ಹೊಸಕೋಟೆ: ವ್ಯಕ್ತಿಯೊಬ್ಬ ತಮ್ಮ ಜಮೀನಿನಲ್ಲಿಯೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಮೈಲಾಪುರದಲ್ಲಿ ನಡೆದಿದೆ.

ಹೊಸಕೋಟೆ: ವ್ಯಕ್ತಿಯೊಬ್ಬ ತಮ್ಮ ಜಮೀನಿನಲ್ಲಿಯೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಮೈಲಾಪುರದಲ್ಲಿ ನಡೆದಿದೆ.

ಮಂಜುನಾಥ್(44) ಮೃತ ವ್ಯಕ್ತಿ. ಮಂಜುನಾಥ್ ಆತ್ಮಹತ್ಯೆಗೆ ಪೊಲೀಸರೇ ಕಾರಣ, ಸಮಗ್ರ ತನಿಖೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಮಂಜುನಾಥ್ ಅವರ ಜಮೀನಿನಲ್ಲಿ ಕೃಷಿ ಕೆಲಸಕ್ಕೆ ಪಕ್ಕದ ದಬ್ಬಗುಂಟೆ ಗ್ರಾಮದ ಮಹಿಳೆಯೊಬ್ಬರು ಬರುತ್ತಿದ್ದರು. ಆ ಮಹಿಳೆ ಕಳೆದ ನಾಲ್ಕೈದು ದಿನಗಳ ಹಿಂದೆ ಕಾಣೆಯಾಗಿದ್ದು, ಮಹಿಳೆ ಮನೆಯವರು ಹೊಸಕೋಟೆ ಠಾಣೆಯಲ್ಲಿ ಪೊಲೀಸರು ಮಹಿಳೆಯ ಪತ್ತೆಗೆ ದೂರು ದಾಖಲಿಸಿದ್ದರು. ಮಹಿಳೆಯ ತನಿಖೆ ಆರಂಭಿಸಿದ ಪೊಲೀಸರು ಮಂಜುನಾಥ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ಹೆಸರಿನಲ್ಲಿ ಸಾಕಷ್ಟು ಕಿರುಕುಳ ಕೊಟ್ಟದ್ದಾರೆಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಜುನಾಥ್ ಸಾವಿಗೆ ಪೊಲೀಸರೇ ಕಾರಣ ಎಂದು ಮಂಜುನಾಥ್‌ ಹೆಂಡತಿ ಹಾಗೂ ಇಬ್ಬರು ಮಕ್ಕಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಜುನಾಥ್ ಪೊಲೀಸರ ವಿಚಾರಣೆಯಿಂದ ಮನ ನೊಂದಿದ್ದು ನಿಜ. ಆದರೆ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ. ಆತ್ಮಹತ್ಯೆಯನ್ನು ಗಮನಿಸಿದರೆ ಯಾರೋ ಅವರನ್ನು ನೇಣು ಬಿಗಿದು ಕೊಲೆ ಮಾಡಿರುವ ರೀತಿ ಕಾಣುತ್ತಿದೆ. ಆದ್ದರಿಂದ ಪೊಲೀಸರು ಸೂಕ್ತ ತನಿಖೆ ಮಾಡಬೇಕು. ಸ್ಥಳಕ್ಕೆ ಎಸ್ಪಿ, ಶ್ವಾನ ದಳ ಬರುವವರೆಗೂ ಮೃತದೇಹವನ್ನು ಮುಟ್ಟಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಸ್ಥಳಕ್ಕೆ ಬಂದ ಆರಕ್ಷಕ ನಿರೀಕ್ಷಕ ಗೋವಿಂದ್ ಎದುರಿಗೆ ಪಟ್ಟು ಹಿಡಿದರು.

ಡಿವೈಎಸ್ಪಿ ಭೇಟಿ: ವಿಚಾರ ತಿಳಿದ ಡಿವೈಎಸ್ಪಿ ಮಲ್ಲೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಮೇಲ್ನೋಟಕ್ಕೆ ಗಮನಿಸಿದರೆ ಆತ್ಮಹತ್ಯೆ ರೀತಿ ಕಾಣುತ್ತಿದೆ. ಪೊಲೀಸರ ವಿಚಾರಣೆ ವೇಳೆ ಭಯಪಟ್ಟು ಆತ್ಮಹತ್ಯೆ ಮಾಡಿಕೊಂಡರೆ ಯಾರು ಹೊಣೆಯಲ್ಲ. ಮರಣೋತ್ತರ ಪರೀಕ್ಷೆ ಮಾಡಿದರೆ ಕೊಲೆಯೋ? ಆತ್ಮಹತ್ಯೆಯೋ ತಿಳಿಯುತ್ತದೆ. ಆದ್ದರಿಂದ ಪೊಲೀಸರಿಗೆ ಸಹಕರಿಸಬೇಕೆಂದು ಕುಟುಂಬಸ್ಥರ ಮನವೊಲಿಸಿದರು. ಕೊಲೆ ಸಂಶಯವಿದ್ದರೆ ದೂರು ಕೊಡಿ ತನಿಖೆ ಮಾಡುವುದಾಗಿ ತಿಳಿಸಿದರು.

ಫೋಟೋ: 6 ಹೆಚ್‌ಎಸ್‌ಕೆ 1 ಮತ್ತು 2

1:

ಹೊಸಕೋಟೆ ತಾಲೂಕಿನ ಮೈಲಾಪುರದಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಪ್ರಕರಣ ಪರಶೀಲನೆಗೆ ಬಂದ ಆರಕ್ಷಕ ನಿರೀಕ್ಷಕ ಗೋವಿಂದ್‌ ಬಳಿ ಕುಟುಂಬ ಸದಸ್ಯರು ನ್ಯಾಯಕ್ಕಾಗಿ ಮನವಿ ಮಾಡಿದರು.

2: ಮಂಜುನಾಥ್.