ದಕ್ಷಿಣ ವಲಯ ಕ್ರಿಕೆಟ್: ಬೆಂಗಳೂರು ವಿವಿ ಶುಭಾರಂಭ

| Published : Jan 24 2025, 12:47 AM IST

ಸಾರಾಂಶ

ಟಿ.ಎನ್.ಪಿ.ಎಸ್.ಇ.ಯು ವಿರುದ್ಧ ಬೆಂಗಳೂರು ತಂಡ 118 ರನ್‌ಗಳ ಅಂತರದ ಜಯ

ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ವಿವಿ ಆಯೋಜಿಸಿರುವ ದಕ್ಷಿಣ ವಲಯ ಅಂತರ ವಿವಿ ಮಹಿಳೆಯರ ಕ್ರಿಕೆಟ್ಪಂದ್ಯಾವಳಿಯಲ್ಲಿ ಬೆಂಗಳೂರು ನಗರ ವಿವಿಯು ಶುಭಾರಂಭ ಮಾಡಿದೆ.ನಗರದ ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಮೈದಾನದಲ್ಲಿ ಗುರುವಾರ ನಡೆದ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಟಿ.ಎನ್.ಪಿ.ಎಸ್.ಇ.ಯು ವಿರುದ್ಧ ಬೆಂಗಳೂರು ತಂಡ 118 ರನ್‌ಗಳ ಅಂತರದ ಜಯ ದಾಖಲಿಸಿತು.ಮೊದಲು ಟಾಸ್‌ ಗೆದ್ದು ಬ್ಯಾಟ್ಆಯ್ದುಕೊಂಡ ಬೆಂಗಳೂರು ನಗರ ವಿವಿಯು 21.4 ಓವರ್ ಗಳಲ್ಲಿ ತನ್ನೆಲ್ಲ ವಿಕೆಟ್‌ ಕಳೆದುಕೊಂಡು 160 ರನ್‌ ಕಲೆ ಹಾಕಿತು. ಇದಕ್ಕೆ ಪ್ರತಿಯಾಗಿ ಟಿ.ಎನ್.ಪಿ.ಎಸ್.ಇಯು ತಂಡವು 18.3 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಕೇವಲ 42 ರನ್‌ ಕಲೆ ಹಾಕಲಷ್ಟೇ ಶಕ್ತವಾಯಿತು.ಬೆಂಗಳೂರು ತಂಡದ ಪರ ರೇಷ್ಮಾ ಫರೀದ್ಅವರು 44 ರನ್‌ ಗಳಿಸಿದರೆ, ತಂಡದ ಅಮಾಂಡ 11 ರನ್ನೀಡಿ 3 ವಿಕೆಟ್ಟ್ಕ ಕಬಳಿಸಿದರು. ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ತಿರುವಳ್ಳುರ್‌ ವಿವಿ ಮತ್ತು ಆಚಾರ್ಯ ನಾಗಾರ್ಜುನ ವಿವಿ ನಡುವಿನ ಪಂದ್ಯದಲ್ಲಿ ನಾಗಾರ್ಜುನ ವಿವಿ ತಂಡವು 10 ವಿಕೆಟ್‌ಗಳ ಜಯ ದಾಖಲಿಸಿತು. ತಿರುವಳ್ಳುರ್‌ ವಿವಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. 21.2 ಓವರ್‌ ಗಳಲ್ಲಿ ತಂಡವು ತನ್ನೆಲ್ಲ ವಿಕೆಟ್‌ ಕಳೆದುಕೊಂಡು 86 ರನ್‌ ಕಲೆ ಹಾಕಿತು. ಇದಕ್ಕೆ ಪ್ರತಿಯಾಗಿ ಆಚಾರ್ಯ ನಾಗಾರ್ಜುನ ವಿವಿಯು ಕೇವಲ 7.2 ಓವರ್‌ಗೆ ವಿಕೆಟ್‌ ನಷ್ಟ ವಿಲ್ಲದೆ 87 ರನ್‌ ಕಲೆ ಹಾಕಿ ಜಯಗಳಿಸಿತು. ತಂಡದ ಪರ ಹಸ್ಸಿನಿ ಅಜೇಯ 45 ಮತ್ತು ಹರಿಪ್ರಿಯ ಅಜೇಯ 35 ರನ್‌ ಗಳಿಸಿದರು. ನೀಲಿಮ ಮತ್ತು ಹಸ್ಸಿನಿ ಅವರು ತಲಾ 4 ವಿಕೆಟ್‌ ಕಬಳಿಸಿ ಯಶಸ್ವಿ ಬೌಲರ್‌ ಎನಿಸಿದರು. ಎಸ್.ಜೆ.ಸಿ.ಇ ಮೈದಾನದಲ್ಲಿ ನಡೆಯುವ ಪಾಂಡಿಚೇರಿ ವಿವಿ ಮತ್ತು ಪಾಲಮುರು ವಿವಿಯ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಪಾಂಡಿಚೆರಿ ವಿವಿ 36 ರನ್‌ ಗಳ ಅಂತರದಲ್ಲಿ ಜಯಗಳಿಸಿದೆ. ಪಾಲಮುರು ವಿಇವಿ 125 ರನ್‌ ಗಲಿಸಿದರೆ, ಪಾಂಡಿಚೇರಿ ವಿವಿ 161 ರನ್‌ ಗಳಿಸಿತು. ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಎಸ್.ಆರ್.ಎಂ. ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (101 ರನ್) ಹಾಗೂ ಕೃಷ್ಣ ವಿವಿ (ಎಲ್ಲಾ ವಿಕೆಟ್‌ ನಷ್ಟ ಕ್ಕೆ 100 ರನ್) ನಡುವಿನ ಪಂದ್ಯಾವಳಿಯಲ್ಲಿ ಎಸ್.ಆರ್.ಎಂ ವಿವಿಯು 10 ವಿಕೆಟ್‌ ಜಯ ದಾಖಲಿಸಿತು.ಆಂಧ್ರ ವಿವಿ ಮತ್ತು ಭಾರತಿಯ ವಿವಿ ನಡುವಿನ ಪಂದ್ಯಾವಳಿಯಲ್ಲಿ ಭಾರತೀಯ ವಿವಿಯು 7 ವಿಕೆಟ್‌ ನಷ್ಟಕ್ಕೆ 126 ರನ್‌ ಗಳಿಸಿದರೆ, ಆಂಧ್ರ ವಿವಿಯು 4 ವಿಕೆಟ್‌ಗೆ 127 ರನ್‌ ಕಲೆ ಹಾಕಿ ಗೆಲುವಿನ ನಗೆ ಬೀರಿತು.