ಸರ್ಫಿಂಗ್ ಮತ್ತು ಸ್ಟ್ಯಾಂಡ್-ಅಪ್ ಪ್ಯಾಡ್ಲಿಂಗ್ ಆಡಳಿತ ಮಂಡಳಿ ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ ‘ಎನ್‌ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್ 2026’ರ ಏಳನೇ ಆವೃತ್ತಿಯನ್ನು ಮೇ 29 ರಿಂದ 31ರವರೆಗೆ ಮಂಗಳೂರಿನ ತಣ್ಣೀರುಬಾವಿ ಬ್ಲೂ ಬೇ ಇಕೋ ಬೀಚ್‌ನಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಮಂಗಳೂರು: ಸರ್ಫಿಂಗ್ ಮತ್ತು ಸ್ಟ್ಯಾಂಡ್-ಅಪ್ ಪ್ಯಾಡ್ಲಿಂಗ್ ಆಡಳಿತ ಮಂಡಳಿ ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ ‘ಎನ್‌ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್ 2026’ರ ಏಳನೇ ಆವೃತ್ತಿಯನ್ನು ಮೇ 29 ರಿಂದ 31ರವರೆಗೆ ಮಂಗಳೂರಿನ ತಣ್ಣೀರುಬಾವಿ ಬ್ಲೂ ಬೇ ಇಕೋ ಬೀಚ್‌ನಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ದ.ಕ.ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಸೋಮವಾರ ಜಿ.ಪಂ. ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಯುವಜನ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಫಿಂಗ್ ಅಸೋಸಿಯೇಷನ್, ಸರ್ಫಿಂಗ್ ಫೆಡರೇಷನ್, ನವ ಮಂಗಳೂರು ಬಂದರು ಪ್ರಾಧಿಕಾರ ಸಹಯೋಗದಲ್ಲಿ ಮಂಗಳೂರಿನ ತಣ್ಣೀರುಬಾವಿ ಬ್ಲೂ ಬೇ ಇಕೋ ಬೀಚ್‌ನಲ್ಲಿ ಮೇ 29ರಿಂದ 31ರ ವರೆಗೆ ನಡೆಯಲಿರುವ ಎನ್‌ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಮಂಗಳೂರನ್ನು ಸರ್ಫಿಂಗ್, ಕ್ರೀಡೆಯಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿ ತೆರೆದಿಡಲಿದೆ ಎಂದರು.ಮಂಗಳೂರು ಸರ್ಫಿಂಗ್‌ಗೆ ಸೂಕ್ತವಾದ ಪ್ರದೇಶ. 2026ರ ಐಚಿ-ನಗೊಯಾ ಏಷಿಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ಇಲ್ಲಿನ ಸ್ಪರ್ಧಿಗಳು ಪಡೆಯುವ ಅಂಕಗಳು ಸಹಕರಿಯಾಗಲಿದೆ. ಆದ್ದರಿಂದ ಅಲ್ಲಿ ಭಾಗವಹಿಸುವ ಹೆಚ್ಚಿನ ಸ್ಪರ್ಧಿಗಳು ಇಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ರಾಷ್ಟ್ರ ಮಟ್ಟದ ಚಾಂಪಿಯನ್‌ಗಳು ಕೂಡ ಇಲ್ಲಿ ಭಾಗವಹಿಸುವ ತಯಾರಿ ನಡೆಯುತ್ತಿದೆ ಎಂದರು.
7 ವರ್ಷಗಳಿಂದ ಕರ್ನಾಟಕ ಸರ್ಕಾರ ಪ್ರೋತ್ಸಾಹ ನೀಡುತ್ತಿದ್ದು, ಚಾಂಪಿಯನ್‌ಶಿಪ್ ಅನ್ನು ನ್ಯೂ ಮಂಗಳೂರು ಬಂದರು ಪ್ರಾಧಿಕಾರ ಟೈಟಲ್ ಪ್ರಾಯೋಜಿಸುತ್ತಿರುವುದು ಇದು ಸತತ ಮೂರನೇ ವರ್ಷದ್ದಾಗಿದೆ. ಸೈಕಲ್ ಅಗರಬತ್ತಿ ಮತ್ತು ಡಿಕನ್‌ಸ್ಟ್ರಕ್ಟ್ ಗೋಲ್ಡ್ ಕೂಡ ಪ್ರಾಯೋಜಕರಾಗಿದ್ದಾರೆ. ನಾರ್ದರ್ನ್ ಸ್ಕೈ ವೇದಿಕೆ ಪಾಲುದಾರರಾಗಿ ಭಾಗವಹಿಸುತ್ತದೆ. ಸ್ಪರ್ಧಿಗಳಿಗೆ 4 ಲಕ್ಷ ಮೊತ್ತದ ನಗದು ಬಹುಮಾನ ನೀಡಲಾಗುತ್ತದೆ ಎಂದು ಆಯೋಜಕರು ಮಾಹಿತಿ ನೀಡಿದರು.ಸರ್ಫಿಂಗ್ ಸ್ವಾಮಿ ಫೌಂಡೇಶನ್ ಅಧ್ಯಕ್ಷ ಧನಂಜಯ ಶೆಟ್ಟಿ, ಶ್ಯಾಮ್, ಧ್ರುವ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನರ್ವಾಡೆ ವಿನಾಯಕ್ ಕರ್ಭಾರಿ, ಮಂಗಳೂರು ಸಹಾಯಕ ಆಯುಕ್ತೆ ಮೀನಾಕ್ಷಿ ಆರ್ಯ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಪ್ರದೀಪ್ ಡಿಸೋಜಾ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ದಿಲೀಪ್ ಕುಮಾರ್ ಮತ್ತಿತರರು ಇದ್ದರು.