ಮಂಡ್ಯ ನಗರದ ಮರಿಗೌಡ ಬಡಾವಣೆಯಲ್ಲಿ ಆಯೋಜಿಸಲಾಗಿದ್ದ ಗಣೇಶೋತ್ಸವ ಸ್ವಾಗತ ಸಮಾರಂಭದಲ್ಲಿ ಗಣೇಶ ವಿಗ್ರಹದ ಮುಂದೆ ಅಳವಡಿಸಿದ್ದ ಪರದೆಯನ್ನು ಶಾಸಕ ಪಿ.ರವಿಕುಮಾರ್ ಎಳೆಯುವ ಸಮಯದಲ್ಲಿ ಪರದೆ ಜೊತೆಯಲ್ಲೇ ಮರದಪಟ್ಟಿ ಶಾಸಕರ ತಲೆಯ ಮೇಲೆ ಬಿದ್ದಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ನಗರದಲ್ಲಿ ಆಯೋಜಿಸಿದ್ದ ಗಣೇಶೋತ್ಸವ ಸ್ವಾಗತ ಸಮಾರಂಭದಲ್ಲಿ ಶಾಸಕ ಪಿ.ರವಿಕುಮಾರ್ ತಲೆಗೆ ಮರದಪಟ್ಟಿಯಲ್ಲಿದ್ದ ಮೊಳೆಯೊಂದು ಹೊಡೆದು ಗಾಯವಾಗಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.ನಗರದ ಮರಿಗೌಡ ಬಡಾವಣೆಯಲ್ಲಿ ಆಯೋಜಿಸಲಾಗಿದ್ದ ಗಣೇಶೋತ್ಸವ ಸ್ವಾಗತ ಸಮಾರಂಭದಲ್ಲಿ ಗಣೇಶ ವಿಗ್ರಹದ ಮುಂದೆ ಅಳವಡಿಸಿದ್ದ ಪರದೆಯನ್ನು ಶಾಸಕ ಪಿ.ರವಿಕುಮಾರ್ ಎಳೆಯುವ ಸಮಯದಲ್ಲಿ ಪರದೆ ಜೊತೆಯಲ್ಲೇ ಮರದಪಟ್ಟಿ ಶಾಸಕರ ತಲೆಯ ಮೇಲೆ ಬಿದ್ದಿದೆ. ಈ ಸಮಯದಲ್ಲಿ ಅವರ ಹಣೆಗೆ ಮರದಪಟ್ಟಿಯಲ್ಲಿದ್ದ ಮೊಳೆ ಹೊಡೆದ ಪರಿಣಾಮ ಗಾಯಗೊಂಡರು. ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ ಆಸ್ಪತ್ರೆಗೆ ತೆರಳಿ ಶಾಸಕರ ಆರೋಗ್ಯಸ್ಥಿತಿ ವಿಚಾರಿಸಿದರು. ಶಾಸಕ ಪಿ.ರವಿಕುಮಾರ್ ಚೇತರಿಸಿಕೊಂಡು ಕೆಲ ಸಮಯದಲ್ಲೇ ಆಸ್ಪತ್ರೆಯಿಂದ ಬೆಂಗಳೂರಿಗೆ ತೆರಳಿದರು. ತೆರಳುವ ಮುನ್ನ ಯಾರೂ ಗಾಬರಿಯಾಗುವ ಅಗತ್ಯವಿಲ್ಲ. ನಾನು ಚೆನ್ನಾಗಿದ್ದೇನೆ. ಸ್ವಲ್ಪ ಸುಸ್ತಾಗುತ್ತಿದೆ. ಐದು ದಿನ ವಿಶ್ರಾಂತಿ ಪಡೆದು ಬರುತ್ತೇನೆ. ಇದರಲ್ಲಿ ಆಯೋಜಕರದ್ದೂ ತಪ್ಪಿಲ್ಲ. ಪರದೆ ಎಳೆದಾಗ ಅದರೊಂದಿಗೆ ಬಂದ ಕಬ್ಬಿಣದ ಪೀಸ್ ಹೊಡೆದು ಗಾಯವಾಗಿದೆ ಅಷ್ಟೇ ಎಂದು ಹೇಳಿದರು.ದಸಂಸದಿಂದ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷರಿಗೆ ಅಭಿನಂದನೆ
ಮದ್ದೂರು: ತಾಲೂಕಿನ ಕೊಪ್ಪದಲ್ಲಿ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕುಮಾರ್ ಕೊಪ್ಪ ಅವರನ್ನು ಅಭಿನಂದಿಸಲಾಯಿತು.ದಸಂಸ ರಾಜ್ಯ ಸಂಘಟನಾ ಸಂಚಾಲಕ ಕೆಂಪಯ್ಯ ಸಾಗ್ಯ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದಲಿತ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಹಿತ ಕಾಯುವಂತ ಕೆಲಸವನ್ನು ಮಾಡಿಕೊಂಡು ಬರುತ್ತಿದೆ ಎಂದರು.ಮಂಡ್ಯ ಜಿಲ್ಲೆಯಲ್ಲಿ ದಲಿತ ವರ್ಗದವರಿಗೆ ರಾಜಕೀಯದಲ್ಲಿ ಉನ್ನತ ಸ್ಥಾನವನ್ನು ನೀಡುವ ಮೂಲಕ ಕುಮಾರ್ ಕೊಪ್ಪ ಅವರನ್ನು ಪಕ್ಷದ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಕುಮಾರ್ ಕೊಪ್ಪ ಅವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಸಂಘಟಿಸಬೇಕು ಎಂದರು.ಈ ವೇಳೆ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಟಿ.ಶಿವಕುಮಾರ್, ನಿರ್ದೇಶಕ ಕೆ.ಜೆ.ಗೋವಿಂದ ರಾಜ್, ನಿವೃತ್ತ ಉಪನ್ಯಾಸಕ ಕೆ.ಬಿ.ರಾಮಕೃಷ್ಣ, ಅಹಿಂದ ಸಂರಕ್ಷಣಾ ವೇದಿಕೆ ಸಂಘಟನಾ ಕಾರ್ಯದರ್ಶಿ ಶಶಿಕುಮಾರ್ ಪಿ, ಮಳವಳ್ಳಿ ಶಿವಕುಮಾರ್, ಗ್ರಾಪಂ ಮಾಜಿ ಉಪಾಧ್ಯಕ್ಷ ರಾಮಕೃಷ್ಣ, ಡಿಸಿಸಿ ಬ್ಯಾಂಕ್ ರಾಮಯ್ಯ, ಚನ್ನಪಟ್ಟಣ ಪ್ರಸನ್ನ, ಶ್ರೀನಿವಾಸ್, ಯೋಗಾನಂದ, ಹಾಗೂ ಇತರರು ಇದ್ದರು.