3 ತಿಂಗಳಲ್ಲಿ ಮಾಲೂರು ರಸ್ತೆಗಳ ಡಾಂಬರೀಕರಣ

| Published : Apr 12 2025, 12:51 AM IST

ಸಾರಾಂಶ

ಮಾಲೂರು ಪಟ್ಟಣದಲ್ಲಿ ಅಲ್ಪಸಂಖ್ಯಾತರ ನಿಧಿಯ ಅಡಿಯಲ್ಲಿ ಬಿಡುಗಡೆಯಾಗಿರುವ 5 ಕೋಟಿ ವೆಚ್ಚದ ಸಿ.ಸಿ.ರಸ್ತೆಗಳು ಪಟ್ಟಣದ ಹಲವಡೆ ಪ್ರಾರಂಭವಾಗಿದೆ. ನಗರೋತ್ಧಾನ ಹಾಗೂ ಅಲ್ಪಸಂಖ್ಯಾತರ ನಿಧಿ ಅಡಿಯಲ್ಲಿ ಒಟ್ಟು 10 ಕೋಟಿ ಈಗಾಗಲೇ ಬಂದಿದ್ದು, ಇನ್ನೂ ವಿಶೇಷ ಅನುದಾನದಡಿಯಲ್ಲಿ 20 ಕೋಟಿ ರು.ಗಳ ಮಂಜೂರಾತಿಗೆ ಸರ್ಕಾರ ಸಮ್ಮತಿಸಿದೆ

ಕನ್ನಡಪ್ರಭ ವಾರ್ತೆ ಮಾಲೂರು

ಇನ್ನು ಮೂರು ತಿಂಗಳಲ್ಲಿ ಪಟ್ಟಣದ ಎಲ್ಲ ರಸ್ತೆಗಳಿಗೆ ಡಾಂಬರೀಕರಣವಾಗಲಿದ್ದು, ಇದಕ್ಕಾಗಿ ವಿವಿಧ ಯೋಜನೆಯಡಿ 30 ಕೋಟಿ ವ್ಯಯಮಾಡಲಾಗುತ್ತಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ಅವರು ಪಟ್ಟಣದ ಕುಂಬಾರಪೇಟೆ ವೃತ್ತದಲ್ಲಿ ನಗರೋತ್ಧಾನ ಯೋಜನೆಯಡಿ 5 ಕೋಟಿ ರು.ಗಳ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

₹20 ಕೋಟಿ ವಿಶೇಷ ಅನುದಾನ

ಈಗಾಗಲೇ ಪಟ್ಟಣದಲ್ಲಿ ಅಲ್ಪಸಂಖ್ಯಾತರ ನಿಧಿಯ ಅಡಿಯಲ್ಲಿ ಬಿಡುಗಡೆಯಾಗಿರುವ 5 ಕೋಟಿ ವೆಚ್ಚದ ಸಿ.ಸಿ.ರಸ್ತೆಗಳು ಪಟ್ಟಣದ ಹಲವಡೆ ಪ್ರಾರಂಭವಾಗಿದೆ. ನಗರೋತ್ಧಾನ ಹಾಗೂ ಅಲ್ಪಸಂಖ್ಯಾತರ ನಿಧಿ ಅಡಿಯಲ್ಲಿ ಒಟ್ಟು 10 ಕೋಟಿ ಈಗಾಗಲೇ ಬಂದಿದ್ದು, ಹೆಚ್ಚುವರಿಯಾಗಿ ಇನ್ನೂ ವಿಶೇಷ ಅನುದಾನದಡಿಯಲ್ಲಿ 20 ಕೋಟಿ ರು.ಗಳ ಮಂಜೂರಾತಿಗೆ ಸರ್ಕಾರದಿಂದ ಹಸಿರು ನಿಶಾನೆ ತೋರಿಸಿದೆ ಎಂದರು.

ಮೂಲಭತ ಸೌಕರ್ಯ:

ಇದಲ್ಲದೇ ಈ ಬಾರಿ ಬಜೆಟ್‌ನಲ್ಲಿ 35 ಕೋಟಿ ಮಂಜೂರಾಗಿದೆ. ಅದು ಬಂದ ಮೇಲೆ ಪಟ್ಟಣದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಈ ಕಾಮಗಾರಿಗಳನ್ನು ಪಟ್ಟಣದ ಅಭಿವೃದ್ಧಿ ದೃಷ್ಠಿಯಿಂದ ಮಾಡಲಾಗುತ್ತಿದ್ದೆ ಹೂರತು ಪಕ್ಷ ತಾರತಮ್ಯ ಇಲ್ಲ. ಈ ಬಾರಿ ಅಭಿವೃದ್ಧಿ ಕಾಮಗಾರಿಯಲ್ಲಿ ಪಟ್ಟಣ ಉದ್ದದ ರಸ್ತೆಯನ್ನು ತೆಗೆದುಕೊಳ್ಳಲಾಗುತ್ತಿದ್ದು, ಅವುಗಳನ್ನು ಮೂರು-ನಾಲ್ಕು ವಾರ್ಡ್‌ ಗಳನ್ನು ಒಳಗೂಳ್ಳಲಿದೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಪೌರಡಳಿತ ಇಲಾಖೆಯ ಎ.ಇ.ಇ.ಚಲಪತಿ ,ಪುರಸಭೆ ಅಧ್ಯಕ್ಷೆ ಕೋಮಲ ನಾರಾಯಣ್‌ ,ಸ್ಥಾಯಿ ಸಮಿತಿ ಅಧ್ಯಕ್ಷ ಎ.ರಾಜಪ್ಪ ,ಪುರಸಭೆ ಸದಸ್ಯೆ ವಿಜಯಲಕ್ಷ್ಮಿ ,ಸದಸ್ಯರಾದ ಮುರಳಿ,ಶ್ರೀನಿವಾಸ್‌ ,ಹನುಮಂತರೆಡ್ಡಿ ,ಪುರಸಭೆ ಅಧಿಕಾರಿ ನಾಗರಾಜ್‌,ಗುತ್ತಿಗೆದಾರರು ಇದ್ದರು.