ಮನುಷ್ಯನಿಗೆ ಆಸೆ ಇರಬೇಕು, ದುರಾಸೆ ಇರಬಾರದು

| Published : Jul 31 2025, 12:50 AM IST

ಸಾರಾಂಶ

ನಮ್ಮ ಆಸೆಗಳು ನಿಲುಕುವಂತಿರಬೇಕು, ಮತ್ತೊಬ್ಬರ ದುಡ್ಡಿನ ಮೇಲೆ ಆಸ್ತಿಯ ಮೇಲೆ, ಪರಸ್ತ್ರೀಯರ ಮೇಲೆ ದುರಾಸೆ ಇರಬಾರದು.

ಗದಗ: ಮನುಷ್ಯ ಬದುಕಲು ದುಡಿಯಬೇಕು ಹಾಗೂ ಪ್ರಾಮಾಣಿಕವಾಗಿ ದುಡಿದು ತಿನ್ನಬೇಕು. ದುರಾಸೆಯಿಂದ ವಾಮ ಮಾರ್ಗದಿಂದ ಗಳಿಸಿದರೆ ಅದು ದಕ್ಕುವದಿಲ್ಲ, ಪ್ರತಿಯೊಬ್ಬರಿಗೂ ಆಸೆ ಇರುತ್ತದೆ. ಸನ್ಯಾಸಿಗಳಿಗೂ ಕೂಡಾ ಆಸೆಗಳು ಇರುತ್ತವೆ. ಮನುಷ್ಯನಿಗೆ ಆಸೆ ಇರಬೇಕು. ಆದರೆ ದುರಾಸೆ ಇರಬಾರದು ಎಂದು ಆಧ್ಯಾತ್ಮ ವಿದ್ಯಾಶ್ರಮದ ಶರಣೆ ನಿಲಮ್ಮ ತಾಯಿ ಹೇಳಿದರು.

ನಗರದ ಶ್ರೀ ರಾಚೋಟಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ನಡೆದ ಶರಣ ಚರಿತಾಮೃತ ಪ್ರವಚನದಲ್ಲಿ ಮಾತನಾಡಿದರು.

ನಮ್ಮ ಆಸೆಗಳು ನಿಲುಕುವಂತಿರಬೇಕು, ಮತ್ತೊಬ್ಬರ ದುಡ್ಡಿನ ಮೇಲೆ ಆಸ್ತಿಯ ಮೇಲೆ, ಪರಸ್ತ್ರೀಯರ ಮೇಲೆ ದುರಾಸೆ ಇರಬಾರದು. ಪುರಾಣ ಪ್ರವಚನಗಳು ಮನುಷ್ಯರಿಗೆ ಇರುತ್ತವೆ. ಪಶು ಪಕ್ಷಿಗಳಿಗೆ ಪುರಾಣ ಪ್ರವಚನ ಇರುವದಿಲ್ಲ.ದುರಾಸೆ ದುಃಖಕ್ಕೆ ಕಾರಣ. ಆದಿ ಮಾನವ ಮೊದಲು ಬಟ್ಟೆಇಲ್ಲದೇ ಗಡ್ಡೆಗೆಣಸು ತಿಂದು ಬದುಕುತ್ತಿದ್ದನ್ನು. ಗಿಡದ ತಪ್ಪಲಿನಿಂದ ತಮ್ಮ ದೇಹಗಳನ್ನು ಮುಚ್ಚಿಕೊಳ್ಳುತ್ತಿದ್ದರು. ಮನುಷ್ಯರು ಈಗ ತುಂಬಾ ಬದಲಾಗಿದ್ದಾರೆ. ಮನುಷ್ಯರು ಈಗ ವೈಜ್ಞಾನಿಕವಾಗಿ ಬಹಳ ಮುಂದುವರೆದಿದ್ದಾರೆ. ಪ್ರತಿಯೊಬ್ಬರಿಗೂ ಈಗ ಶಾಂತಿ, ನೆಮ್ಮದಿ ಬೇಕಾಗಿದೆ. ಶಾಂತಿ, ನೆಮ್ಮದಿ ಪಡೆಯಲು ಪುರಾಣ ಪ್ರವಚನ ಆಲಿಸಬೇಕು. ಶರಣರು ಹಾಕಿಕೊಟ್ಟ ದಾರಿಯಲ್ಲಿ ಬದುಕಬೇಕು. ಮಾಡುವ ಕಾಯಕ ಮೋಸ ವಂಚನೆಯಿಂದ ಇರಬಾರದು.

ಸಂತೋಷಕ್ಕೆ ಸಂಪತ್ತು ಅಧಿಕಾರ ಮುಖ್ಯವಲ್ಲ. ಭಗಂತ ಕೊಟ್ಟಿದ್ದಲ್ಲೇ ಸಂತೋಷ ಪಡಬೇಕು. ಎಷ್ಟು ಗಳಿಸಿದರೂ ನೆಮ್ಮದಿ ಇರುವುದಿಲ್ಲ. ಆದರೆ ಇದ್ದುದರಲ್ಲಿಯೇ ಸಂತೃಪ್ತಿ ಪಡೆಯಬೇಕು. ಆಯುಷ್ಯ ಇರುವುದರೊಳಗೇ ದೇವರನ್ನು ಒಲಿಸಿಕೊಳ್ಳಬೇಕು. ಆಯುಷ್ಯ ದುಡಿದರೂ ಹೋಗುತ್ತೇ ಖಾಲಿ ಕುಳಿತುಕೊಂಡರೂ ಹೋಗುತ್ತೇ. ಆಯುಷ್ಯ ಇರುವುದರೊಳಗೆ ಸಮಾಜ ನೆನೆಯುವಂತೆ ಬದುಕಬೇಕು. ನಮಗೆ ಸಿಕ್ಕೆ ಆಯುಷ್ಯ ಸಾರ್ಥಕ ಪಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಎಂ.ಎಂ.ಹಿರೇಮಠ, ಶೇಖಪ್ಪ ಹೊಂಬಳ, ಸಿದ್ದಣ್ಣ ಅರಳಿ, ವಿರುಪಾಕ್ಷಪ್ಪ ಅಕ್ಕಿ, ಗಂಗಾಧರ ನಂದಿಕೋಲಮಠ, ಶಂಕರ ನೀರಲಕೇರಿ, ಸುರೇಶ ಮಾಳವಾಡ, ಪಂಚಾಕ್ಷರಿ ಅಂಗಡಿ, ನಾಗಪ್ಪ ಕರಿಗಾರ, ಗಂಗಾಧರ ಮೇಲಗಿರಿ, ಬಸವರಾಜ ಜಂತ್ಲಿ, ಜೈಶು ಜೋಷಿ, ರಾಚಪ್ಪ ಮಲ್ಲಾಪೂರ, ಸುಭಾಸ ಹವಳೆ, ಪ್ರಭು ಶೆಟ್ಟರ್‌, ಸುನಂದಾ ಜೋಬಾಳೆ, ಬೀನಾ ಮಾನ್ವಿ, ಕಸ್ತೂರಕ್ಕಾ ಮಾನ್ವಿ, ಅನಸಕ್ಕಾ ಮೇಲಗಿರಿ, ಕಲ್ಪನಾ ಹಿರೇಮಠ, ಶೈಲಾ ಮಾನ್ವಿ ಹಾಗೂ ಇತರರು ಉಪಸ್ಥಿತರಿದ್ದರು.