಘಾತ ನಡೆಯುತ್ತಿದ್ದು, ಕೂಡಲೇ ರಸ್ತೆ ದುರಸ್ತಿ ಮಾಡಿಸುವಂತೆ ಆಗ್ರಹಿಸಿ ಇಲ್ಲಿನ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಲೋಕೋಪಯೋಗಿ ಅಭಿಯಂತರರಿಗೆ ಮನವಿ ಸಲ್ಲಿಸಿ ಅಗ್ರಹಿಸಿದರು.ಸಂಘಟನೆಯ ಅಧ್ಯಕ್ಷ ಎಸ್.ಎಂ. ರಾಜು ಮಾತನಾಡಿ, ಕೋಲಾದಿಂದ ತಾಲೂಕಿನ ಕಸಬಾ ಹೋಬಳಿಯ ದೊಡ್ಡಕಡತೂರು ಗೇಟ್ ನಿಂದ ಹೊಸಹಳ್ಳಿ ಅಗ್ರಹಾರ ಗ್ರಾಮದವರೆಗಿನ ರಸ್ತೆ ಸಂಪೂರ್ಣ ಕಿತ್ತು ಹೋಗಿದ್ದು ವಾಹನಗಳ ಸಂಚಾರ ದುಸ್ತರವಾಗಿದೆ. ಪ್ರತಿ ನಿತ್ಯ ಇಲ್ಲಿಗೆ ಸಮೀಪ ಇರುವ ನರಸಾಪುರ ಕೈಗಾರಿಕಾ ಪ್ರಾಂಗಣಕ್ಕೆ ನೂರಾರು ದ್ವಿಚಕ್ರ ವಾಹನಗಳು, ಖಾಸಗಿ ಬಸ್‌ಗಳು ಸಂಚರಿಸುತ್ತವೆ. ರಸ್ತೆ ದುಸ್ಥಿತಿಯಿಂದಾಗಿ ಪ್ರತಿದಿನ ಅಪಘಾತಗಳು ಸಾಮಾನ್ಯವಾಗಿವೆ ಎಂದು ಆರೋಪಿಸಿದರು.ದುರಸ್ತಿ ಮಾಡಿಸಲು ಶಾಸಕರಿಗೆ ಒತ್ತಾಯ
ಇದೇ ರೀತಿ ತರ‍್ನಹಳ್ಳಿ ರಸ್ತೆ ಸಹ ಹಾಳಾಗಿದ್ದು, ಪಟ್ಟಣಕ್ಕೆ ಬರುವುದಕ್ಕೆ ಕೈನಲ್ಲಿ ಜೀವ ಹಿಡಿದುಕೊಂಡು ಸಾವರರು ಬರಬೇಕಾಗಿದೆ. ಈಗ ಚುನಾವಣೆ ಮುಗಿದಿದ್ದು, ಶಾಸಕರು ಇಲ್ಲಿನ ಸಮಸ್ಯೆಯನ್ನು ಚುನಾವಣೆ ಆಯೋಗಕ್ಕೆ ತಿಳಿಸಿ ವಿಶೇಷ ಅನುಮತಿ ಪಡೆದು ಈ ಕೊಡಲೇ ಕಾಮಗಾರಿ ಪ್ರಾರಂಭಿಸಲಿ. ಈಗ ತಾಲೂಕಿನ ವಿವಿಧೆಡೆ ಜಾತ್ರೆ, ಕರಗ ಮಹೋತ್ಸವಗಳು ನಡೆಯಲಿದ್ದು, ಹಗಲು–ರಾತ್ರಿ ಜನರ ಸಂಚರಿಸುತ್ತಾರೆ. ವಾಹನ ಸಾವರರ ರಕ್ಷಣೆಗಾಗಿ ಈ ಕೊಡಲೇ ರಸ್ತೆ ಡಾಂಬರೀಕರಣ ಕಾಮಗಾರಿ ಪ್ರಾರಂಭವಾಗಬೇಕು ಎಂದು ಅಗ್ರಹಿಸಿದರು.ಈ ಸಂದರ್ಭದಲ್ಲಿ ಸಿ.ಚೆನ್ನಕೃಷ್ಣ, ಚಾಕನಹಳ್ಳಿ ನಾಗರಾಜ್,ರಾಜ್ಯ ಆಟೋ ಘಟಕದ ಉಪಾಧ್ಯಕ್ಷ ಆಟೋ ಶ್ರೀನಿವಾಸ್,ಜಿಲ್ಲಾ ಯುವ ಘಟಕ ಅಧ್ಯಕ್ಷ ಅಂಜಿ, ರಾಜು ಉಪಾಧ್ಯಕ್ಷ, ಮಂಗಾಪುರ ಸ್ವಾಮಿ, ಡಿ.ಎನ್.ಗೋಪಾಲ್, ಚೆನ್ನಕೇಶವ, ಕೆ.ಎನ್.ಜಗದೀಶ್, ಮಾದನಹಟ್ಟಿ ಆಶೋಕ್, ಕೊಡೂರು ಮಂಜು ಇನ್ನಿತರರು ಇದ್ದರು.