ಸಾರಾಂಶ
ಜಿಪಂ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ, ಪಿಎಸ್‌ಎಸ್‌ಕೆ ಪ್ರೌಢಶಾಲೆಯ ಸಂಯುಕ್ತಾಶ್ರಮದಲ್ಲಿ ನಡೆದ ಪಂದ್ಯಾವಳಿಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಬಾಲಕಿಯರ-8, ಬಾಲಕರ-8, ಹಾಗೂ ಪ್ರೌಢಶಾಲಾ ವಿಭಾಗದಿಂದ ಬಾಲಕಿಯರ-8, ಬಾಲಕ-8 ತಂಡಗಳಿಂದ 650ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಪಿಎಸ್‌ಎಸ್‌ಕೆ ಪ್ರೌಢ ಶಾಲೆಯಲ್ಲಿ ಜಿಲ್ಲಾ ಮಟ್ಟದ 14-17 ವರ್ಷ ವಯೋಮಿತಿಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಜಿಲ್ಲಾ ಮಟ್ಟದ ಬಾಲಕ, ಬಾಲಕೀಯರ ಕಬಡ್ಡಿ ಪಂದ್ಯಾವಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ರವಿಕುಮಾರ್ ಚಾಲನೆ ನೀಡಿದರು.ಜಿಪಂ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ, ಪಿಎಸ್‌ಎಸ್‌ಕೆ ಪ್ರೌಢಶಾಲೆಯ ಸಂಯುಕ್ತಾಶ್ರಮದಲ್ಲಿ ನಡೆದ ಪಂದ್ಯಾವಳಿಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಬಾಲಕಿಯರ-8, ಬಾಲಕರ-8, ಹಾಗೂ ಪ್ರೌಢಶಾಲಾ ವಿಭಾಗದಿಂದ ಬಾಲಕಿಯರ-8, ಬಾಲಕ-8 ತಂಡಗಳಿಂದ 650ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಲ್ಲಾ ತಂಡಗಳು ಕ್ರೀಡಾಪಟುಗಳು ಗೆಲುವಿಗಾಗಿ ಸೆಣಸಾಟ ನಡೆಸಿದರು.
ಬಿಇಒ ರವಿಕುಮಾರ್ ಮಾತನಾಡಿ, ಕ್ರೀಡೆಯಲ್ಲಿ ಸೋಲು, ಗೆಲುವು ಸಾಮಾನ್ಯ, ಆದರೆ, ಭಾಗವಹಿಸಿರುವ ಕ್ರೀಡಾಪಟುಗಳು ಉತ್ತಮ ಆಟವಾಡಿ ಕ್ರೀಡಾ ಸ್ಫೂರ್ತಿ ಮೆರೆಯಬೇಕು ಎಂದರು.ಕ್ರೀಡಾ ಧ್ವಜಾರೋಹಣವನ್ನು ಪಿಎಸ್‌ಎಸ್‌ಕೆ ಎಂಡಿ ರೇಖಾ ನೇರವೇರಿಸಿದರು. ಕ್ರೀಡಾಜ್ಯೋತಿಯನ್ನು ನಿರಾಣಿ ಶುಗರ್ಸ್ ನ ಸಿಜೆಎಂ ಸಂಜಿತ್ ಕುಮಾರ್ ಸ್ವೀಕರಿಸಿದರು. ಇದೇ ವೇಳೆ ದೈಹಿಕ ಶಿಕ್ಷಕರಾಗಿ ಸೇವೆಸಲ್ಲಿಸಿ ನಿವೃತ್ತಿ ಹೊಂದಿದ ದೈಹಿಕ ಶಿಕ್ಷಕರಾದ ಚಿಕ್ಕಬ್ಯಾಡರಹಳ್ಳಿ ಶಾಲೆ ರಾಜಶೇಖರ್, ಕುಂತಿಬೆಟ್ಟ ಶಾಲೆ ಪಾರ್ಥೇಗೌಡ, ಹಾಗೂ ವಿಜಯ ಕಾಲೇಜಿನ ಮಂಜುನಾಥ್ ಅವರನ್ನು ಅಭಿನಂದಿಸಲಾಯಿತು. ರಾಷ್ಟ್ರಮಟ್ಟದ ಕ್ರೀಡಾಪಟುಗಳಾದ ಐಶ್ವರ್ಯ, ಚಿನ್ಮಯ್, ಲಕ್ಷ್ಮಿ, ಹೊನ್ನ, ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಕೆನ್ನಾಳು ಗ್ರಾಪಂ ಅಧ್ಯಕ್ಷ ಪ್ರಕಾಶ್ ವಹಿಸಿದ್ದರು. ದೈಹಿಕ ಶಿಕ್ಷಣ ಪರಿವೀಕ್ಷಕ ಮಾದೇಶ್, ಪಿಎಸ್ ಎಸ್ ಕೆ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ನಂದೀಶ್, ಪ್ರೌಢಶಾಲೆಯ ಮುಖ್ಯಶಿಕ್ಷಕಿ ಬಿ.ಶೈಲಜಾ, ರಾಜೇಶ್, ದೈಹಿಕ ಶಿಕ್ಷಕ ನಾಗೇಂದ್ರ, ವಿಎಸ್ ಎಸ್ ಎನ್ ಬಿ ಮಾಜಿ ಅಧ್ಯಕ್ಷ ದೇವಾನಂದ್, ಮುಖಂಡರಾದ ಮಂಜುನಾಥ್, ರಾಮು, ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೇಶವಮೂರ್ತಿ, ಪ್ರಾ.ಶಾ.ಸ.ಶಿ.ಸಂಘದ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ವಿಜಯ ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ್, ಮರಿಸ್ವಾಮಿಗೌಡ, ಎಂ.ಜಯರಾಮು, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ರಮೇಶ್, ಎಚ್.ಆರ್.ಕೃಷ್ಣೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.