ಬೆಲ್ಲವತ್ತ ಮಾದಪ್ಪನ ದೇವಳದಲ್ಲಿ ಮಂಡಲಪೂಜೆ

| Published : Dec 22 2023, 01:30 AM IST

ಸಾರಾಂಶ

ಇತಿಹಾಸ ಪ್ರಸಿದ್ಧ ಬೆಲ್ಲತ್ತ ಗ್ರಾಮದ ಉದ್ಭವಮೂರ್ತಿ ಶ್ರೀಮಹದೇಶ್ವರಸ್ವಾಮಿ ದೇಗುಲ ಜೀರ್ಣೋದ್ಧಾರದ ಬಳಿಕ ದೇವಾಲಯ ಸಂಪ್ರೋಕ್ಷಣೆ ಬಳಿಕ 48 ದಿನಗಳ ಕಾಲವೂ ವಿಶೇಷ ಪೂಜಾ ಕೈಂಕರ್ಯಗಳು ವಿಧಿ, ವಿಧಾನಗಳೊಂದಿಗೆ ಜರುಗಿದವು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯ ಬೆಲ್ಲವತ್ತ ಮಹದೇಶ್ವರ ವ್ಯಾಪ್ತಿಯ ಶ್ರೀಮಹದೇಶ್ವರ ದೇಗುಲದಲ್ಲಿ ಮಂಡಲಪೂಜೆಯೂ ವಿದ್ವಾನ್ ಚಂದ್ರಶೇಖರಮೂರ್ತಿ ಅವರ ದಿವ್ಯ ಸಮ್ಮುಖದಲ್ಲಿ ವಿಧಿ, ವಿಧಾನಗಳೊಂದಿಗೆ ಜರುಗಿತು.

ಇತಿಹಾಸ ಪ್ರಸಿದ್ಧ ಬೆಲ್ಲತ್ತ ಗ್ರಾಮದ ಉದ್ಭವಮೂರ್ತಿ ಶ್ರೀಮಹದೇಶ್ವರಸ್ವಾಮಿ ದೇಗುಲ ಜೀರ್ಣೋದ್ಧಾರದ ಬಳಿಕ ದೇವಾಲಯ ಸಂಪ್ರೋಕ್ಷಣೆ ಬಳಿಕ 48 ದಿನಗಳ ಕಾಲವೂ ವಿಶೇಷ ಪೂಜಾ ಕೈಂಕರ್ಯಗಳು ಈಗಾಗಲೇ ಪ್ರಧಾನ ಅರ್ಚಕ ರುದ್ರಸ್ವಾಮಿ ಅವರ ಸಮ್ಮುಖದಲ್ಲಿ ನಡೆಯಿತು. ಈ ಹಿನ್ನೆಲೆ 48 ದಿನಗಳ ಮಂಡಲ ಪೂಜೆಯನ್ನು ಹತ್ತಾರು ಹಳ್ಳಿಗಳ ಗ್ರಾಮಸ್ಥರ ಸಮ್ಮುಖದಲ್ಲಿ ಆಯೋಜಿಸಲಾಗಿತ್ತು. ಬುಧವಾರ ಬೆಳಗ್ಗೆ ದೇವರು ತರುವ ಮೂಲಕ ಛತ್ರಿ, ಛಾಮರಗಳೊಡನೆ ಹುಲಿವಾಹನ ಮಹದೇಶ್ವರಸ್ವಾಮಿ ಸ್ವಾಮಿಯ ಉತ್ಸವವನ್ನು ನಡೆಸಲಾಯಿತು. ಮಂಗಳವಾದ್ಯ ಸಮೇತ, ದೇವರ ತರುವ ಮೂಲಕ ಮಹದೇಶ್ವರರಿಗೆ ಸಮರ್ಪಿಸಿ ಚಂದ್ರಶೇಖರ್, ರವಿಪ್ರಕಾಶ್, ಕುಮಾರ್ ಇನ್ನಿತರ ಸಮ್ಮುಖದಲ್ಲಿ ಹೋಮ, ಹವನಾದಿ ಗಳನ್ನು ಟಗರಪುರ ಗ್ರಾಮದ ಶನೇಶ್ವರಸ್ವಾಮಿ ಪ್ರಧಾನ ಅರ್ಚಕರಾದ ಮೂರ್ತಿ. ಪುನೀತ್ ಕುಮಾರ್, ಬೆಲ್ಲತ್ತ ಗ್ರಾಮದ ಗೌ.ಪುಟ್ಟಸ್ವಾಮಿ, ಯುವ ಮುಖಂಡ ಅಮ್ಮನ ಪುರ ವಿಜಿ, ಮಂಜು, ಜಡೇಯಪ್ಪ, ಮಾಧು, ರವಿಗೌಡ, ರಂಗರಾಮ, ಪಾಪಣ್ಣ, ಮಹೇಶ್, ಮಾದೇಶ, ಮಣಿ, ಶಿವಯ್ಯ, ಮಹದೇವ, ಡ್ಯಾಂ ಶಿವಯ್ಯ ಇನ್ನಿತರ ಉಪಸ್ಥಿತಿಯಲ್ಲಿ ಸಾಂಘವಾಗಿ ನಡೆಸಿದ ಬಳಿಕ ವಿಶೇಷ ಪೂಜೆ ನಡೆಸಿ ಮಹಾಮಂಗಳಾರತಿ ಬಳಿಕ ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆ ಕಲ್ಪಿಸಲಾಯಿತು.

ವಿಶೇಷ ಪೂಜೆ ಹಿನ್ನೆಲೆ ದೇಗುಲಕ್ಕೆ ಸಮಾಜ ಸೇವಕರೂ, ರಾಜ್ಯ ಕೆಪಿಸಿಸಿ ಕಾಮಿ೯ಕ ಘಟಕದ ಕಾರ್ಯದರ್ಶಿ ಜಿ ಸಿ ಕಿರಣ್,

ಯುವ ಮುಖಂಡ ಕೆಸ್ತೂರು ಕೇಶವಮೂರ್ತಿ, ಅಂಬಾದಾಸ್, ಅಮ್ಮನಪುರ ಮಹೇಂದ್ರ, ಮಹೇಶ, ಸಿದ್ದಲಿಂಗಸ್ವಾಮಿ, ಪ್ರಕಾಶ, ಜಯಣ್ಣ, ಕಳ್ಳಿಪುರ ರೇವಣ್ಣ, ವೀರಣ್ಣ, ಮಹದೇವಸ್ವಾಮಿ ಗಲ್ಲಿಮಹದೇವು, ಮಲ್ಲೇಶ , ಬಂಗಾರಮ್ಮ, ದಾಸನಹುಂಡಿ ಚಂದ್ರ, ಸುರೇಶ, ಕೊಳ್ಳೇಗಾಲ ನಾಗಮಲ್ಲು, ಹೊಂಡರಬಾಳು ಅಶ್ವಿನ್, ವೀರಸ್ವಾಮಿ, ಸ್ವಾಮಿ ಇನ್ನಿತರರ ಗಣ್ಯರು ಭೇಟಿ ನೀಡಿ ವಿವಿಧ ಸೇವಾ ಕೈಂಕರ್ಯ ಮತ್ತು ಸೇವಾರ್ಥಗಳಲ್ಲಿ ಪಾಲ್ಗೊಂಡರು.

ದಾಸೋಹಕ್ಕೆ ಪಾತ್ರೆಗಳ ಕೊಡುಗೆ: ಮಂಡಲ ಪೂಜೆ ಹಿನ್ನೆಲೆ ದೇಗುಲಕ್ಕೆ ಸಮಾಜ ಸೇವಕ ಜಿ.ಸಿ. ಕಿರಣ್ ಅವರು ಭಕ್ತಾದಿಗಳ ದಾಸೋಹಕ್ಕೆ ಅಗತ್ಯವಾದ ಪಾತ್ರೆ, ಪರಿಕರಗಳನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಅರ್ಚಕ ರುದ್ರಸ್ವಾಮಿ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಭಕ್ತಾಧಿಗಳಿಗೆ ದಾಸೋಹ ವ್ಯವಸ್ಥೆ ಸಾವಿರಾರು ರೂಗಳ ಪಾತ್ರೆ ವಿತರಿಸಿದ ಜಿ ಸಿ ಕಿರಣ್ ಅವರನ್ನು ಗ್ರಾಮದ ಗೌಡ ಪುಟ್ಟಸ್ವಾಮಿ ಸನ್ಮಾನಿಸಿದರು.

ಬೆಲ್ಲವತ್ತ ಮಹದೇಶ್ವರಸ್ವಾಮಿ ದೇಗುಲಕ್ಕೆ ಬೇಟಿ ನೀಡಿದ್ದು ಮತ್ತು ಇಲ್ಲಿನ ಐತಿಹ್ಯ ಮಹದೇಶ್ವರ ಸ್ವಾಮಿ ದಶ೯ನ ಭಾಗ್ಯ ಲಭಿಸಿದ್ದು ಸಂತಸ ತಂದಿದೆ. ಕಾನನದ ನಡುವೆ ಇರುವ ಈ ಗ್ರಾಮದ ಅಚ್ಚ ಹಸಿರಿನ ಸುಂದರಗ್ರಾಮ. ದೇಗುಲಕ್ಕೆ ಮುಂದಿನ ದಿನಗಳಲ್ಲೂ ನನ್ನ ಕೈಲಾದ ರೀತಿಯಲ್ಲಿ ಸೇವಾ ಕೈಂಕರ್ಯ ಗಳಲ್ಲಿ ತೊಡಗಿಸಿಕೊಳ್ಳುವೆಂದು ಕೆಪಿಸಿಸಿ ಕಾಮಿ೯ಕ ಘಟಕದ ರಾಜ್ಯ ಕಾಯ೯ದರ್ಶಿ ಜಿ.ಸಿ. ಕಿರಣ್ ಹೇಳಿದರು.