ಸಾರಾಂಶ
ಹೋಬಳಿಯಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವ ಶಿಕ್ಷಕರನ್ನು ಗುರುತಿಸುವ ನಿಟ್ಟಿನಲ್ಲಿ ನಿಟ್ಟೂರು ಪ್ರಾಥಮಿಕ ಶಾಲೆ ಬೋರೇಗೌಡರು ಪ್ರಶಸ್ತಿ ಪ್ರದಾನಕ್ಕೆ ಭಾಜನರಾಗಿದ್ದು, ಅವರಿಗೆ 5000 ರು.ನಗದು ನೀಡುವ ಜೊತೆಗೆ ಅಭಿನಂದನ ಪತ್ರವನ್ನು ನೀಡಿ ಸನ್ಮಾನಿಸಿ ಅಭಿನಂದಿಸಲಾಗಿದೆ.
ಕನ್ನಡಪ್ರಭ ವಾರ್ತೆ ಹಲಗೂರು
ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗಲು ಕಲಿಕಾ ಸಾಮಗ್ರಿಗಳು ಮತ್ತು ಅಗತ್ಯ ಪೀಠೋಪಕರಣ ನೀಡುವ ಜೊತೆಗೆ ಶುಲ್ಕ ಕಟ್ಟಿ ಮಕ್ಕಳ ವಿದ್ಯೆ, ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಯಶೋಧಮ್ಮ ಮಂಚೇಗೌಡ ಚಾರಿಟೇಬಲ್ ಟ್ರಸ್ಟ್ ಸೇವೆ ಶ್ಲಾಘನೀಯ ಎಂದು ಗುರು ಶಿಷ್ಯರ ಬಳಗದ ಅಧ್ಯಕ್ಷ ಎ.ಎಸ್.ದೇವರಾಜು ಅಭಿಪ್ರಾಯ ವ್ಯಕ್ತಪಡಿಸಿದರು.ಕರ್ನಾಟಕ ಪಬ್ಲಿಕ್ ಶಾಲೆ ಆವರಣದ ಕುವೆಂಪು ಸಭಾಂಗಣದಲ್ಲಿ ಯಶೋಧಮ್ಮ ಮಂಚೇಗೌಡ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹೋಬಳಿಯ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ಅನಾಥ ಮಕ್ಕಳಿಗೆ ಆರ್ಥಿಕ ನೆರವು ಸಮಾರಂಭದಲ್ಲಿ ಮಾತನಾಡಿದರು.
ಹೋಬಳಿಯಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವ ಶಿಕ್ಷಕರನ್ನು ಗುರುತಿಸುವ ನಿಟ್ಟಿನಲ್ಲಿ ನಿಟ್ಟೂರು ಪ್ರಾಥಮಿಕ ಶಾಲೆ ಬೋರೇಗೌಡರು ಪ್ರಶಸ್ತಿ ಪ್ರದಾನಕ್ಕೆ ಭಾಜನರಾಗಿದ್ದು, ಅವರಿಗೆ 5000 ರು.ನಗದು ನೀಡುವ ಜೊತೆಗೆ ಅಭಿನಂದನ ಪತ್ರವನ್ನು ನೀಡಿ ಸನ್ಮಾನಿಸಿ ಅಭಿನಂದಿಸಲಾಗಿದೆ. ಅನಾಥ ಮಕ್ಕಳಾದ ಹನ್ನೊಂದು ಜನರಿಗೆ ತಲಾ ಎರಡು ಸಾವಿರ ರು.ಗಳನ್ನು ನೀಡುವುದರ ಜೊತೆಗೆ ಅಭಿನಂದಿಸಲಾಯಿತು.ನಿವೃತ್ತ ಮುಖ್ಯ ಶಿಕ್ಷಕ ನಂಜರಾಜು ಮಾತನಾಡಿದರು. ಟ್ರಸ್ಟ್ ವತಿಯಿಂದ ಉತ್ತಮ ಶಿಕ್ಷಕ ಬೋರೇಗೌಡರನ್ನು ಅಭಿನಂದಿಸಲಾಯಿತು. ಶಿಕ್ಷಕರಾದ ಚಂದ್ರೇಗೌಡ, ಸಿದ್ದಯ್ಯ, ಬೋರೇಗೌಡ, ನಂಜರಾಜು, ಮಹೇಶ, ಶಿಕ್ಷಕಿಯರಾದ ನಂದಕುಮಾರಿ, ಗೋದಾವರಿ, ಶಶಿಕಲಾ, ಮಮತಾದೇವಿ, ಸರಳ, ಕವಿತಾ ಶ್ರೀ ಮತ್ತು ಗುರು ಶಿಷ್ಯರ ಬಳಗದ ಪರಮೇಶ್ ಶಿವಪ್ರಕಾಶ್ ಸೇರದಂತೆ ಇತರರು ಇದ್ದರು.
ಕಬಡ್ಡಿ: ಮೈಸೂರು ವಿಭಾಗ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಕೋಟೆಬೆಟ್ಟದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ವಿದ್ಯಾರ್ಥಿಗಳು 14ರ ವಯೋಮಾನದ ಬಾಲಕರ ವಿಭಾಗದ ಕಬಡ್ಡಿ ಸ್ಪರ್ಧೆಯ ಮೈಸೂರು ವಿಭಾಗ ಮಟ್ಟದಲ್ಲಿ ಗೆಲುವು ಸಾಧಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆ ರಾಮ ಕುಂಜಾದ ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಪಂದ್ಯಾವಳಿಯಲ್ಲಿ ಮಂಡ್ಯ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಕೋಟೆಬೆಟ್ಟ ಮೊರಾರ್ಜಿ ದೇಸಾಯಿ ಶಾಲೆ ವಿದ್ಯಾರ್ಥಿಗಳು ಗೆಲುವು ಸಾಧಿಸಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಸ್ಪರ್ಧಾಳುಗಳಾದ ಎಸ್.ಆರ್.ಗಗನ್‌ಗೌಡ, ಯಶ್ವಂತ್, ಸಿ.ಕೆ.ಧನುಷ, ಕೆ.ಎಂ.ಮಹೇಶ, ಬಿ.ಎಂ.ಕಿಶೋರ, ಪವನ್, ಪ್ರಶಾಂತ್ ಹಾಗೂ ತರಬೇತುದಾರ ದೈಹಿಕ ಶಿಕ್ಷಣ ಶಿಕ್ಷಕ ಬಿ.ಬಿ.ನಾಗರಾಜ್ ಅವರನ್ನು ಶಾಲೆಯ ಪ್ರಾಂಶುಪಾಲ ಟಿ.ಕೆ. ಸ್ವಾಮಿ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.