ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕಳೆದ 30 ವರ್ಷಗಳಿಂದ ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಸೇವೆ ತೊಡಗಿರುವ ಮಂಗಲ ಎಂ.ಯೋಗೀಶ್ ಅವರನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 50 ವರ್ಷಗಳ ಸುವರ್ಣ ಮಹೋತ್ಸವದ ಅಂಗವಾಗಿ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಪರಿಸರ ಸಂರಕ್ಷಣೆಯಲ್ಲಿ ಗಣನೀಯ ಸೇವೆ ಪರಿಗಣಿಸಿ ಅ.28ರಂದು ನಗರದ ಮಂಡ್ಯ ವಿಶ್ವವಿದ್ಯಾನಿಲಯದ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿ ದೆಸೆಯಲ್ಲಿ ಎನ್ಎಸ್ಎಸ್ ಮೂಲಕ ಜನರಿಗೆ ಪರಿಸರ ಪ್ರಜ್ಞೆ ಮೂಡಿಸಿ, ನೀರು ಬಳಕೆದಾರರ ಸಹಕಾರ ಸಂಘಗಳ ಮೂಲಕ 1998ರಿಂದಲೂ ನೀರು ನಿರ್ವಹಣೆಯಲ್ಲಿ ಕೆಲಸ ಮಾಡಿ, ಎನ್‌ಎಸ್‌ಎಸ್ ಜಿಲ್ಲಾ ಸಂಯೋಜಕರಾಗಿ, ಕಾವೇರಿ ನೀರಾವರಿ ನಿಗಮ ಮತ್ತು ಮೈಸೂರು ವಿವಿ ವ್ಯಾಪ್ತಿಯ ಎನ್ಎಸ್ಎಸ್ ಕಾರ್ಯ ಚಟುವಟಿಕೆಗಳಲ್ಲಿ ಜಲ ಸಂರಕ್ಷಣೆ ಕಾರ್ಯಗಳಲ್ಲಿ ತೊಡಗಿದ್ದಾರೆ.ಪರಿಸರ ರೂರಲ್ ಡೆವಲಪ್ ಮೆಂಟ್ ಸೊಸೈಟಿ ಸಂಸ್ಥಾಪಕ ಅಧ್ಯಕ್ಷರಾಗಿ ಸಸಿ ನೆಡುವುದು, ಪರಿಸರ ಮಿತ್ರ ಶಾಲೆಗಳ ಅನುಷ್ಠಾನ, ಪರಿಸರ ಪ್ರವಾಸ, ಪರಿಸರ ನಡೆಗೆಗಳ ಮೂಲಕ ಜಿಲ್ಲೆಯ ವಿವಿಧ ಅರಣ್ಯ ಪ್ರದೇಶಗಳಲ್ಲಿ ಜಯಂತಿ, ಯುವ ಜನರಿಗೆ ಸಸ್ಯ ಪ್ರಭೇದಗಳ ಪರಿಚಯಿಸುವಿಕೆ, ಪರಿಸರ ದಿನಗಳಂದು ವಿದ್ಯಾರ್ಥಿಗಳು, ಯುವಕರು, ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳ ಮೂಲಕ ಪರಿಸರ ಪ್ರಜ್ಞೆ ಮೂಡಿಸುತ್ತಿದ್ದಾರೆ.
ಪಕ್ಷಿ ವೀಕ್ಷಣೆ, ಶ್ರಮದಾನ, ಜಲ ಮೂಲಗಳ ಸಂರಕ್ಷಣೆ, ಕಳೆದ 30 ವರ್ಷಗಳಿಂದಲೂ ಪರಿಸರ ಸಂರಕ್ಷಣೆ, ನೀರು ನಿರ್ವಹಣೆ ಜೊತೆಗೆ ಮಿಮ್ಸ್ ಬಳಿ ರೋಗಿಗಳಿಗೆ ಪ್ಲಾಸ್ಟಿಕ್ ಬಳಕೆಯಿಂದ ದುಷ್ಪರಿಣಾಮ ಕುರಿತು ಜಾಗೃತಿ, ಆಹಾರದಲ್ಲಿ ಪ್ಲಾಸ್ಟಿಕ್ ಪದಾರ್ಥಗಳ ಬಳಕೆ ನಿಷೇಧದ ಬಗ್ಗೆ ತಿಳಿವಳಿಕೆ ನೀಡುತ್ತಿದ್ದಾರೆ.ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸಲು ಭೂಮಿಗೆ ಹಸಿರು ಹೊದಿಕೆ ಕಾಯಕವನ್ನು ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಭಾಗಿತ್ವ, ಅರಣ್ಯ ಇಲಾಖೆ ನಗರಸಭೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಎನ್ಎಸ್ಎಸ್ ಘಟಕಗಳು ಹಾಗೂ ಗ್ರಾಪಂ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮೂಲಕ ಸಾವಿರಾರು ಗಿಡಗಳ ನೆಟ್ಟು ಪೋಷಣೆಯಲ್ಲಿ ತೊಡಗಿರುವುದರಿಂದ ಜಿಲ್ಲಾಡಳಿತ ಮಂಗಲ ಎಂ.ಯೋಗೇಶ್ ಅವರನ್ನು ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.
;Resize=(128,128))
;Resize=(128,128))
;Resize=(128,128))