ಸಾರಾಂಶ
ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಂಜುಳ ರಂಗ ಸ್ವಾಮಿಯವರನ್ನು ಸದಸ್ಯರು ಅಭಿನಂದಿಸಿದರು.
ಕನ್ನಡಪ್ರಭವಾರ್ತೆ ಚಳ್ಳಕೆರೆ
ತಾಲೂಕಿನ ನಗರಂಗೆರೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಲಕ್ಷ್ಮಿಪುರದ ಗ್ರಾಪಂ ಸದಸ್ಯೆ ಮಂಗಳ ರಂಗಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.ಪ್ರಸ್ತುತ ಗ್ರಾಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ಮೀಸಲಾತಿ ಹೊಂದಿದ್ದು, ಕೇವಲ 15 ತಿಂಗಳ ಅವಧಿಗೆ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಚುನಾಯಿತ ಮಹಿಳಾ ಸದಸ್ಯರಿಗೆ ಅಧ್ಯಕ್ಷರನ್ನು ಆಯ್ಕೆ ಮಾಡುವ ವಿಚಾರವಾಗಿ ನಿರಂತರ ಚರ್ಚೆ ಆರಂಭವಾಗಿತ್ತು. ಅಂತಿಮವಾಗಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರೊಂದಿಗೆ ಚರ್ಚಿಸಿ ಅವಿರೋಧವಾಗಿ ಅಧ್ಯಕ್ಷರನ್ನು ಆಯ್ಕೆ ಮಾಡುವ ನಿರ್ಧಾರವನ್ನು ಗ್ರಾಮ ಪಂಚಾಯಿತಿ ಸದಸ್ಯರು ಕೈಗೊಂಡಿದ್ದರು. ಲಕ್ಷ್ಮಿಪುರದ ಗ್ರಾಪಂ ಸದಸ್ಯೆ ಮಂಗಳ ರಂಗಸ್ವಾಮಿ ಅಧ್ಯಕ್ಷೆಯಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಈ ವೇಳೆ ಸಭೆಯಲ್ಲಿ ಹಾಜರಿದ್ದ 22 ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಮಂಗಳ ರಂಗಸ್ವಾಮಿ ಒಂದು ಹೆಸರು ಮಾತ್ರ ಸೂಚಿಸಿ ಅವಿರೋಧವಾಗಿ ಆಯ್ಕೆ ಮಾಡುವಲ್ಲಿ ಎಲ್ಲರೂ ಸಹಕರಿಸಿದರು.
ಪಂಚಾಯಿತಿ ಸದಸ್ಯರಾದ ಎಂ.ಹಿದಾಯಿತ್‌ವುಲ್ಲಾ, ಅಂಗಡಿರಮೇಶ್, ರ‍್ರಮ್ಮ ಓಬಯ್ಯ, ಎಂ.ಕುಮಾರಸ್ವಾಮಿ, ರಾಜು, ಎನ್.ಮಂಜುನಾಥ, ಶಿವಲಿಂಗಮ್ಮ, ಲಕ್ಷ್ಮಿದೇವಿ, ಶ್ರೀಶೈಲ, ಷಣ್ಮುಖಪ್ಪ, ಬಿ.ಸಿ.ಸತೀಶ್‌ಕುಮಾರ್, ನವೀನ್‌ಕುಮಾರ್, ಶ್ರೀನಿವಾಸ್, ಗೌರಮ್ಮ, ದ್ಯಾಮಲಾಂಭ, ರೇಣುಕಮ್ಮ, ನಾಗವೇಣಿ, ಪ್ರಭು, ವಿಜಯಮ್ಮ, ಪಾತಲಿಂಗಪ್ಪ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ರಾಮಚಂದ್ರಪ್ಪ, ಕಾರ್ಯದರ್ಶಿ ಮಂಜುಳಾ, ನಿರಂಜನ್‌ಮೂರ್ತಿ ಹಾಗೂ ಪಂಚಾಯಿತಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ತಹಸೀಲ್ದಾರ್ ರೇಹಾನ್‌ಪಾಷ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.