ಸಾರಾಂಶ
ಕಳೆದ ಜು.25ರಂದು ಸರ್ಕಾರಿ ನೌಕರರ ಹೊಸ ಪಿಂಚಣಿ ಮತ್ತು ಹಳೆ ಪಿಂಚಣಿ ಪರಿಷ್ಕರಿಸಲು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ವಿಷಯ ಮಂಡಿಸಿದೆ. ಈ ಹಿಂದೆ ಯಾವ ರೀತಿ ಇತ್ತೋ ಅದೇ ಮಾದರಿಯಲ್ಲೇ ಪಿಂಚಣಿಯನ್ನು ಮುಂದುವರಿಸಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಸರ್ಕಾರಿ ನೌಕರರ ಹೊಸ ಪಿಂಚಣಿ ಮತ್ತು ಹಳೇ ಪಿಂಚಣಿಗಳನ್ನು ಪರಿಷ್ಕರಿಸಲು ಲೋಕಸಭೆಯಲ್ಲಿ ಮಂಡಿಸಿರುವ ಕೇಂದ್ರ ಸರ್ಕಾರ ಧೋರಣೆ ಖಂಡಿಸಿ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರು ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ನಿವೃತ್ತ ನೌಕರರ ಸಂಘದ ಆವರಣದಲ್ಲಿ ಸೇರಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡೀಸಿ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.
ಕಳೆದ ಜು.25ರಂದು ಸರ್ಕಾರಿ ನೌಕರರ ಹೊಸ ಪಿಂಚಣಿ ಮತ್ತು ಹಳೆ ಪಿಂಚಣಿ ಪರಿಷ್ಕರಿಸಲು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ವಿಷಯ ಮಂಡಿಸಿದೆ. ಈ ಹಿಂದೆ ಯಾವ ರೀತಿ ಇತ್ತೋ ಅದೇ ಮಾದರಿಯಲ್ಲೇ ಪಿಂಚಣಿಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ನಿವೃತ್ತ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಕೆ.ಸಿ.ಶಿವಲಿಂಗಯ್ಯ, ರಾಮೇಗೌಡ, ತಿಮ್ಮಯ್ಯ, ಕೆಂಪಯ್ಯ, ಅಂಕೇಗೌಡ, ನರಸಿಂಹೇಗೌಡ, ರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.
31ರಂದು ವಿಚಾರಗೋಷ್ಠಿಮಳವಳ್ಳಿ:
ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಜುಲೈ 31ರಂದು ಜಾಗೃತ ಕರ್ನಾಟಕ ಸಂಸ್ಥೆಯು ಕೃಷಿ ಪ್ರಧಾನ ಮಂಡ್ಯ ಜಿಲ್ಲೆಯ ಅಭಿವೃದ್ಧಿ ಮತ್ತು ಅದನ್ನು ಸಾಧಿಸುವುದು ಹೇಗೆ ಎಂಬ ವಿಷಯದಡಿ ವಿಚಾರಗೋಷ್ಠಿ ಆಯೋಜಿಸಿದೆ.ಗ್ರಾಮದ ಸುಲ್ತಾನ್ ರಸ್ತೆಯ ಭತ್ತ ವೈವಿಧ್ಯ ಕೇಂದ್ರದಲ್ಲಿ ಜು.31ರಂದು ಬೆಳಗ್ಗೆ 11 ಗಂಟೆಗೆ ನಡೆಯುವ ವಿಚಾರಗೋಷ್ಠಿಯಲ್ಲಿ ಗ್ರಾಮ ಮತ್ತು ಕೃಷಿ ಪ್ರಧಾನವಾದ ಮಂಡ್ಯದ ಅಭಿವೃದ್ಧಿಗೆ ಹೊಸ ದಾರಿಗಳು ಎಂಬ ವಿಚಾರವನ್ನು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಸಂಘಟನೆ ಮತ್ತು ಅಭಿವೃದ್ಧಿ ರಾಜಕೀಯದ ಹೊಸ ದಾರಿಗಳು ಎಂಬ ವಿಚಾರವನ್ನು ಜಾಗೃತ ಕರ್ನಾಟಕದ ರಾಜ್ಯ ಸಂಚಾಲಕ ಎಚ್.ವಿ.ವಾಸು ಮಂಡಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಾಗನೂರಿನ ಮಹಿಳಾ ಕೃಷಿಕರಾದ ಪಿ.ಆರ್.ಕಿರಣ ಪಾಲ್ತಾಡಿ ವಹಿಸಲಿದ್ದಾರೆ.