ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 48ನೇ ಕಂಕನಾಡಿ ವಾರ್ಡಿನ ವೆಲೆನ್ಸಿಯಾ ಸೈಮನೆ ಲೇನ್ ರಸ್ತೆಯ ಕಾನ್ವೆಂಟ್‌ನಿಂದ ಚಿತ್ತರಂಜನ್‌ರ ಮನೆಯವರೆಗೆ 30 ಲಕ್ಷ ರು. ವಿಶೇಷ ಅನುದಾನದಲ್ಲಿ ಮುಚ್ಚು ಚರಂಡಿ ನಿರ್ಮಾಣ ಮತ್ತು ರಸ್ತೆಯ ಅಭಿವೃದ್ಧಿ ಕಾಮಗಾರಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಗುದ್ದಲಿ ಪೂಜೆ ನಡೆಯಿತು.

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 48ನೇ ಕಂಕನಾಡಿ ವಾರ್ಡಿನ ವೆಲೆನ್ಸಿಯಾ ಸೈಮನೆ ಲೇನ್ ರಸ್ತೆಯ ಕಾನ್ವೆಂಟ್‌ನಿಂದ ಚಿತ್ತರಂಜನ್‌ರ ಮನೆಯವರೆಗೆ 30 ಲಕ್ಷ ರು. ವಿಶೇಷ ಅನುದಾನದಲ್ಲಿ ಮುಚ್ಚು ಚರಂಡಿ ನಿರ್ಮಾಣ ಮತ್ತು ರಸ್ತೆಯ ಅಭಿವೃದ್ಧಿ ಕಾಮಗಾರಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಗುದ್ದಲಿ ಪೂಜೆ ನಡೆಯಿತು.ಕಾಮತ್‌ ಮಾತನಾಡಿ, ಈ ಕಾಮಗಾರಿಯ ಬಗ್ಗೆ ಇಲ್ಲಿನ ನಿಕಟಪೂರ್ವ ಮ.ನ.ಪಾ. ಸದಸ್ಯರಾದ ಸಂದೀಪ್ ಗರೋಡಿಯವರು ವಿಶೇಷ ಪ್ರಯತ್ನ ಪಟ್ಟಿದ್ದಾರೆ ಎಂದರು. ಪ್ರಮುಖರಾದ ಚಿತ್ತರಂಜನ್, ಪ್ರಕಾಶ್ ಗರೋಡಿ, ಮನ್ವಿತ್, ಪ್ರವೀಣ್ ನಿಡ್ಡೇಲ್, ಉದಯ್ ಕುಮಾರ್, ನಾರಾಯಣ, ಜಗದೀಶ್ ಪಂಪವೆಲ್, ಯೋಗೀಶ್ ಆಚಾರ್ಯ, ರಜನೀಶ್ ಗರೋಡಿ ಮತ್ತಿತರರು ಇದ್ದರು.