ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಧಾರ್ಮಿಕ ಕಾರ್ಯಗಳಿಗೆ ಸಹಕಾರ ನೀಡುವವರು ಜೀವನದಲ್ಲಿ ಪುಣ್ಯ ಗಳಿಸುತ್ತಾರೆ ಎಂದು ಉತ್ತರ ಕನ್ನಡ ಜಿಲ್ಲೆಯ ಕರ್ಕಿಯ ಜಗದ್ಗುರು ಶಂಕರಾಚಾರ್ಯ ದೈವಜ್ಞ ಬ್ರಾಹ್ಮಣ ಸಂಸ್ಥಾನದ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಧಾರ್ಮಿಕ ಕಾರ್ಯಗಳಿಗೆ ಸಹಕಾರ ನೀಡುವವರು ಜೀವನದಲ್ಲಿ ಪುಣ್ಯ ಗಳಿಸುತ್ತಾರೆ ಎಂದು ಉತ್ತರ ಕನ್ನಡ ಜಿಲ್ಲೆಯ ಕರ್ಕಿಯ ಜಗದ್ಗುರು ಶಂಕರಾಚಾರ್ಯ ದೈವಜ್ಞ ಬ್ರಾಹ್ಮಣ ಸಂಸ್ಥಾನದ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಹೇಳಿದರು.

ಚಿಕ್ಕೋಡಿ ಪಟ್ಟಣದ ಕೇಶವ ಕಲಾಭವನದಲ್ಲಿ ಇತ್ತೀಚೆಗೆ ನಡೆದ ದೈವಜ್ಞ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು, ಪ್ರತಿಯೊಬ್ಬರು ನಿತ್ಯ ಸಂಧ್ಯಾವಂದನೆ, ಸತ್ಸಂಗ, ಭಜನೆ, ಮಾಡುವುದನ್ನು ಮೈಗೂಡಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಇಂದಿನ ತಾಂತ್ರಿಕ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಸಂಸ್ಕಾರ ನೀಡಿ ಅವರನ್ನು ಯಾವುದೇ ರೀತಿಯ ಮೋಬೈಲ್ ಸೇರಿದಂತೆ ದುಶ್ಚಟಗಳಿಗೆ ಒಳಗಾಗದಂತೆ ನೋಡಿಕೊಂಡ ಪ್ರೀತಿಯಿಂದ ಭಾವನಾತ್ಮಕ ಸಂಬಂಧ ಬೆಸೆಯುವ ಕೆಲಸ ಮಾಡುವಂತೆ ಕಿವಿಮಾತು ಹೇಳಿದರು.ಶ್ರೀ ಸುಜ್ಞಾನೇಶ್ವರ ಭಾರತಿ ಸ್ವಾಮಿಗಳು ಆಶೀರ್ವಚನ ನೀಡಿ, ಪುಣ್ಯ ಕಾರ್ಯದಿಂದ ಮನುಷ್ಯನ ಜೀವನ ಪಾವನವಾಗುತ್ತದೆ. ಆ ನಿಟ್ಟಿನಲ್ಲಿ ಸುವಿಚಾರದೊಂದಿಗೆ ಮಾಡುವ ಕಾರ್ಯದಲ್ಲಿ ಮನಪೂರ್ವಕವಾಗಿ ತೊಡಗಿದರೆ ಯಶಸ್ಸು ಕಾಣಬಹುದಾಗಿದೆ ಎಂದು ತಿಳಿಸಿದರು.ದೈವಜ್ಞ ಸಮಾಜದ ಅಧ್ಯಕ್ಷ ರಮೇಶ ಕುಡತರಕರ ಮಾತನಾಡಿದರು. ಉಪಾಧ್ಯಕ್ಷ ಜಗದೀಶ ಕುರ್ಡೇಕರ್, ರಾಜೇಶ ಕಾಗಲಕರ, ಮಧುಕರ ಕುಡತರಕರ, ಸತೀಶ ಕುರ್ಡೇಕರ, ಪ್ರಕಾಶ ಕುಡತರಕರ, ನಾಗೇಶ ಪಾಲನಕರ, ರಾಜೇಶ ಶೇಟ್, ಪ್ರವೀಣ ರೇವಣಕರ, ಪ್ರಕಾಶ ಅಣವೇಕರ, ಅಶೋಕ ವೆರ್ಣೇಕರ, ಪ್ರಶಾಂತ ಕುಡ್ತರಕರ ಸೇರಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ಸಮಾಜದ ಮುಖಂಡರು, ಮಹಿಳೆಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಈ ಕಾರ್ಯಕ್ರಮದಲ್ಲಿ ಶ್ರೀಕಾಂತ ಸಾವಂತ ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಲಹರಿ ಕುಡತರಕರ ಸ್ವಾಗತ ಗೀತೆ ಹಾಡಿದರು, ನಾಗರಾಜ ರಾಯ್ಕರ ಸ್ವಾಗತಿಸಿದರು. ಆನಂದ ಅರವಾರೆ ನಿರೂಪಿಸಿ, ವಂದಿಸಿದರು.