ಚಿತ್ತ ಚಾಂಚಲ್ಯ ತಡೆಯಲು ಮನವಾಣಿ ಸೂಕ್ತ-ಬಸವಪ್ರಭು ಸ್ವಾಮೀಜಿ

| Published : Jul 08 2024, 12:32 AM IST

ಚಿತ್ತ ಚಾಂಚಲ್ಯ ತಡೆಯಲು ಮನವಾಣಿ ಸೂಕ್ತ-ಬಸವಪ್ರಭು ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ವಿಕೃತ ಮನಸ್ಸುಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಚಿತ್ತ ಚಂಚಲ ತಡೆಯಲು ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ ಮತ್ತು ವೈಚಾರಿಕ ಸಂಗತಿಗಳನ್ನು ಪ್ರತಿನಿಧಿಸಿರುವ ಮನವಾಣಿಗಳು ಕೃತಿ ಪ್ರತಿ ಮನುಷ್ಯನ ಜೀವವಾಣಿಯಾಗಿವೆ ಎಂದು ಬಸವಕಲ್ಯಾಣದ ಗುಣತೀರ್ಥವಾಡಿಯ ಮಹಾಮನೆ ಮಹಾಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

ಹಾವೇರಿ: ಪ್ರಸ್ತುತ ವಿಕೃತ ಮನಸ್ಸುಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಚಿತ್ತ ಚಂಚಲ ತಡೆಯಲು ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ ಮತ್ತು ವೈಚಾರಿಕ ಸಂಗತಿಗಳನ್ನು ಪ್ರತಿನಿಧಿಸಿರುವ ಮನವಾಣಿಗಳು ಕೃತಿ ಪ್ರತಿ ಮನುಷ್ಯನ ಜೀವವಾಣಿಯಾಗಿವೆ ಎಂದು ಬಸವಕಲ್ಯಾಣದ ಗುಣತೀರ್ಥವಾಡಿಯ ಮಹಾಮನೆ ಮಹಾಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.ನಗರದ ಗೆಳೆಯರ ಬಳಗದ ಶ್ರೀಮತಿ ಮಣಿಬಾಯಿ ಲೋಡಾಯಾ ಸಭಾಂಗಣದಲ್ಲಿ ಭಾನುವಾರ ಚಿನ್ಮಯ ಪ್ರಕಾಶನ ಉಳೇನೂರು ಹಾಗೂ ಸಾಹಿತಿ ಕಲಾವಿದರ ಬಳಗದ ಆಶ್ರಯದಲ್ಲಿ ಜರುಗಿದ ಮನವಾಣಿಗಳು ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಕವಿ ಸೋಮನಾಥ ಡಿ ಅವರು ತಮ್ಮ ಸಿದ್ಧಾಂತ, ಅನುಭವ ಮತ್ತು ಕೃತಜ್ಞತಾಪೂರ್ವಕ ಬಗೆಗಿನ ಭಾವನೆಗಳಿಗೆ ಕೃತಿ ರೂಪದಲ್ಲಿ ನ್ಯಾಯ ಕೊಡುವ ಕೆಲಸ ಮಾಡಿದ್ದಾರೆ. ಮನಸ್ಸಿನಲ್ಲಿನ ಭಾವನೆಗಳಿಗೆ ಜ್ಞಾನದ ಒಡಲಿನ ರೂಪ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೃತಿ ಪ್ರತಿಯೊಬ್ಬರ ಮನಸ್ಸು ಏರಿಳಿತಗಳಿಗೆ ಜಾರಿ ಹೋಗುವುದನ್ನು ತಡೆಯುವಲ್ಲಿ ಯಶಸ್ವಿ ಆಗುವುದರಲ್ಲಿ ಸಂದೇಹವಿಲ್ಲ ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ಚಿಂತನೆಗಳನ್ನು ಬದುಕಿನ ಮಾರ್ಗದರ್ಶಿಯಾಗಿಸುವ ಮನವಾಣಿಗಳು ಕೃತಿ ವಾಸ್ತವಿಕ ಸ್ಥಿತಿಗತಿಗಳನ್ನು ಪರಿಚಯಿಸುತ್ತದೆ. ತಮ್ಮ ಮನಸ್ಸಿನ ಭಾವನೆಗಳ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಅವರ ಆಶಯಗಳು ಸಮಕಾಲೀನ ಸಮಾಜಕ್ಕೆ ಅತ್ಯಗತ್ಯವಾಗಿವೆ ಎಂದರು.ಪ್ರಾಚಾರ್ಯ ಡಾ. ಅಶೋಕಕುಮಾರ ಮಿಟ್ಟಿ ಮಾತನಾಡಿ, ಮನುಷ್ಯನ ಹುಚ್ಚು ಆಶಯಗಳಿಗೆ ಮನಸ್ಸು ಕಾರಣ. ಸದ್ವಿಚಾರ ಮತ್ತು ಸುವಿಚಾರ ಮೂಲಕ ಬದುಕು ರೂಪಿಸಿಕೊಳ್ಳಲು ಮೌಲಿಕ ವಿಚಾರಗಳ ಹೊತ್ತಿಗೆ ಆಗಿರುವ ಮನವಾಣಿಗಳು ಸಹಕಾರಿ ಎಂದರು.ಶಿಕ್ಷಕಿ ಜಯಲಕ್ಷ್ಮೀ ಆರ್ ಕೃತಿ ಪರಿಚಯ ಮಾಡಿದರು. ಕವಿ ಎ.ಎನ್. ರಮೇಶ ಗುಬ್ಬಿ, ಸಾಹಿತಿ ಡಾ. ಸವಿತಾ ಸಿರಗೋಜಿ, ತಹಶೀಲ್ದಾರ್ ಮಹೇಶ ಗಸ್ತೆ, ಅಲ್ಪಸಂಖ್ಯಾತರ ಜಿಲ್ಲಾ ಅಧಿಕಾರಿ ಅಶೋಕ ಗಡ್ಡಿಗೌಡರ ಮಾತನಾಡಿದರು.ಸಾಹಿತಿ ಕಲಾವಿದರ ಬಳಗದ ವಿ.ಪಿ. ದ್ಯಾಮಣ್ಣವರ, ಶೇಖಣ್ಣ ಕಳ್ಳಿಮನಿ, ಲೀಲಾವತಿ ಪಾಟೀಲ, ಸವಿತಾ ಹಿರೇಮಠ, ಮಧುಮತಿ ಚಿಕ್ಕೇಗೌಡ್ರ, ಈರಣ್ಣ ಬೆಳವಡಿ, ರೇಣುಕಾ ಗುಡಿಮನಿ, ಶಶಿಕಲಾ ಅಕ್ಕಿ, ಭಾಗ್ಯಾ ಎಂ.ಕೆ, ನೇತ್ರಾವತಿ ಅಂಗಡಿ, ಹನುಮಂತಸಿಂಗ್ ರಜಪೂತ್, ರಾಜಾಭಕ್ಷ ಹಾಗೂ ಚಿನ್ಮಯ ಪ್ರಕಾಶನದ ಯಮನಪ್ಪ ಅವಧಿ, ಅಂಜನಪ್ಪ ಉಳೇನೂರು, ವಚನಶ್ರೀ ಉಳೇನೂರು, ಕಾಮ್ರೇಡ್ ರಾಮಾಂಜನೆಪ್ಪ ಇದ್ದರು. ಸಾಹಿತಿ ಸತೀಶ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಂ. ಬಡಿಗೇರ ಹಾಗೂ ಪೃಥ್ವಿರಾಜ್ ಬೆಟಗೇರಿ ನಿರೂಪಿಸಿದರು. ನಾಗರಾಜ ಹುಡೇದ ಸ್ವಾಗತಿಸಿದರು. ಚಂದ್ರಶೇಖರ ಮಾಳಗಿ ವಂದಿಸಿದರು.ಸಾಹಿತ್ಯಕ ವಲಯದಲ್ಲಿ ಗಮನ ಸೆಳೆದಿರುವ ಮನವಾಣಿಗಳು ಕೃತಿ ಜನವಾಣಿಗಳಾಗಿವೆ. ತಮ್ಮ ಮನಸ್ಸಿನ ಭಾವನೆಗಳಿಗೆ ಅಕ್ಷರ ರೂಪ ನೀಡಿರುವ ಕವಿ ಸೋಮನಾಥ ಡಿ ತಮ್ಮ ಸಾಹಿತ್ಯ ಪ್ರೇಮ ಮುಂದುವರೆಸಲಿ. ಹಾವೇರಿ ನೆಲದಲ್ಲಿ ಚೊಚ್ಚಲ ಕೃತಿ ಬಿಡುಗಡೆ ಆಗುತ್ತಿರುವುದು ಖುಷಿ ವಿಚಾರ ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.