ಹೊಸಗಾವಿ ಡೇರಿ ಅಧ್ಯಕ್ಷರಾಗಿ ಮಂಚೇಗೌಡ, ಉಪಾಧ್ಯಕ್ಷರಾಗಿ ಶ್ರೀಕಂಠ ಆಯ್ಕೆ

| Published : Apr 12 2025, 12:45 AM IST

ಹೊಸಗಾವಿ ಡೇರಿ ಅಧ್ಯಕ್ಷರಾಗಿ ಮಂಚೇಗೌಡ, ಉಪಾಧ್ಯಕ್ಷರಾಗಿ ಶ್ರೀಕಂಠ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪ ಹೋಬಳಿ ಹೊಸಗಾವಿ ಡೇರಿ ಸಂಘದ ಸಭಾಂಗಣದಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಎಚ್.ಮಂಚೇಗೌಡ ಹಾಗೂ ಶ್ರೀಕಂಠ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಕೊಪ್ಪ ಹೋಬಳಿ ಹೊಸಗಾವಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬೆಂಬಲಿತ ಎಚ್.ಮಂಚೇಗೌಡ, ಉಪಾಧ್ಯಕ್ಷರಾಗಿ ಶ್ರೀಕಂಠ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಸಭಾಂಗಣದಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಎಚ್.ಮಂಚೇಗೌಡ ಹಾಗೂ ಶ್ರೀಕಂಠ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿಯಾಗಿದ್ದ ಸಹಕಾರ ಸಂಘಗಳ ಅಧೀಕ್ಷಕ ಸುಧಾಕರ್ ಅಂತಿಮವಾಗಿ ಪ್ರಕಟಿಸಿದರು.

ಈ ಅಧ್ಯಕ್ಷ ಎಚ್.ಮಂಚೇಗೌಡ ಮಾತನಾಡಿ, ಸಚಿವ ಎನ್.ಚಲುವರಾಯಸ್ವಾಮಿ ಆಶೀರ್ವಾದ ಮತ್ತು ಸಹಕಾರದಿಂದ ಅಧ್ಯಕ್ಷನಾಗಿ ಆಯ್ಕೆಗೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಅವರ ಮಾರ್ಗದರ್ಶನ ದಲ್ಲಿ ಡೇರಿಯನ್ನು ಮತ್ತಷ್ಟು ಆರ್ಥಿಕವಾಗಿ ಅಭಿವೃದ್ಧಿಪಡಿಸುವುದರ ಜೊತೆಗೆ ಜಿಲ್ಲಾ ಹಾಲು ಒಕ್ಕೂಟಕ್ಕೆ ಗುಣಮಟ್ಟದ ಹಾಲು ಪೂರೈಕೆ ಮಾಡಲು ಹೆಚ್ಚಿನ ಆಸಕ್ತಿ ವಹಿಸುವುದಾಗಿ ಭರವಸೆ ನೀಡಿದರು.

ಈ ವೇಳೆ ಸಂಘದ ನಿರ್ದೇಶಕರಾದ ಸಣ್ಣ ವರದಯ್ಯ, ಚಂದ್ರು, ಕೆಂಚಯ್ಯ, ಲಕ್ಷ್ಮಮ್ಮ ರಮೇಶ್ ಹಾಗೂ ಗ್ರಾಮದ ಮುಖಂಡರು ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದರು.

ಎನ್‌ಸಿಸಿ ವಿದ್ಯಾರ್ಥಿಗಳಿಗೆ ಅಭಿನಂದನೆ

ಕನ್ನಡಪ್ರಭ ವಾರ್ತೆ ಮಂಡ್ಯ

ಪಿಇಎಸ್ ವಿಜ್ಞಾನ ಕಲಾ ಮತ್ತು ವಾಣಿಜ್ಯ ಕಾಲೇಜು ಹಾಗೂ ಮಂಡ್ಯ ವಿಶ್ವ ವಿದ್ಯಾನಿಲಯ ಸಂಯುಕ್ತಾಶ್ರಯದಲ್ಲಿ ರಾಷ್ಟ್ರಮಟ್ಟದ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದ ಎನ್‌ಸಿಸಿ ವಿದ್ಯಾರ್ಥಿಗಳಿಗೆ ಪಿಇಎಸ್‌ ವಿಜ್ಞಾನ ಕಾಲೇಜಿನಲ್ಲಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ನೀಲಕಂಠ ವಹಿಸಿದ್ದರು, ಉದ್ಘಾಟನೆಯನ್ನು ಮಂಡ್ಯ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ನೆರವೇರಿಸಿದರು. ಮಂಡ್ಯ ವಿಶ್ವ ವಿದ್ಯಾನಿಲಯದ ಕುಲ ಸಚಿವ ಪರೀಕ್ಷಾಂಗ ವಿಭಾಗದ ಡಾ.ಕೆ. ಯೋಗಾ ನರಸಿಂಹಚಾರಿ, ಮೈಸೂರಿನ 14ನೇ ಕರ್ನಾಟಕ ಬೆಟಾಲಿಯನ್ ಸುಬೇದಾರ್ ಮುಜಾರ್, ಸೆಬಾಸ್ಟಿಯನ್ ಡೇನಿಯೆಲ್, ವಿಶ್ರಾಂತ ಪ್ರಾಂಶುಪಾಲ ಡಾ. ಎಂ ಮಂಜುನಾಥ್, ಉಪ ಪ್ರಾಂಶುಪಾಲ ಡಾ.ಎಸ್.ಕೆ.ವೀರೇಶ, ಕೆ.ಎಂ.ಮಹೇಶ್ ಕುಮಾರ್, ಐಕ್ಯೂವ್‌ಎಸ್‌ಎಲ್‌ ಸಂಯೋಜಕ ಡಾ.ಜಿ.ವಿ.ನರಸಿಂಹನ್, ಎನ್‌ಸಿಸಿ ಅಧಿಕಾರಿಗಳಾದ ಡಾ.ಆರ್‌.ರಮೇಶ್, ಪ್ರೊ.ಮರಿಯಯ್ಯ, ಪ್ರೊ.ಡೇವಿಡ್‌, ಪ್ರೊ.ವಿ.ಗಿರೀಶ್ ಇತರರಿದ್ದರು.