ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಗ್ರಾಹಕರಿಗೆ ಮುಕ್ತ ಸೇವೆ

| Published : Nov 05 2024, 12:44 AM IST

ಸಾರಾಂಶ

ಈ ಹಿಂದೆ ಕನಕಪುರ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಮ್ಮ ಬ್ಯಾಂಕ್ ತುಂಬಾ ಕಿರಿದಾಗಿತ್ತು. ಗ್ರಾಹಕರಿಗೆ ಹಣ ಪಡೆಯಲು ಹಾಗೂ ವ್ಯವಹಾರ ನಡೆಸಲು ತೊಂದರೆ ಆಗುತ್ತಿತ್ತು. ಇದನ್ನು ಮನಗೊಂಡು ನಾವು ಇಂದು ಮಳವಳ್ಳಿ ರಸ್ತೆಯಲ್ಲಿ ನೂತನವಾಗಿ ವಿಶಾಲವಾದ ಕೊಠಡಿಗಳನ್ನು ಒಳಗೊಂಡಂತೆ ಬ್ಯಾಂಕನ್ನು ಪ್ರಾರಂಭಿಸಿದ್ದೇವೆ.

ಕನ್ನಡಪ್ರಭ ವಾರ್ತೆ ಹಲಗೂರು

ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಗ್ರಾಹಕರಿಗೆ ಮುಂದಿನ ದಿನಗಳಲ್ಲಿ ಮುಕ್ತ ಸೇವೆ ದೊರಕಲಿದೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ನಿರ್ದೇಶಕ ಹಾಗೂ ಶಾಸಕ ಪಿ.ಎಂ. ನರೇಂದ್ರಸ್ವಾಮಿ ತಿಳಿಸಿದರು.

ಎಚ್‍.ಜಿ. ನರಸಿಂಹ ಮೂರ್ತಿಯವರ ಬಿಲ್ಡಿಂಗ್‌ನಲ್ಲಿ ನೂತನವಾಗಿ ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಉದ್ಘಾಟಿಸಿ ಮಾತನಾಡಿ, ಈ ಹಿಂದೆ ಕನಕಪುರ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಮ್ಮ ಬ್ಯಾಂಕ್ ತುಂಬಾ ಕಿರಿದಾಗಿತ್ತು. ಗ್ರಾಹಕರಿಗೆ ಹಣ ಪಡೆಯಲು ಹಾಗೂ ವ್ಯವಹಾರ ನಡೆಸಲು ತೊಂದರೆ ಆಗುತ್ತಿತ್ತು. ಇದನ್ನು ಮನಗೊಂಡು ನಾವು ಇಂದು ಮಳವಳ್ಳಿ ರಸ್ತೆಯಲ್ಲಿ ನೂತನವಾಗಿ ವಿಶಾಲವಾದ ಕೊಠಡಿಗಳನ್ನು ಒಳಗೊಂಡಂತೆ ಬ್ಯಾಂಕನ್ನು ಪ್ರಾರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಬ್ಯಾಂಕಿನ ಗ್ರಾಹಕರಿಗೆ ಯಾವುದೇ ತೊಂದರೆ ಆಗದಂತೆ ಸೇವೆ ನೀಡಲಾಗುತ್ತದೆ ಎಂದರು.

ಈ ವೇಳೆ ಬ್ಯಾಂಕಿನ ಅಧ್ಯಕ್ಷ ಸಿ.ಜೋಗಿಗೌಡ, ನಿರ್ದೇಶಕರಾದ ಎಚ್.ಸಿ. ಕಾಳೇಗೌಡ, ಎಚ್‌.ವಿ. ಅಶ್ವಿನ್ ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ‌.ವನಜಾಕ್ಷಿ, ಜನರಲ್ ಮ್ಯಾನೇಜರ್ ಆರ್.ಜೆ. ರೂಪ, ಹಲಗೂರು ಶಾಖೆ ವ್ಯವಸ್ಥಾಪಕರಾದ ವಿ.ಜಿ. ಕುಮಾರ್, ಸಿಬ್ಬಂದಿ ಪ್ರಭಾಕರ್ ಮಹಾದೇವಸ್ವಾಮಿ, ಸುರೇಶ್, ನಿಂಗರಾಜು, ಬಸವರಾಜು, ಗ್ರಾಪಂ ಅಧ್ಯಕ್ಷೆ ಶಶಿಕಲಾ ಶ್ರೀನಿವಾಸ್ ಚಾರಿ, ಕಾರ್ಯಕರ್ತರಾದ ಎಚ್.ವಿ. ರಾಜು, ಮರಿಸ್ವಾಮಿ, ಚಂದ್ರಕುಮಾರ್, ಮೋಹನ್ ಕುಮಾರ್, ರವೀಸ, ಪದ್ಮನಾಭ ಮತ್ತಿತರರು ಇದ್ದರು.ಇಂದು ವಿದ್ಯುತ್ ವ್ಯತ್ಯಯ

ಮಳವಳ್ಳಿ: ತಾಲೂಕಿನ ಕಿರುಗಾವಲು 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾರ್ಯ ಇರುವುದರಿಂದ ನ.5ರಂದು ಬೆಳಗ್ಗೆ 9 ರಿಂದು ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ವಿತರಣಾ ಕೇಂದ್ರ ವ್ಯಾಪ್ತಿಯ ಕಿರುಗಾವಲು, ಚಿಕ್ಕಮುಲಗೂಡು, ಮಿಕ್ಕೆರೆ, ಕಲ್ಕುಣಿ, ದೋರನಹಳ್ಳಿ, ಹಿಟ್ಟನಹಳ್ಳಿಕೊಪ್ಪಲು, ಭೀಮನಹಳ್ಳಿ, ಬಂಡೂರು, ಆಲದಹಳ್ಳಿ, ಮೂಗನಕೊಪ್ಪಲು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಆಚರಣೆಯಾಗಿದೆ. ಜನರು ಸಹಕರಿಸಬೇಕೆಂದು ಸೆಸ್ಕ್ ಗ್ರಾಮೀಣ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನಿತೇಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.