ಸಾರಾಂಶ
ಮಂಡ್ಯ ಜಿಲ್ಲೆಯ ಮೊದಲ ತ್ರೈಮಾಸಿಕದಲ್ಲಿ ಆದ್ಯತಾ ವಲಯದ ಸಾಲ ವಿತರಣೆಯಲ್ಲಿ ೩೩೪೬ ಕೋಟಿ ರು. (ಶೇ.೧೦೭) ಪ್ರಗತಿ ಸಾದಿಸಿದ್ದು, ಕೃಷಿ ವಲಯದಲ್ಲಿ ೨೪೬೪ ಕೋಟಿ ರು., ಕೈಗಾರಿಕಾ ವಲಯ ದಲ್ಲಿ ೬೫೨ ಕೋಟಿ ರು. ಇತರೆ ಸೇವಾ ವಲಯದಲ್ಲಿ ೨೩೦ ಕೋಟಿ ರು. ಸಾಲವನ್ನು ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯ ಸರ್ಕಾರದ ಚಾಲೆಂಜಿಂಗ್ ಫಂಡ್ ಅಭಿಯಾನದಲ್ಲಿ ಮಂಡ್ಯ ಜಿಲ್ಲೆಯು ಮೊದಲ ಸ್ಥಾನ ಪಡೆದಿದ್ದು, ಇದಕ್ಕೆ ಸಹಕರಿಸಿದ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಹಾಗೂ ಎಲ್ಲಾ ಬ್ಯಾಂಕ್‌ನ ಅಧಿಕಾರಿಗಳಿಗೆ ಜಿಪಂ ಸಿಇಒ ಕೆ.ಆರ್.ನಂದಿನಿ ಅಭಿನಂದನೆ ಸಲ್ಲಿಸಿದರು.ಬ್ಯಾಂಕ್ ಆಫ್ ಬರೋಡಾ ಆರ್‌ಸೆಟಿ ಸಭಾಂಗಣದಲ್ಲಿ ನಡೆದ ಡಿಸಿಸಿ- ಡಿಎಲ್‌ಆರ್‌ಸಿ ಬ್ಯಾಂಕ್‌ಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ೨೦೨೫-೨೬ ನೇ ಸಾಲಿನ ಮೊದಲ ತ್ರೈ ಮಾಸಿಕದಲ್ಲಿ ಶೇ,೧೦೭ ಪ್ರಗತಿ ಸಾಧಿಸಿರುವುದು ಉತ್ತಮವಾಗಿದೆ. ಮುಂದಿನ ದಿನದಲ್ಲಿ ಇದೇ ರೀತಿ ಪ್ರಗತಿ ಸಾಧಿಸಬೇಕು. ಮುಂದಿನ ತ್ರೈ ಮಾಸಿಕದಲ್ಲೂ ಸಾಲ ವಿತರಣೆಯಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಬೇಕು ಎಂದು ನಿರ್ದೇಶಿಸಿದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಅರುಣ್‌ಕುಮಾರ್ ಮಾತನಾಡಿ, ೨೦೨೫ -೨೬ ನೇ ಸಾಲಿನಲ್ಲಿ ಆದ್ಯತಾ ವಲಯದಲ್ಲಿ ಎಲ್ಲಾ ಬ್ಯಾಂಕುಗಳ ಪ್ರಗತಿಯನ್ನು ತಿಳಿಸಿದರಲ್ಲದೆ, ಜಿಲ್ಲೆಯ ಮೊದಲ ತ್ರೈಮಾಸಿಕದಲ್ಲಿ ಆದ್ಯತಾ ವಲಯದ ಸಾಲ ವಿತರಣೆಯಲ್ಲಿ ೩೩೪೬ ಕೋಟಿ ರು. (ಶೇ.೧೦೭) ಪ್ರಗತಿ ಸಾದಿಸಿದ್ದು, ಕೃಷಿ ವಲಯದಲ್ಲಿ ೨೪೬೪ ಕೋಟಿ ರು., ಕೈಗಾರಿಕಾ ವಲಯ ದಲ್ಲಿ ೬೫೨ ಕೋಟಿ ರು. ಇತರೆ ಸೇವಾ ವಲಯದಲ್ಲಿ ೨೩೦ ಕೋಟಿ ರು. ಸಾಲವನ್ನು ನೀಡಲಾಗಿದೆ. ಸರ್ಕಾರದ ವಿವಿಧ ಇಲಾಖೆಗಳ ಸಾಲದ ಯೋಜನೆಗೆ ನೀಡಿರುವ ಸಾಲದ ಬಗ್ಗೆ ಮಾಹಿತಿ ನೀಡಿದರು.ಆರ್‌ಬಿಐ ವ್ಯವಸ್ಥಾಪಕಿ ವಿಜಯಶ್ರೀ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಅರುಣ್‌ಕುಮಾರ್, ನಬಾರ್ಡ್ ವ್ಯವಸ್ಥಾಪಕಿ ಹರ್ಷಿತಾ, ಎಲ್ಲಾ ಬ್ಯಾಂಕಿನ ಅಧಿಕಾರಿಗಳು ಹಾಗೂ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದರು.