ಮಂಗಳೂರು: ಕೇರಳ ಮತ್ತು ಕರ್ನಾಟಕದಲ್ಲಿ 40 ವರ್ಷಗಳ ಭವ್ಯ ಪರಂಪರೆ ಹೊಂದಿರುವ ವಿಶ್ವಾಸಾರ್ಹ ಆಭರಣ ಸಂಸ್ಥೆ ಬಿಂದು ಜ್ಯುವೆಲ್ಲರಿ ತನ್ನ ಮಂಗಳೂರಿನ ಶೋ ರೂಂನಲ್ಲಿ ತಾಯಂದಿರ ದಿನವನ್ನು ಸಡಗರದಿಂದ ಆಚರಿಸಿತು.ಮಂಗಳೂರು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ಮಾಜಿ ನಾಯಕ ಹಾಗೂ ಕಾರ್ಪೊರೇಟರ್ ನವೀನ್ ಆರ್. ಡಿ ಸೋಜಾ ಉದ್ಘಾಟಿಸಿ ಮಾತನಾಡಿ, ಸಮಾಜ ಮತ್ತು ಗ್ರಾಹಕರೊಂದಿಗೆ ಬಿಂದು ಜ್ಯುವೆಲ್ಲರಿ ಹೊಂದಿರುವ ಅವಿನಾಭಾವ ಸಂಬಂಧವನ್ನು ಶ್ಲಾಘಿಸಿದರು.
ಸಾಮಾಜಿಕ ಕಾರ್ಯಕರ್ತೆ ಕಾತ್ಯಾಯಿನಿ ರಾವ್, ಮೇಕಪ್ ಕಲಾವಿದೆ ಮಮತಾ ಎಸ್., ಪ್ರಾಣಿ ಪ್ರೇಮಿ ರಜನಿ ದಾಮೋದರ್ ಶೆಟ್ಟಿ ಹಾಗೂ ಗ್ರಾಹಕರಾದ ನಿರ್ಮಲಾ ಕಾಮತ್, ಆಯೇಷಾ ಆರಿಫ್ ಭಾವ ಮತ್ತು ಉಷಾ ರಾಧಾಕೃಷ್ಣ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಅತಿಥಿಗಳಿಗೆ ವಿಶೇಷ ಉಡುಗೊರೆ ಹಾಗೂ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.ಸಾಮಾಜಿಕ ಕಾಳಜಿಯ ಭಾಗವಾಗಿ, ನಗರದ ನೈರ್ಮಲ್ಯ ಕಾಪಾಡುವ ಎಂಸಿಸಿ ಪೌರಕಾರ್ಮಿಕರಿಗೆ ಉಡುಗೊರೆ ವಿತರಿಸಿ ಅವರ ಸೇವೆಯನ್ನು ಸ್ಮರಿಸಲಾಯಿತು.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಅಜಿತೇಶ್ ಕೆ.ವಿ. ಮತ್ತು ಅಭಿಲಾಷ್ ಕೆ.ವಿ. ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಮ್ಯಾನೇಜರ್ ಸುಹಾಸ್ ಹಾಗೂ ಅಭಿಷೇಕ್ ಆಳ್ವ ಇದ್ದರು. ರಶ್ಮಿ ಕಿರಣ್ ನಿರೂಪಿಸಿದರು.