ಬಾಲಕಿಗೆ ಪ್ರೀತಿಯ ಬಲೆ ಬೀಸಿದ್ದ ವ್ಯಕ್ತಿ ಬಂಧನ

| Published : Aug 05 2025, 11:45 PM IST

ಸಾರಾಂಶ

ಮಾಗಡಿ: ತುಮಕೂರು ಮೂಲದ ವ್ಯಕಿಯೊಬ್ಬ ತಾಲೂಕಿನ ಅಪ್ರಾಪ್ತೆಯೊಂದಿಗೆ ಇನ್ಸ್ಟಾಗ್ರಾಂನಲ್ಲಿ ಪರಿಚಯಿಸಿಕೊಂಡು ದೈಹಿಕ ಸಂಪರ್ಕ ಹೊಂದಿ ಗರ್ಭವತಿ ಮಾಡಿರುವ ವ್ಯಕ್ತಿಯನ್ನು ಮಾಗಡಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಮಾಗಡಿ: ತುಮಕೂರು ಮೂಲದ ವ್ಯಕಿಯೊಬ್ಬ ತಾಲೂಕಿನ ಅಪ್ರಾಪ್ತೆಯೊಂದಿಗೆ ಇನ್ಸ್ಟಾಗ್ರಾಂನಲ್ಲಿ ಪರಿಚಯಿಸಿಕೊಂಡು ದೈಹಿಕ ಸಂಪರ್ಕ ಹೊಂದಿ ಗರ್ಭವತಿ ಮಾಡಿರುವ ವ್ಯಕ್ತಿಯನ್ನು ಮಾಗಡಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ತುಮಕೂರಿನ ನರಸಿಂಹಮೂರ್ತಿ (25) ಬಂಧಿತ. ಅಪ್ರಾಪ್ತೆಯೊಂದಿಗೆ ಸಲುಗೆಯಿಂದ ನಡೆದುಕೊಂಡು ಆಕೆಯನ್ನು ಭೇಟಿಯಾಗಿ ದೈಹಿಕ ಸಂಪರ್ಕ ಹೊಂದಿ ಗರ್ಭವತಿಯಾಗಿದ್ದು, ಬಾಲಕಿಯ ಸಂಬಂಧಿಕರು ನೀಡಿರುವ ದೂರಿನ ಮೇರೆಗೆ ಪೊಲೀಸರು ಪ್ರಕರಣದ ದಾಖಲಿಸಿಕೊಂಡು ಆರೋಪಿಯ ಬೆನ್ನು ಹತ್ತಿ ಇನ್ಸ್ಟಾಗ್ರಾಂ ಐಡಿ ಪತ್ತೆ ಮಾಡಿ ನ್ಯಾಯಲಾಯದ ಮುಂದೆ ಹಾಜರುಪಡಿಸಿದ್ದಾರೆ. ಪ್ರಕರಣದ ತನಿಖೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಪೊಲೀಸ್ ಅಧೀಕ್ಷಕ ಶ್ರೀನಿವಾಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಚಂದ್ರಯ್ಯ, ಮಾಗಡಿ ಉಪಾಧೀಕ್ಷಕ ಪ್ರವೀಣ್ ಮಾರ್ಗದರ್ಶನದಲ್ಲಿ ಮಾಗಡಿ ವೃತ್ತ ನೀರೀಕ್ಷಕರಾದ ಗಿರಿರಾಜ್ ಬಿ.ವೈ, ಸಿಬ್ಬಂದಿಗಳಾದ ಬೀರಪ್ಪ, ಮಂಜುನಾಥ್, ಪ್ರಮೋದ್, ಮುನೀಂದ್ರ, ನಾಗರಾಜ, ಶೈಲಜಾ ಅವರುಗಳು ಪ್ರಕರಣವನ್ನು ಬೇಧಿಸಿ ಅರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇಂತಹ ನಯವಂಚಕರ ಹಾವಳಿಯಿಂದ ತಪ್ಪಿಸಿಕೊಳ್ಳಲು ಮನೆಯಲ್ಲಿ ಮಕ್ಕಳ ಚಲನವಲನದ ಬಗ್ಗೆ ಪೋಷಕರು ಎಚ್ಚರ ವಹಿಸಬೇಕು ಎಂದು ಮಾಗಡಿ ವೃತ್ತ ನಿರೀಕ್ಷಕ ಬಿ.ವೈ.ಗಿರಿರಾಜ್ ಮನವಿ ಮಾಡಿದ್ದಾರೆ.